'ಸಂಗೊಳ್ಳಿ ರಾಯಣ್ಣರ ತತ್ವಾದರ್ಶಗಳನ್ನು ಯುವ ಜನತೆ ಪಾಲಿಸಲಿ'

ಮೂಡಲಗಿ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶ ಪರಕೀಯರ ದಾಸ್ಯದ ಸಂಕೋಲೆಯಲ್ಲಿ ಸಿಲುಕಿತ್ತು. ನಮಗೆ ಸ್ವಾತಂತ್ರ್ಯ ದೊರೆಯ ಬೇಕಾದರೆ ಮಹಾನ ನಾಯಕರ ಹೋರಾಟ ಹಾಗೂ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಗೆರಿಲ್ಲಾ ಮಾದರಿಯ ಹುಟ್ಟು ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಮಹಾನ ನಾಯಕರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಯುವ ಜನತೆಗೆ ಮಾರ್ಗದರ್ಶನ ನೀಡಬೇಕೆಂದು ತಾಲೂಕಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ಎಸ್ ಎಸ್ ಪಾಟೀಲ ನುಡಿದರು.

 ಅವರು ಪಟ್ಟಣದಲ್ಲಿ ಜರುಗಿದ 73 ನೇ ಸ್ವಾತಂತ್ರ್ಯ ದಿನಾಚರಣೆ ಸಂಗೋಳ್ಳಿ ರಾಯಣ್ಣರ 223 ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಯುವ ಜನತೆಗೆ ದೇಶ ಭಕ್ತಿ ಹಾಗೂ ಸ್ಪರ್ದಾತ್ಮಕ ಯುಗದಲ್ಲಿ ಯಶಸ್ವಿ ಜೀವನದ ಕುರಿತು ಮಾರ್ಗದರ್ಶನದ ಅವಶ್ಯಕತೆ ಇದೆ. ಶೋರ ಸಂಗೋಳ್ಳಿ ರಾಯಣ್ಣರಂತಹ ದೇಶ ಭಕ್ತರ ಕುರಿತು ಯುವ ಜನತೆಗೆ ಮನವರಿಕೆ ಮಾಡಿಕೊಡುವದು ಅವಶ್ಯಕವಾಗಿದೆ. ಶಿಕ್ಷಣ ಉದ್ಯೋಗ ಸಂಘಟನಾತ್ಮಕವಾಗಿ ಪ್ರತಿಯೊಬ್ಬರು ಬೆಳೆಯುವದು ಅಗತ್ಯವಾಗಿದ್ದು, ತಾಲೂಕಿನಲ್ಲಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆಯ ಪ್ರವಾಹಕ್ಕೆ ಸಿಲುಕಿರುವವರಿಗೆ ನೇರವಿನ ಹಸ್ತ ನೀಡಬೇಕೆಂದು ಹೇಳಿದರು.

 ಪುರಸಭೆ ಸದಸ್ಯ ಹಣಮಂತ ಗುಡ್ಲಮನಿ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಮ್ ಮಂಗಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳು ನಮಗೆ ಭಾವೈಕ್ಯತೆಯ ಸಂಕೇತವಾಗಿವೆ. ದೇಶ ಕಂಡ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ತತ್ವಾದರ್ಶಗಳು ನೀಜಕ್ಕೂ ಮಾದರಿಯಾಗಿದೆ. ರಾಜ್ಯದಲ್ಲಿ ಪ್ರವಾಹವು ಉಕ್ಕೇರಿದ್ದು ನಾಡಿನ ಜನತೆ ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲು ಕರೆ ನೀಡಿದರು.

  ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣರ ಮೆರವಣಿಗೆಯು ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಕೇಕ್ ಕತ್ತಿರುವ ಮೂಲಕ ಉದ್ಘಾಟನೆಗೊಂಡು ಕಲ್ಮೇಶ್ವರ, ರಾಣಿ ಚೆನ್ನಮ್ಮ, ಭೀರೆಶ್ವರ ಸರ್ಕಲ್ ಮುಖಾಂತರ ಗಾಂಧೀ ಚೌಕನಲ್ಲಿ ಧ್ವಜಾರೋಹಣದಲ್ಲಿ ಪಾಲ್ಗೊಂಡು ಮುಕ್ತಾಯಗೋಳಿಸಲಾಯಿತು.

  ಈ ಸಂದರ್ಭದಲ್ಲಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಗುಜನಟ್ಟಿ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಮತ್ತಿತರರು ಪಾಲ್ಗೊಂಡಿದ್ದರು.