ಲೋಕದರ್ಶನ ವರದಿ
ಶೇಡಬಾಳ 15: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಉಗಾರ ಖುರ್ದ ಇವುಗಳ ಸಂಯುಕ್ತಾಶ್ರಯದಲ್ಲಿ ಜನೇವರಿ 30 ರಿಂದ ಫೆಬ್ರವರಿ 13 ರವರೆಗೆ ಏರ್ಪಡಿಸಲಾಗಿದ್ದ "ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ" ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಗುರುವಾರ ದಿ. 13 ರಂದು ಉಗಾರ ಬುದ್ರುಕ ಗ್ರಾಮದ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯ ಅಥಣಿ ತಾಲೂಕಾ ಕುಷ್ಠರೋಗ ಮೇಲ್ವಿಚಾರಕರಾಗಿ ಅಂದ್ರೆಯ ಗುಂಜಾಳ ಕುಷ್ಠರೋಗದ ಕುರಿತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ ತಿಳಿಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಇದ್ದಲ್ಲಿ ಕುಷ್ಠರೋಗದ ಲಕ್ಷಣ ಆಗಿದೆ. ಕುಷ್ಠರೋಗಕ್ಕೆ ಬಹುವಿಧ ಔಷಧ (ಎಂ.ಡಿ.ಟಿ.) ಚಿಕಿತ್ಸೆ ನೀಡಬಹುದು.
ಈ ಔಷಧ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಕುಷ್ಠರೋಗಿಗಳು ಶಾಪಗ್ರಸ್ಥರಲ್ಲ. ಅವರ ಬಗ್ಗೆ ಯಾವುದೇ ತಾರತಮ್ಯ, ಭೇದಭಾವ ಎಸಗದೇ ಪ್ರೀತಿ, ವಿಶ್ವಾಸದಿಂದ ಅವರ ಜತೆ ವತರ್ಿಸಿ ಕುಷ್ಠರೋಗಿಗಳನ್ನು ಪತ್ತೆ ಹಚ್ಚಿ ಅಂಗವಿಕಲತೆಯನ್ನು ದೂರ ಮಾಡಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.
ಇದೇ ಸಮಯದಲ್ಲಿ ಬೆಳಗಾವಿಯ ಅಥಣಿ ತಾಲೂಕಾ ಕುಷ್ಠರೋಗ ಮೇಲ್ವಿಚಾರಕರಾದ ಅಂದ್ರೆಯ ಗುಂಜಾಳ ಸಾರ್ವಜನಿಕರಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಈ ಸಮಯದಲ್ಲಿ ಉಗಾರ ಖುರ್ದ ಹಿರಿಯ ಆರೋಗ್ಯ ಸಹಾಯಕ ಎ.ಎಸ್. ಕುಂಬಾರ, ಕಿರಿಯ ಆರೋಗ್ಯ ಸಹಾಯಕಿ ಎಸ್.ಸಿ. ಕಾಮಕರ, ಶಾಲೆಯ ಮುಖ್ಯಾಧ್ಯಾಪಕರಾದ ವ್ಹಿ.ಕೆ.ಪೂಜಾರಿ, ಎ.ಬಿ.ಕಾಮತ, ಸುರೇಖಾ ಗಡೆನ್ನವರ ಸೇರಿದಂತೆ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು, ಗ್ರಾಮಸ್ಥರು, ವಿದ್ಯಾಥರ್ಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು.