'ಬಬಲಾದಿ ಮಠದ ಪೂಜ್ಯರು ನುಡಿಯುವ ಮಾತುಗಳು ಸತ್ಯದ ಪ್ರತೀಕವಾಗಿವೆ'
ಲೋಕದರ್ಶನ ವರದಿ
ಘಟಪ್ರಭಾ 17: ಬಬಲಾದಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಮಠದ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಪೀಠಾಧಿಪತಿಯಾಗಿರುವ ಶಿವಯ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದಾರೆಂದು ಕನರ್ಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ಅರಭಾವಿ ಮತ್ತು ಶಿಂಧಿಕುರಬೇಟ ಗ್ರಾಮಗಳ ಗುಡ್ಡದ ಮಧ್ಯದಲ್ಲಿರುವ ಬಬಲಾದಿ ಮಠದ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಬಲಾದಿ ಮಠ ನಮ್ಮ ಅರಭಾವಿ ಕ್ಷೇತ್ರದಲ್ಲಿ ಇರುವುದರಿಂದ ನಾವೆಲ್ಲರೂ ಪಾವನರಾಗಿದ್ದೇವೆಂದು ಹೇಳಿದರು.
ಬಬಲಾದಿ ಮಠದ ಪೂಜ್ಯರು ನುಡಿಯುವ ಮಾತುಗಳು ಸತ್ಯದ ಪ್ರತೀಕವಾಗಿವೆ. ಮಠದ ಇತಿಹಾಸ ಹಾಗೂ ಸಂಸ್ಕೃತಿ ಬಹಳ ದೊಡ್ಡದಿದೆ. ಅದರಲ್ಲೂ ನಮ್ಮ ಬಬಲಾದಿ ಮಠದ ಶಿವಯ್ಯ ಸ್ವಾಮಿಗಳು ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ. ಲಕ್ಷಾಂತರ ಭಕ್ತರನ್ನು ಸಂಪಾದಿಸಿದ್ದಾರೆ. ಇಲ್ಲಿ ಪ್ರತಿವರ್ಷ ಬನದ ಹುಣ್ಣಿಮೆಗೆ ನಡೆಯುವ ಜಾತ್ರೆಗೆ ಸಾಕಷ್ಟು ಜನರು ಆಗಮಿಸಿ ಶ್ರೀಗಳ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಧಾಮರ್ಿಕತೆಗೆ ಮತ್ತೊಂದು ಹೆಸರೇ ಬಬಲಾದಿ ಮಠ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಬಬಲಾದಿ ಮಠದ ಶಿವಯ್ಯ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು.
ಜನಮನಸೂರೆಗೊಂಡ ಕುಸ್ತಿ: ಜಾತ್ರೆ ನಿಮಿತ್ಯವಾಗಿ ಮಠದಲ್ಲಿ ಅಂತರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿಗಳು ಜರುಗಿ ಕ್ರೀಡಾ ಪ್ರೇಮಿಗಳನ್ನು ಆಕಷರ್ಿಸಿದವು. ಅದರಲ್ಲೂ ಅಂತರಾಷ್ಟ್ರೀಯ ಕುಸ್ತಿ ಪಟುಗಳಾದ ಹರಿಯಾಣಾದ ಭಾರತ ಕೇಸರಿ ಮಂಜೀತಸಿಂಗ್ ಖತ್ರಿ ಹಾಗೂ ಇರಾನ್ ದೇಶದ ಸೈಯ್ಯದ ಮಹ್ಮದ ಪೈಲವಾನ್ ಕುಸ್ತಿ ರೋಚಕತೆಯಿಂದ ಕೂಡಿತ್ತು.
ಸತತ ಮೂರನೇ ಬಾರಿಗೆ ಜಮಖಂಡಿ ತಾಲೂಕಿನ ಕಂಕಣವಾಡಿಯ ಶಿವಯ್ಯ ಪೂಜೇರಿ ಬೆಳ್ಳಿ ಗಧೆ ಪಡೆದುಕೊಂಡರು. ಕನರ್ಾಟಕ ಕೇಸರಿ ದಾವಣಗೆರೆಯ ಕಾತರ್ಿಕ ಕಾಟೆ ಅವರ ಕುಸ್ತಿಯಂತೂ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿ ಪರಿಣಮಿಸಿತು.
ನಾಲ್ಕು ತಾಸು ಕುಸ್ತಿ ವೀಕ್ಷಿಸಿದ ಬಾಲಚಂದ್ರ ಜಾರಕಿಹೊಳಿ: ಪ್ರಸಿದ್ಧ ಬಬಲಾದಿ ಮಠದಲ್ಲಿ ನಡೆಯುತ್ತಿದ್ದ ಜಂಗೀ ನಿಕಾಲಿ ಕುಸ್ತಿಯನ್ನು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತತ 4 ಗಂಟೆಗಳ ಕಾಲ ವೀಕ್ಷಕರೊಂದಿಗೆ ಕುಳಿತುಕೊಂಡು ವೀಕ್ಷಿಸಿರುವುದು ಅಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿತು. ಕುಸ್ತಿಯಲ್ಲಿ ಗೆದ್ದ ಕ್ರೀಡಾ ಪೈಲವಾನರಿಗೆ ನಗದು ರೂಪದಲ್ಲಿ ಬಹುಮಾನ ನೀಡಿ ಅವರನ್ನು ಹುರಿದುಂಬಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 