‘ವ್ಯಸನಮುಕ್ತ ಗ್ರಾಮಗಳನ್ನಾಗಿಸುವ ಓಲೇಮಠದ ಶ್ರೀಗಳ ಕಾರ‌್ಯ ಶ್ಲಾಘನೀಯ’

‘ವ್ಯಸನಮುಕ್ತ ಗ್ರಾಮಗಳನ್ನಾಗಿಸುವ ಓಲೇಮಠದ ಶ್ರೀಗಳ ಕಾರ‌್ಯ ಶ್ಲಾಘನೀಯ’ 'The work of the monks of Ole Matha in making villages free of addiction is commendable'

ಜಮಖಂಡಿ 26: ನಗರದ ಓಲೇಮಠದ ಆನಂದ ದೇವರು ವ್ಯಸನಮುಕ್ತ ಗ್ರಾಮಗಳನ್ನು ಅಭಿವೃದ್ಧಿ ಮಾಡಲು ಮುಂದಾದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಎ,ಆಯ್,ಎಮ್,ಆಯ್,ಎಮ್ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲಸಾಬ ಜಮಾದಾರ ಹೇಳಿದರು. ನಗರದ ಓಲೇದಮಠದಲ್ಲಿ ಮಠದ ಶ್ರೀಗಳಾದ ಆನಂದ ದೇವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಜಮಖಂಡಿ ನಗರದಲ್ಲಿ ಸಾಕಷ್ಟು ದುಶ್ಛಚಟಗಳನ್ನು ಮಾಡುವ ಯುವಕರು ಇದ್ದಾರೆ. ಸಿಗರೇಟ್, ಬೀಡಿ, ಗುಟ್ಕಾ, ಮಾವಾ, ಸಾರಾಯಿ ಹೀಗೆ ಹಲವಾರು ಚಟಗಳಿಗೆ ಹದೆಹರೆಯದ ಯುವಕರು ಬಲಿಯಾಗುತ್ತಿದ್ದಾರೆ. ಅದನ್ನು ಹೋಗಲಾಡಿಸಲು ಶ್ರೀಗಳು ಒಂದು ಒಳ್ಳೆಯ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಪಕ್ಷದ ವತಿಯಿಂದ ಶ್ರೀಗಳಿಗೆ ಸಹಾಯ, ಸಹಕಾರವನ್ನು ನೀಡಲು ನಮ್ಮ ಸಂಘಟನೆಯು ಮುಂದಾಗುತ್ತದೆ ಎಂದರು. 

ಜಿಲ್ಲಾ ಉಪಾಧ್ಯಕ್ಷ ಯಾಶೀನ ಲೋದಿ ಮಾತನಾಡಿ, ಯುವಕರಲ್ಲಿ ಜಾಗೃಕತೆಯನ್ನು ಮೂಡಿಸುತ್ತಿರುವ ಶ್ರೀಗಳು ಯಾರಾದರು ಇದ್ದರೆ ಅದು ನಮ್ಮ ಜಮಖಂಡಿಯ ಆನಂದ ದೇವರು. ಅವರು ವ್ಯಸಮುಕ್ತ ಗ್ರಾಮಗಳನ್ನು ಮಾಡಲು ಪಣತೊಟ್ಟಿದ್ದಾರೆ. ತಾಲೂಕಿನ ತುಂಬ ಕೆಲವು ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ವ್ಯಸನ ಮುಕ್ತ ಗ್ರಾಮಗಳನ್ನಾಗಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ನಗರದ ಘಟಕ ಅಧ್ಯಕ್ಷ ಅಮನ ಅವಟಿ, ಮೋಸಿನ ಮುಲ್ಲಾ, ಸಮ್ಮದ ಪೆಂಡಾರಿ, ಪತ್ರಕರ್ತ ಶಿವಾನಂದ ಕೊಣ್ಣೂರ ಸೇರಿದಂತೆ ಇತರರು ಇದ್ದರು.