ಉಗರಗೋಳ: 'ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು'

ಲೋಕದರ್ಶನ ವರದಿ

ಉಗರಗೋಳ 21:  ರಕ್ತದ ಕೊರೆತೆಯಿಂದ ಲಕ್ಷಾಂತರ ರೋಗಿಗಳು ಸಾಯುತ್ತಿದ್ದು, ಇದನ್ನು ಹೋಗಲಾಡಿಸಲು ಪ್ರತಿಯೊಂದು ಗ್ರಾಮದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಜನರಿಗೆ ಅರಿವು ಮೂಡಿಸಿ ರಕ್ತ ಸಂಗ್ರಹಿಸಿದರೆ ರಕ್ತದ ಕೊರೆತೆಯನ್ನು ನೀಗಿಸಬಹುದು ಎಂದು ಉಗರಗೋಳ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೃಷ್ಟಪ್ಪ ಆರ್ ಲಮಾಣಿ ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ-ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.  ತಾಲೂಕ ಪಂಚಾಯತ ಸವದತ್ತಿ ಮತ್ತು ಉಗರಗೋಳ ಗ್ರಾಮ ಪಂಚಾಯತ, ಹಾಗೂ ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೆಳಗಾವಿ ರಕ್ತ ಭಂಡಾರ ಬಿಮ್ಸ್ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸವದತ್ತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಕೋರಿದರು.

ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧಿಕಾರಿ ಡಾ. ರೀಯಾಜ ಮೆಣಸಿನಕಾಯಿ ಮಾತನಾಡಿ ನಮ್ಮ ದೇಶದಲ್ಲಿ ರಕ್ತದ ಕೊರೆತೆಯಿಂದ ಪ್ರತಿ 2 ಸೆಕೆಂಡಿಗೆ ಒಬ್ಬರು ರೋಗಿ ಸಾಯುತ್ತಿದ್ದು ಇಂದಿನ ಯುವಕರು, ಸಾರ್ವಜನಿಕರು, 18 ರಿಂದ ಸುಮಾರು 49 ವರ್ಷದ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ಹೇಳಿದರು.

ಡಾ. ಜ್ಯೋತಿ ಬಸರಿ ಮಾತನಾಡಿ  ಇಂದಿನ ಯುವಕರಾಗಲಿ, ಸಾರ್ವಜನಿಕರಾಗಲಿ ಸುಮಾರು 45 ಕೆಜಿ ಹೆಚ್ಚು ತೋಕ ಹೊಂದಿದ ಆರೋಗ್ಯವಂತರು ರಕ್ತದಾನ ಮಾಡುವದರಿಂದ ರಕ್ತದಲ್ಲಿನ ಕೊಬ್ಬನಾಂಶ ಕಡಿಮೆ ಆಗುವದರ ಜೊತೆಗೆ ಶೇ. 80 ಕ್ಕಿಂತ ಹೆಚ್ಚು ಹೃದಯಾಘಾತ ತಡೆ ಹಾಗೂ ಇತರೆ ಹಲವಾರು ರೋಗಗಳನ್ನು ತಡೆಯಬಹುದು ಎಂದು ಹೇಳಿದರು.

ಬೆಳಗಾವಿಯ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಡಾ, ರುಚಿತಾ,  ಪಿಡಿಓ ಮಹೇಶ ತೇಲಗಾರ, ಬಸವರಾಜ ಜಲಗರ, ಮಹಾಂತೇಶ ಮಲ್ಲಾಡ, ಪರಸನಗೌಡ ಪಾಟೀಲ, ಅಪ್ಪು ಟೇಲರ್, ಪ್ರಹ್ಲಾದ ಚಪ್ಪರಮನಿ, ಸಿದ್ದು ವಗ್ಗರ, ಸಂಗಮೇಶ ನರಗುಂದ, ವಾಯ್ ಕೆ ಕುಳ್ಳೂರ, ರಾಮು ಮಲ್ಲಾಡ, ಸತ್ಯಪ್ಪ ಮಾದರ, ನಾಗರಾಜ ಬಡೆಪ್ಪನವರ, ಈರಯ್ಯ ದಿಗಂಬರಮಠ, ಬೆಳಗಾವಿಯ ರಕ್ತ ಭಂಡಾರ ಬೀಮ್ಸ್ನ ಡಾಕ್ಟರ್ ಹಾಗೂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು. ಶಿಬಿರದಲ್ಲಿ 46 ಜನ ರಕ್ತದಾನಿಗಳು ರಕ್ತ ದಾನ ಮಾಡಿದರು. ಎ ವಾಯ್ ಮೂಗಬಸವ ಸ್ವಾಗತಿಸಿದರು, ಎನ್ ಎ ಪೂಜೆರ ನಿರೂಪಿಸಿ,  ಎ ಕೆ ಮುಲ್ಲಾ ವಂದಿಸಿದರು.