ಕಾನೂನು ಕಾಲೇಜು ಅಂಗಳದಲ್ಲಿ ವಿಜೃಂಭಿಸಿದ ಸಾಂಸ್ಕೃತಿಕ ಹಬ್ಬ :ಭಾರತೀಯ ಸಂಸ್ಕೃತಿಗೆ ಭವ್ಯ ಇತಿಹಾಸ ಪರಂಪರೆ ಇದೆ - ಉಪಸಭಾಪತಿ ರುದ್ರ​‍್ಪ ಲಮಾಣಿ

ಕಾನೂನು ಕಾಲೇಜು ಅಂಗಳದಲ್ಲಿ ವಿಜೃಂಭಿಸಿದ ಸಾಂಸ್ಕೃತಿಕ ಹಬ್ಬ :ಭಾರತೀಯ ಸಂಸ್ಕೃತಿಗೆ ಭವ್ಯ  ಇತಿಹಾಸ ಪರಂಪರೆ ಇದೆ - ಉಪಸಭಾಪತಿ ರುದ್ರ​‍್ಪ ಲಮಾಣಿ A grand cultural festival was held in the Law College grounds: Indian culture has a rich historical

ರಾಣೆಬೆನ್ನೂರು 26: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ, ಇಲ್ಲಿನ ಭವ್ಯ  ಸಾಂಸ್ಕೃತಿಕ ಸಂಪತ್ತಿನ ಜೊತೆಗೆ  ಸಂಸ್ಕೃತಿ,ಆಚಾರ, ವಿಚಾರ,ಉಡುಗೆ, ತೊಡೆಗೆ ಮತ್ತು ಊಟ ಉಪಚಾರ ಇವೆಲ್ಲವೂ ವಿಶ್ವದ ಎಲ್ಲ ರಾಷ್ಟ್ರಗಳ ನಾಗರಿಕರಲ್ಲಿ  ಗಮನ ಸೆಳೆದಿವೆ. ನಮ್ಮ ಸಂಸ್ಕಾರ ಪರಂಪರೆ ಯಿಂದಾಗಿ  ಭಾರತಕ್ಕೆ ಭಾರತವೇ ಸಾಟಿ ಬೇರೆ ಯಾವ ರಾಷ್ಟ್ರದಲ್ಲಿಯೂ ಇಂತಹ  ಸಂಸ್ಕೃತಿ ಪರಂಪರೆಯನ್ನು ಕಾಣದ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ವಿಧಾನಸಭೆ ಉಪ ಸಭಾಪತಿ ರುದ್ರ​‍್ಪ ಲಮಾಣಿ ಹೇಳಿದರು. ಅವರು ಇತ್ತೀಚೆಗೆ ಸ್ಥಳೀಯ  ಬಿ. ಎ. ಜೆ. ಎಸ್‌. ಎಸ್‌. ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ  "ಸಾಂಸ್ಕೃತಿಕ ಹಬ್ಬ- 2026" ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾರತೀಯರ ಸರಳ ಮತ್ತು ಸಂಪ್ರದಾಯದ ವೇಷ ಭೂಷಣವು ನಮ್ಮ ವ್ಯಕ್ತಿತ್ವ ರೂಪಿಸುತ್ತದೆ.

ದೇಶಿಯ ನೆಲಗಟ್ಟಿನ ಸಾಂಸ್ಕೃತಿಕ ಪರಂಪರೆಯಲ್ಲಿ ವೇಷ ಮತ್ತು ಭೂಷಣ ಜೊತೆಗೆ ಉಟೋಪಚಾರವು ಸಹ ವೈಶಿಷ್ಟತೆ ಮತ್ತು ವೈವಿಧ್ಯತೆಯಿಂದ ಕೂಡಿರುವುದು ಭಾರತೀಯರ ಅತ್ಯಂತ ಹೆಮ್ಮೆ ಎಂದರು. ಕಾನೂನು ವಿದ್ಯಾರ್ಥಿಗಳು ತಮ್ಮ ನೈಜ  ನೈತಿಕ ನೆಲಗಟ್ಟಿನಲ್ಲಿ,ಶಿಕ್ಷಣದ ಜೊತೆ, ಜೊತೆಗೆ ಸಂಸ್ಕಾರವಂತರಾಗಿ ಭಾರತೀಯ ಪರಂಪರೆಯ ಸಂಸ್ಕೃತಿಯಲ್ಲಿ ಬದುಕನ್ನು ರೂಪಿಸಿಕೊಂಡು ಸಾಗಿದಾಗ ಮಾತ್ರ ಮತ್ತಷ್ಟು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ: ಆರ್‌. ಎಂ. ಕುಬೇರ​‍್ಪ ಅವರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆ, ಜೊತೆಗೆ ಭಾರತೀಯ ನೆಲ ಮೂಲ ಸಂಸ್ಕೃತಿಯ ಐತಿಹಾಸಿಕ ಜನಪದ ಕಲೆ, ಸಾಹಿತ್ಯ, ಸಂಗೀತ ಮತ್ತು ಬಹು ಸಂಸ್ಕೃತಿ ತಲೆ  ಇವುಗಳ ಮೂಲಕ ತಮ್ಮ ತನವನ್ನು ತಾವು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಂಡಂತಾಗುತ್ತದೆ ಎಂದು ಯುವ  ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾನೂನು ಮಹಾವಿದ್ಯಾಲಯದ   ಪ್ರಾಚಾರ್ಯ ಹಾಲೇಶಪ್ಪ  ಎಮ್‌. ಗೌಡಶಿವಣ್ಣನವರ ಅವರು, ಮಹಾವಿದ್ಯಾಲಯವು ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವುದರ ಜೊತೆಗೆ ಇತಿಹಾಸದ ಪುನರುತ್ಥಾನಕ್ಕೆ ಸಮೂಹ ಶಿಕ್ಷಣ ಸಂಸ್ಥೆ ನಿರಂತರ ಪ್ರೋತ್ಸಾಹಿಸುತ್ತಾ  ಬಂದಿದೆ.

ಆಡಳಿತದ ಸಹಕಾರ ಮತ್ತು ಪೂರ್ಣ  ಮಾರ್ಗದರ್ಶನದೊಂದಿಗೆ  ಇಂದಿನ ಯುವ ವಿದ್ಯಾರ್ಥಿಗಳಿಗೆ ನಮ್ಮ ಭವ್ಯ ಸಂಸ್ಕೃತಿಯ ಪರಿಚಯಿಸಬೇಕು, ಮತ್ತು ಅಳವಡಿಕೆ ಯಾಗಬೇಕು ಎನ್ನುವ ಏಕೈಕ ಉದ್ದೇಶದಿಂದ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದರು. ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿಗಳಾದ ಸಲೀಂ ಎಂ. ಜವಳಿ, ನಿವೃತ್ತ ಪ್ರಾಧ್ಯಾಪಕ .ಕೆ.ಕೆ.ಹಾವಿನಾಳ, ಪ್ರಾಧ್ಯಾಪಕರಾದ ಮಮತಾ ಓಲೇಕಾರ, ಮಂಗಳಾ ಅಣ್ಣಯ್ಯನವರ, ಹನುಮಂತಪ್ಪ ಬ್ಯಾಡಗಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ವಿವಿಧ ವಿಭಾಗಗಳ  ಉಪನ್ಯಾಸಕರು ಗಣ್ಯರು  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುನೀತಾ ಮತ್ತು ಎಲ್ಲಮ್ಮ ಪ್ರಾರ್ಥಿಸಿದರು. ಕು. ಶ್ರೇಯಾ ಸ್ವಾಗತಿಸಿ ಪ್ರೊ, ಮಮತಾ ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಶಕೀಲಾ ಶಿಡೇನೂರ, ನಿರೂಪಿಸಿ,ಕು. ತೇಜಸ್ವಿನಿ ವಂದಿಸಿದರು. ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿ ಸಮುದಾಯದಿಂದ  ನಡೆದ ಜನಪದ ಸಂಸ್ಕೃತಿ ಪ್ರತಿಬಿಂಬಿತ ಉಡುಗೆ-ತೊಡುಗೆ ವೇಷ- ಭೂಷಣ ನೃತ್ಯ, ಕೋಲಾಟ, ಭಜನೆ ಮತ್ತಿತರ ಕಲೆಗಳ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.