ಜಮಖಂಡಿ 08: ಮಾಹಿತಿ ಹಕ್ಕನ್ನು ಸರಿಯಾಗಿ ಅರ್ಥೈಯಿಸಿಕೊಂಡರೆ ಮಾಹಿತಿ ಹಕ್ಕು ಅರ್ಜಿಗಳಿಗೆ ಅಧಿಕಾರಿಗಳು ಹೆದರುವ ಅವಶ್ಯಕತೆನೆ ಬೀಳುವದಿಲ್ಲ ಎಂದು ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತ ರಾಜಶೇಖರ ಎಸ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ಮಾಹಿತಿಯ ಕಾಯ್ದೆಯನ್ನು ಸರಿಯಾಗಿ ಓದಿಕೊಳ್ಳಬೇಕು, ಪ್ರತಿಯೊಂದು ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸಬೇಕು. ಮಾಹಿತಿ ಹಕ್ಕು ಉದ್ದೇಶ ಯಾವುದೇ ತೊಂದರೆ ಇಲ್ಲದೆ ಜನರಿಗೆ ಮಾಹಿತಿ ಸಿಗಲಿ ಎಂಬುದಾಗಿದೆ, ಜನಗಳಿಗೆ ಇದರಿಂದ ಒಳ್ಳೆದಾಗಲಿ ಎಂದು ಮನಮೋಹನ ಸಿಂಗ್ ಅವರು ಜಾರಿಗೆ ತಂದಿದ್ದಾರೆ ಎಂದರು.
ಶೇ.10ರಷ್ಟು ಜನರು ತಮ್ಮ ಸಮಸ್ಯೆ ದಾಖಲೆಗಳಿಗೆ ಅರ್ಜಿಹಾಕುತ್ತಾರೆ, ಅಧಿಕಾರಿಗಳು ತಮ್ಮ ತಪ್ಪಿನಿಂದಾಗಿ ದಾಖಲೆಗಳನ್ನು ನೀಡುವದಿಲ್ಲ, ಸಾರ್ವಜನಿಕ ಹಿತಾಸಕ್ತಿ ಇಲ್ಲದ ಅರ್ಜಿದಾರರನ್ನು ಬ್ಲ್ಯಾಕ್ ಲಿಸ್ಟ್‌ನಲ್ಲಿ ಹಾಕಿದ್ದಾರೆ. ಕೆಳುವ ಮಾಹಿತಿ ಸ್ಪಷ್ಟವಾಗಿ ಒಂದೆ ವಿಷಯಕ್ಕೆ ಸಿಮಿತವಾಗಿರುವಂತೆ ಇರಬೇಕು, ಹತ್ತಾರು ವರ್ಷಗಳ ಕ್ರೂಡಿಕರಿಸಿ ಮಾಹಿತಿ ನೀಡಲು ಬರುವದಿಲ್ಲ, ಅಧಿಕಾರಿಗಳು ಇಂತಹ ಮಾಹಿತಿ ಹಕ್ಕಿನಲ್ಲಿನ ಕಾಯ್ದೆಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.
ಅಧಿಕಾರಿಗಳನ್ನು ಹೆದರಿಸಲು ಮಾಹಿತಿ ಹಕ್ಕನ್ನು ದುರುಪಯೋಗ ಮಾಡಿಕೊಳ್ಳಬಾರದು, ಕೇಳಿದ ಮಾಹಿತಿ ಅರ್ಜಿಯನ್ನು ಕುಲಂಕುಶವಾಗಿ ಪರಿಶಿಲಿಸಿ ಮಾಹಿತಿ ನೀಡಿದರೆ ಯಾವುದೆ ಸಮಸ್ಯೆನೆ ಬರುವದಿಲ್ಲ. ಮಾಹಿತಿ ಇದ್ದರೆ ಮಾಹಿತಿ ಕೊಡಬೇಕು, ಮಾಹಿತಿ ಇರದಿದ್ದರೆ ಮಾಹಿತಿ ಇಲ್ಲ ಅಂತ ಕೊಡಬಹುದು, ಅಧಿಕಾರಿಗಳಿಗೆ ಮಾಹಿತಿ ಹಕ್ಕಿನ ಮಾಹಿತಿ ಕೊರತೆ ಇದೆ, ಮುಂದಿನ ದಿನಗಳಲ್ಲಿ ನಾವೆಲ್ಲ ಆಯುಕ್ತರು ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಹಕ್ಕಿನ ಬಗ್ಗೆ ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಮಾಹಿತಿ ನೀಡುವ ಕಾರ್ಯ ಮಾಡುತ್ತೆವೆ. ಅಧಿಕಾರಿಗಳ ತಮ್ಮ ವಯಕ್ತೀಕ ವಿವರಗಳ ಮಾಹಿತಿಯನ್ನು ಹಂಚಿಕೊಳ್ಳುವದಕ್ಕೆ ಅವಕಾಶ ಇಲ್ಲ ಇಂತಹ ಅರ್ಜಿಗಳನ್ನು ತಿರಸ್ಕರಿಸಬಹುದು ಎಂದರು.