ಬೆಳಗಾವಿ: 'ಭಾರತೀಯ ಜನತಾಪಕ್ಷ ದೀನದಲಿತರ ಧ್ವನಿಯಾಗಿರುವ ಪಕ್ಷ'

ಲೋಕದರ್ಶನ ವರದಿ

ಬೆಳಗಾವಿ 26:  ಭಾರತೀಯ ಜನತಾಪಕ್ಷ ತನ್ನ ಆಡಳಿತಾವಧಿಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದೆ. ರೈತರ ಹಾಗೂ ದೀನದಲಿತರ ಧ್ವನಿಯಾಗಿರುವ ಪಕ್ಷ, ರಾಜ್ಯದ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರಕೋರೆ ಹೇಳಿದರು.

ಅವರುಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಶ್ರೀಮಂತ ಪಾಟೀಲ ಅವರ ಪರವಾಗಿ ಬಿರುಸಿನ ಪ್ರಚಾರಕೈಗೊಂಡು ಕೃಷ್ಣಾ ಕಿತ್ತೂರದಲ್ಲಿ ಮಾತನಾಡಿದರು. ಬಿಜೆಪಿ ತನ್ನ ನಿಲುವುಗಳಿಗೆ ಸದಾಬದ್ಧವಾಗಿದೆ. ಜನತೆಯ ಕಲ್ಯಾಣವೇ ಅದರ ಸಂಕಲ್ಪವಾಗಿದ್ದು ಅಹನರ್ಿಶಿ ಶ್ರಮಿಸುತ್ತಿದೆ. ನೆರೆಪ್ರವಾಹದಲ್ಲಿ ಪಕ್ಷ ಸ್ಪಂದಿಸುವ ರೀತಿದೇಶದಲ್ಲಿಯೇ ಮಾದರಿಯೆನಿಸಿದೆ. ಇಂದು ಕೇಂದ್ರದಲ್ಲಿ ಮೋದಿಯವರು ಕೈಗೊಂಡಿರುವ ಕ್ರಮಗಳು ಐತಿಹಾಸಿಕವೆನಿಸಿವೆ. ಭಾರತವನ್ನು ಅಭಿವೃದ್ಧಿ ಪಥದತ್ತಕೊಂಡೊಯ್ಯುವಲ್ಲಿ ಅವರು ಕೈಗೊಂಡ ಸಂಕಲ್ಪಕ್ಕೆ ಜಗತ್ತೇ ನಿಬ್ಬೆರಗಾಗಿದೆ. ಶ್ರೀಮಂತ ಪಾಟೀಲ ಅವರಿಗೆ ಬಹುಮತವನ್ನು ನೀಡುವುದರೊಂದಿಗೆ ಬಿಜೆಪಿಗೆ ಬಲತುಂಬಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಜಗದೀಶ ಶೆಟ್ಟರ, ಸಿ.ಸಿ.ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು. ಡಾ.ಪ್ರಭಾಕರ ಕೋರೆಯವರು ಬಿಜೆಪಿ ಅಭ್ಯಥರ್ಿ ಪರವಾಗಿ ಕಾಗವಾಡ ಕ್ಷೇತ್ರದ ಐನಾಪುರ, ಮೊಳೆ, ಉಗಾರ ಗ್ರಾಮಗಳಿಗೂ ತೆರಳಿಮತ ಯಾಚಿಸಿದರು.