‘ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖ’

‘ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖ’ 'The role of workers is very important in the development of society'

         ಸಿಂದಗಿ 03: ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾರ್ಮಿಕರ ಕಾರ್ಢಗಳ ನವೀಕರಣ ಹಾಗೂ ನೊಂದಣಿಗೆ ಅನೇಕ ಕಟ್ಟಳೆಗಳನ್ನು ವಿಧಿಸಿ ಕಾರ್ಮಿಕರನ್ನು ಕನಿಷ್ಠ ಮಟ್ಟದಿಂದ ನಡೆಸಿಕೊಳ್ಳುತ್ತಿರುವ ಸರಕಾರದ ದೋರಣೆಯನ್ನು ಸರಿಯಲ್ಲ. ಕಾರ್ಮಿಕರ ಮಕ್ಕಳ ಶಿಕ್ಷಣದ ಮಟ್ಟವನ್ನು ಸುಧಾರಣೆ ಮಾಡಲು ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್ ಹೇಳಿದರು. 

         ನಗರದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕಂಡ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ, ಮೆಲ್ಲೊ ಮಾತನಾಡಿ, ಸೂರ್ಯ ಹುಟ್ಟುವ ಮುನ್ನ ಫೀಲ್ಡಿಗೆ ಇಳಿಯುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸರಿಯಾಗಿ ವಿತರಣೆಯಾಗುತ್ತಿಲ್ಲ ಇದನ್ನು ಸರಕಾರಕ್ಕೆ ಮುಟ್ಟಿಸುವ ಕಾರ್ಮಿಕರ ಹಕ್ಕುಗಳು ಹಾಗೂ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. 

         ಕಟ್ಟಡ ಕಾರ್ಮಿಕರ ಇಲಾಖೆಯ ಇಒ ಶರಣು ದಬಕಿ ಮುಖ್ಯಅತಿಥಿಯಾಗಿ ಭಾಗವಹಿಸಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ​‍್ಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜೊತೆಗೆ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. 

      2025-26 ನೆ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಸಂಗಮ ಸಂಸ್ಥೆಯಲ್ಲಿ ಸನ್ಮಾನ ಮಾಡಲಾಯಿತು ಹಾಗೂ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಇಲಾಖೆಯಿಂದ ವಿವಿದ ಕಿಟ್‌ಗಳನ್ನು ನೀಡಲಾಯಿತು. ವಿವಿಧ ಹಳ್ಳಿಯಿಂದ ಬಂದಿರುವ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು. ವಿಜಯ ಬಂಟನೂರ ನಿರೂಪಿಸಿದರು ಮಹೇಶ ಚವ್ಹಾಣ ಸ್ವಾಗತಿಸಿದರು, ಲಕ್ಷ್ಮಣ ಪೂಜಾರಿ ವಂದಿಸಿದರು.