ಜಮಖಂಡಿ 02: ದೇಶದ ಆರ್ಥಿಕತೆಯಲ್ಲಿ ರಾಜ್ಯಾದ ಆರ್ಥಿಕತೆಯಲ್ಲಿ ಹಾನಿಯಿದೆ. ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದೀತು ತಿಳಿಯಿರಣ್ಣ... ಶಿಕ್ಷಣ ಕ್ಷೇತ್ರದಲ್ಲಿ ಹೊಸತಿರುವ ಆಗುತ್ತವೆ. ಹಣದ ಹಿಂದೆ ಹೋಗುವ ಜನರಲ್ಲಿ ಬಂಧುತ್ವದ ಸಮಯ ಬಂದೀತು ತಿಳಿಯರಣ್ಣ, ವಿದ್ಯುತ್ ಹಾಗೂ ನೀರಿನ ಕೊರತೆ ಹೆಚ್ಚಾಗಲಿದೆ. ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗುತ್ತದೆ ಎಂದು ಬಬಲಾದಿ ಮಠದ ಸಿದ್ದರಾಮಯ್ಯ ಮುತ್ಯಾ ಭವಿಷ್ಯವನ್ನು ನುಡಿದಿದ್ದಾರೆ.
ತಾಲೂಕಿನ ಸಮೀಪ ಸುಕ್ಷೇತ್ರ ಬೆಂಕಿ ಬಬಲಾದಿ ಗ್ರಾಮದ ಚಂದ್ರಗಿರಿ ಮಠದ ಚಕ್ರವರ್ತಿ ಸದಾಶಿವ ಮುತ್ಯಾ ಮೂಲ ಸಂಸ್ಥಾನ ಮಠದ ಜಾತ್ರೆಯಲ್ಲಿ ನಡೆದ ಕಾಲಜ್ಞಾನದಲ್ಲಿ ಶ್ರೀಮಠದ ಸಿದ್ದರಾಮಯ್ಯ ಹೊಳೆಮಠ ಚಿಕ್ಕಯ್ಯಪ್ಪ ಬರೆದ ಕಾಲಜ್ಞಾನದ ಭವಿಷ್ಯವನ್ನು ನುಡಿದ ಅವರು, ಧರ್ಮ-ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ಮಾನವಿಯತೆ ಮನುಷ್ಯತ್ವದ ಹೊಸ ಸಂಚಲನ ತಿಳಿಯರಣ್ಣ ಅಂತಾ ಹೇಳಿದ್ದಾರೆ.
ಯುದ್ದದಲ್ಲಿ ಹೊಸ ಸಂಚಲನ ಆದಿತ್ತು. ಕಾಡ್ಗಿಚ್ಚು ಹೆಚ್ಚಾಗುತ್ತದೆ. ಎಲ್ಲ ಪ್ರಾಣಿಗಳು ಕಾಡಿನಿಂದ ನಾಡಿನ ಕಡೆಗೆ ಬರುತ್ತವೆ. ಇನ್ನೂ ನೀರೀಕ್ಷೆಗೂ ಮೀರಿದ ಹೊಸ ಕಾಯಿಗಳು ಬರುತ್ತವೆ. ಹೆಣ್ಣುಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಸಾಧಿಸುತ್ತಾರೆ. ದೇಶದಲ್ಲಿ ಕಳ್ಳರ ಉಪ್ಪಟಳ ಹೆಚ್ಚಾಗುತ್ತದೆ.ಮಳೆ-ಬೆಳೆ ಮಧ್ಯಮ ಇದೆ. ಜನಸಾಮಾನ್ಯರಿಗೆ ಭಯಂಕರ ರೋಗಗಳು ಬರುತ್ತವೆ. ವ್ಯಾಪಾರಸ್ಥರಿಗೆ ಸಾಧಾರಣ ಲಾಭವಿದೆ. ರಾಷ್ಟ್ರದ ನಾಯಕರಿಗೆ ಅನಿಷ್ಟ ಇದೆ.ಆಳುವಂತ ಮಾಹಾರಾಜರಿಗೆ ಆರಿಷ್ಟ ಇದೆ. ಮಳೆ ಕಂಡುಮಂಡಲ ಇದೆ.ಧಾನ್ಯಗಳು ಮಾರಾಟವಾಗುತ್ತವೆ. ಜಗತ್ತಿಗೆ ಮಧ್ಯಮ ಸುಖಿದೆ. ಪುಂಡರು-ಧರೋಡೆಕೋರರಿಂದ ಪ್ರಜೆಗಳಿಗೆ ಅರಿಷ್ಟ ಇದೆ. ಜೋರಾದ ಗಾಳಿ ಬೀಸುತ್ತದೆ. ಆಳುವ ದೊರೆಗಳಿಗೆ ಒಳ-ಒಳೊಗೆ ಕಿತ್ತಾಟ ಹೆಚ್ಚಾಗುತ್ತದೆ. ಜನರಲ್ಲಿ ಕಿತ್ತಾಟ- ಬಡಿದಾಟ ಹೆಚ್ಚಾದಿತ್ತು ಮಕ್ಕಳರಾ್ಯ, ಯುದ್ದ, ಅನ್ಯಾಯ ಹೆಚ್ಚಾಗಿ ದೇಶಕ್ಕೆ ಅರಿಷ್ಟ ಹೆಚ್ಚಾಗುತ್ತದೆ. ವಿದ್ಯುತ್ ಅಗ್ನಿ ಅನಾಹುತ ಹೆಚ್ಚಾಗುತ್ತದೆ. ಹಸು, ಶಿಶುಗಳಿಗೆ ರೋಗ ಬಾಧೆ, ಕಾಳು ಕಡಿಗಳ ಬೆಲೆ ಹೆಚ್ಚಳ, ಮುಂಗಾರು ಮಳೆ ಒಂಬಂತ್ತಾಣೆ, ಹಿಂಗಾರು ಮಳೆ ಹತ್ತಾಣೆಯಾಗುತ್ತದೆ ಎಂದು ಹೀಗೆ 2025ರ ಕಾಲಜ್ಞಾನವನ್ನು ಬಬಲಾದಿ ಹೊಳೆಮಠ ಸದಾಶಿವ ಮುತ್ಯಾನ. ಚಿಕ್ಕಯ್ಯಪ್ಪ ಬರೆದ ಕಾಲಜ್ಞಾನವನ್ನು ಸಿದ್ದರಾಮಯ್ಯ ಶ್ರೀಗಳು ಭವಿಷ್ಯವನ್ನು ನುಡಿದರು.