ಲೋಕದರ್ಶನ ವರದಿ
ಮೂಡಲಗಿ 14: ಸಮುದಾಯ ಕಾಮಗಾರಿಗಳ ಮಹತ್ವಾಕಾಂಕ್ಷೆ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನದಿಂದ ಗ್ರಾಮೀಣ ಪ್ರದೇಶ ಅಭಿವೃದ್ದಿ ಸಾಧ್ಯವಿದ್ದು ದುಡಿಯುವ ಕೈಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ ಎಂದು ತಾಲೂಕ್ ಪಂಚಾಯತ ಸಂಯೋಜಕ ಶಂಕರ ಗುಜನಟ್ಟಿ ಹೇಳಿದರು.
ಅವರು ಸಮೀಪದ ಧರ್ಮಟ್ಟಿ ಗ್ರಾಮ ಪಂಚಾಯತನಲ್ಲಿ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆದ ರೋಜಗಾರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಕೆ.ಎಂ. ಪಡದಾಳಿ, ಕಾರ್ಯದಶರ್ಿ ಎಂ.ವಾಯ್ ಸವರ್ಿ, ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧಕ ನಾಗೇಶ ಮಡಿವಾಳ, ತಾಂತ್ರಿಕ ಸಂಯೋಜಕ ಆರ್.ಎಚ್ ಸಿದ್ದಾಪೂರ, ಗ್ರಾಮ ಪಂಚಾಯತ್ ಅಧ್ಯಕ್ಷ, ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಬಳಗ ಹಾಗೂ ಗ್ರಾಮಸ್ಥರು ಹಾಜರಿದ್ದರು.