ನವದೆಹಲಿ, ಜೂನ್ ೨೬, ದೇಶದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ವಿರುದ್ದ ಸಮರ ಮುಂದುವರಿದಿದೆ. ಲಸಿಕೆಯಿಲ್ಲದ ಈ ರೋಗಕ್ಕೆ ಸದ್ಯಕ್ಕೆ ನಮಗಿರುವ ಏಕೈಕ ಔಷಧ ಎಂದರೆ 'ಮುಖಗವುಸು' ಹಾಗೂ 'ಸಾಮಾಜಿಕ ಅಂತರ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.“ಆತ್ಮ ನಿರ್ಭರ್ ಉತ್ತರಪ್ರದೇಶ ರೋಜಗಾರ್ ಯೋಜನೆ” ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಆತ್ಮ ನಿರ್ಭರ ಅಭಿಯಾನ ಇಡೀ ಉತ್ತರ ಪ್ರದೇಶದ ಎಲ್ಲ ಭಾಗಗಳಿಗೂ ಪ್ರಯೋಜನಕಾರಿಯಾಗಲಿದೆ ಎಂದು ಭರವಸೆ ನೀಡಿದರು.ಲಾಕ್ ಡೌನ್ ನಿಂದಾಗಿ ತವರು ರಾಜ್ಯಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಅವರು ಇರುವಲ್ಲಿಯೇ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜಗಾರ್ ಯೋಜನೆ ಉದ್ದೇಶವಾಗಿದ್ದು, ಈ ಅಭಿಯಾನದಡಿ ಒಂದು ಕೋಟಿ ೨೫ ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು.
ಆತ್ಮ ನಿರ್ಭರ್ ಭಾರತ್ ಅಭಿಯಾನದಡಿ ಕೃಷಿ ವಲಯದಲ್ಲೇ ಅಂದಾಜು ಅಂದಾಜು ೩೫ ಲಕ್ಷ ಉದ್ಯೋಗಳನ್ನು ಸೃಷ್ಟಿಸಲಾಗುವುದು ಎಂದು ಅಂಕಿ ಅಂಶ ನೀಡಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯದ ವಲಸೆ ಕಾರ್ಮಿಕರ ಸಂಕಷ್ಟ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ್ ನಾಯಕತ್ವದ ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮವನ್ನು ಪ್ರಧಾನಿ ಶ್ಲಾಘಿಸಿದರು. ಕೊರೊನಾ ವೈರಸ್ ನಿಯಂತ್ರಸಲು ಯೋಗಿ ಅದಿತ್ಯನಾಥ್ ಸರ್ಕಾರ ಎಲ್ಲ ಸಂಪನ್ಮೂಲಗಳನ್ನು ಬಳಸುವ ಮೂಲಕ ಅದ್ಬುತ ಕಾರ್ಯ ಮಾಡುತ್ತಿದೆ. ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳದೆ ಮುಖ್ಯಮಂತ್ರಿ ಯೋಗಿ ಅದಿತ್ಯ ನಾಥ್ ರಾಜ್ಯದ ಜನರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.