ಮೂಡಲಗಿ: 'ಸರಕಾರದ ಕೆಲಸ ದೇವರ ಕೆಲಸ ಕಾರ್ಯನಿರ್ವಹಿಸಿ'

ಲೋಕದರ್ಶನ ವರದಿ

ಮೂಡಲಗಿ 19: ಸರಕಾರಿ ಕಛೇರಿಗಳಲ್ಲಿ ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಕಾರ್ಯನಿರ್ವಹಿಸ ಬೇಕು,  ಶಿಕ್ಷಕರ ಸಾರ್ವಜನಿಕರಿಗೆ ಸಹನೆಯೊಂದಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವದು ಎಂದು ಮೂಡಲಗಿ ಬಿ.ಇ.ಒ ಕಛೇರಿ ಮೇಲ್ವಿಚಾರಕ ಕಿಶೋರ ಮೋರೆ ಹೇಳಿದರು.

ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದಲ್ಲಿ ಹಮ್ಮಿಕೊಂಡಿದ್ದ ವಗರ್ಾವಣೆಗೊಂಡ ಪ್ರಯುಕ್ತ ಸತ್ಕಾರ ಸ್ವೀಕರಿ ಮಾತನಾಡಿದರು. ಸರಕಾರಿ ನೌಕರಿಯವರಿಗೆ ತಾವಿರುವ ಸ್ಥಳವೇ ನಮಗೆ ನಮ್ಮೂರಾಗಿ ಪರಿವತರ್ಿಸಿಕೊಂಡು ಸೇವಾ ಮನೊಭಾವನೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ನಮ್ಮಕುಟುಂಬದವರಿಗೆ ಭಗವಂತ ರಕ್ಷಿಸುತ್ತಾನೆ. ಹಿರಿಯರ ಮಾಗದರ್ಶನ ಹಾಗೂ ಅನುಭವಿಗಳ ಸೇವಾ ದಕ್ಷತೆಯನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಿ ಜನ ಮನ್ನಣೆಪಡೆಯಲು ಸಾದ್ಯವಾಗುವದು. ಕಳೇದ 7 ವರ್ಷಗಳ ಮೂಡಲಗಿ ತಾಲೂಕು ಕಚೇರಿಯ ಸೇವಾ ಭಾಗ್ಯ ನನಗೆ ದೊರೆತಿರುವದು ಹೆಮ್ಮೆಯ ವಿಷಯ ಹಾಗೂ ಇಲ್ಲಿಯ ಶಿಕ್ಷಕರ ಹಾಗೂ ಸಾರ್ವಜನಿಕರ ಸಹಾಯ ಸಹಕಾರ ಸ್ಮರಣೀಯವಾಗಿದೆ. ಇದೇ ಸಂದರ್ಭದಲ್ಲಿ ತಮ್ಮ ಸೇವೆಯ ಸಂದರ್ಭದಲ್ಲಿ ಜರುಗಿದ ಸಿಹಿ ಕಹಿ ಘಟನೆಗಳನ್ನು ಸ್ಮರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಸರಕಾರಿ ಸೇವೆಯಲ್ಲಿರುವವರಿಗೆ ವಗರ್ಾವಣೆ ಎಂಬುದು ಸಾಮಾನ್ಯವಾಗಿದ್ದು ಆದರೆ ವಗರ್ಾಹಿಸಿದ ಸ್ಥಳದಲ್ಲಿ ನಮ್ಮ ಛಾಪನ್ನು ಮೂಡಿಸುವದು ನಮ್ಮ ಕರ್ತವ್ಯವಾಗಿದೆ. ನಮಗೆ ದೊರೆತಿರುವ ಸೇವಾ ಭಾಗ್ಯದಲ್ಲಿ ಶಿಕ್ಷಕರ ಹಾಗೂ ಸಾರ್ವಜನಿಕರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಸೂಚಿಸಬೇಕು. ಕಿಶೋರ ಮೋರೆಯವರ ಕಾರ್ಯ ವೈಖರಿಯನ್ನು ಕಳೇದ 7 ವರ್ಷಗಳಿಂದ ಗಮನಿಸಿದ್ದು ಸಹನಾಶೀಲ ವ್ಯಕ್ತಿತ್ವಯುಳ್ಳವರು ಅವರು ತಮ್ಮ ಸೇವಾವಧಿಯುದ್ದಕ್ಕೂ ಇಂತಹ ಮನೊಭಾವನೆಯನ್ನು ಹೊಂದಿ ಸಕಲರಿಗೂ ಸಹಾಯದ ಹಸ್ತಚಾಚಲೆಂದು ಕೋರಿದರು.

  ಪಿಇಒ ಎಸ್.ಎ. ನಾಡಗೌಡರ, ಶಿಕ್ಷಕ ಸಂಘಟನೆಯಎಸ್.ಎಮ್ ಲೋಕನ್ನವರ, ಬಿ.ಆರ್ತರಕಾರ, ಎಡ್ವಿನ್ ಪರಸನ್ನವರ ನಿಪ್ಪಾಣಿ ಬಿಇಒ ಕಛೆರಿಗೆ ವಗರ್ಾವಣೆಯಾದ ಮೇಲ್ವಿಚಾರಕರ ಕುರಿತು ಮಾತನಾಡಿ, ನೌಕರರಾಗಿ ಸಾರ್ವಜನಿಕಜೀವನ ಹೇಗೆ ನಡೆಸಬೇಕು ಮತ್ತು ಯಶಸ್ವಿಯಾಗಿ ಕುಟುಂಭ ನಿರ್ವಹನೆ, ಸಾರ್ವಜನಿಕರೊಂದಿಗಿನ ಸಂಬಂಧ ಹಾಗೂ ಶಿಕ್ಷಕರ ಕಚೇರಿಯ ಸಿಬ್ಬಂದಿಯ ಒಡನಾಡದಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಬಿ.ಎಚ್ ಮೋರೆ, ಮುಖ್ಯೋಪಾಧ್ಯಾಯರಾದ ಬಿ.ಜೆ ನಾಡಗೇರಿ ಗೋಪಾಲ ಬಸ್ಮೆ,  ಶಿವಾನಂದ ಸೋಮವ್ವಗೋಳ, ಖಜಾಂಚಿಎಸ್ಎಲ್ ಪಾಟೀಲ, ಕೆ.ಎಲ್ ಮೀಶಿ, ಶ್ರೀಕಾಂತ ಕಮತಿ, ಕಛೇರಿ ಸಿಬ್ಬಂದಿಗಳಾದ ವೇಂಕಟೇಶ ಜೋಶಿ, ಚೇತನಕುರಿಹುಲಿ, ಹೊನ್ನಮ್ಮ ಜಗದಾಳೆ, ಎಚ್ ಕೆ ಪೂಜೇರಿ, ಸಮೀದ ಬಾಬನ್ನವರ, ಸಿದ್ದಪ್ಪ ಜೋಡಟ್ಟಿ, ಅಸ್ಲಂಮತ್ತಿತರರು ಉಪಸ್ಥಿತರಿದ್ದರು.