‘ಮುಂಜಾಗೃತೆಯಿಂದ ಏಡ್ಸ್ ತಡೆಗಟ್ಟಲು ಸಾಧ್ಯ’
'AIDS can be prevented through awareness'
ಸಿಂದಗಿ 04; ವಿಶ್ವವ್ಯಾಪಿ ಏಡ್ಸ ಹರಡಿರುವ ಬಗ್ಗೆ ಸಾಕಷ್ಟು ಮಾಹಿತಿ ಇದೆ ಇದನ್ನು ಮುಂದೆ ಹರಡದಂತೆ ಮುಂಜಾಗೃತ ವಹಿಸಬೇಕು. ಸಾರ್ವಜನಿಕರು ಕಟ್ಟುನಿಟ್ಟಿನ ಪಾಲನೆ ಮಾಡಿದ್ದಾಗ ಮಾತ್ರ ತಡೆಗಟ್ಟಲು ಸಾಧ್ಯ ಗೌರವಾನ್ವಿತ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು. ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕ ಸಾರ್ವಜನಿಕ ಆಸ್ಪತ್ರೆ, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರ ಆಶ್ರಯದಲ್ಲಿ "ವಿಶ್ವ ಏಡ್ಸ್ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಸ್ಯೆಗೊಳಗಾದ ವ್ಯಕ್ತಿಗಳಿಗೆ ಉಚಿತ ಸಲಹೆ ನೀಡಿ ಕಾನೂನಿನ ಸಂಬಂಧಪಟ್ಟ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ. 2005 ರಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎನ್ನುವ ಕಾನೂನು ಇದೆ. ಕಾರಣ ಹೆಣ್ಣು ಮಕ್ಕಳು ಅಣ್ಣ ತಮ್ಮಂದಿರ ಸಂಬಂಧವನ್ನು ಉಳಿಸಿಕೊಂಡು ಆದಷ್ಟು ರಾಜಿ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದರು.
ತಾಲೂಕ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಎಮ್.ಪಿ.ಸಾಗರ ಉಪನ್ಯಾಸ ನೀಡಿ, ಪ್ರಪಂಚದಲ್ಲಿ ಸಾಕಷ್ಟು ಕಾಯಿಲೆಗಳಿಗೆ ವೈದಕೀಯ ಕ್ಷೇತ್ರಕ್ಕೆ ಸವಾಲೊಡ್ಡಿರುವ ಏಡ್ಸ ರೋಗವು ವಿಶ್ವದ ದಕ್ಷೀನ ಆಫ್ರಿಕಾ, ಇಂಡೋ ನೇಷಿಯಾ, ಕರ್ನಾಟಕದ ವಿಜಯಪುರ ಬೆಳಗಾವಿಯ ಸವದತ್ತಿ, ಬಾಗಲಕೋಟದಲಿ ಎತ್ರ ಮಟ್ಟದಲ್ಲಿ ಹೆಜ್ಜೆ ಇಟ್ಟಿದೆ. ಏಡ್ಸ ದಿನಾಚರಣೆ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುವ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಮಹತ್ವದ ಹೆಜ್ಜೆ ಇಟ್ಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌ಐವ್ಹಿ ಫಲಿತಾಂಶ ತಿಳಿಯುವುದಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯದಲ್ಲಿ ಫಲಿತಾಂಶ ಪ್ರಕಟಗೊಳುತ್ತದೆ. ಆಯಾ ಐಸಿ,ಟಿಸಿ ಕೇಂದ್ರಗಳ ಮೂಲಕ ಎಡ್ಸ ಸೋಂಕಿತರು ಪರೀಕ್ಷಿಸಿಕೊಂಡು ಆಪ್ತಸಮಾಚನೆ ಮಾಡಿಕೊಂಡು ಸರಿಯಾದ ಮಾತ್ರೆಗಳನ್ನು ಜೀವನ ಪರಿಯಂತರ ಉಪಯೋಗಿಸಿ ಅದಕ್ಕೆ ಬೇಕಾಗುವ ಆಹಾರ ಪದ್ದತಿಯನ್ನು ಅಳವಡಿಸಿಕೊಂಡು ಸಾಮಾಜಿಕವಾಗಿ ಜಿವನ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಾಣಾಧಿಕಾರಿ ಡಾ. ಎಂ.ಬಿ. ಬಿರಾದಾರ. ಎಸ್. ಎಸ್. ಹಂಗರಗಿ ವಕೀಲರು ಮಾತನಾಡಿದರು. ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರರಾವ ದೇಶಮುಖ, ವಕೀಲರ ಸಂಘದ ಅಧ್ಯಕ್ಷ ಎಸ್. ಬಿ. ಪಾಟೀಲ.ವಿ. ಎಲ್. ಮೊಪಗಾರ ವಕೀಲರು ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು. ಪ್ರಯೋಗಾಲಯದ ಕಿರಿಯ ತಾಂತ್ರಿಕಾಧಿಕಾರಿ ರಾಜು ನರಗೋದಿ ನಿರೂಪಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಕುಲಕರ್ಣಿ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 