'ಸಂಸ್ಕೃತಿ ಉಳಿಸಿ ಬೆಳೆಸುವದರಲ್ಲಿ ಮಠಗಳ ಪಾತ್ರ ಅನನ್ಯ'
ಲೋಕದರ್ಶನ ವರದಿ
ಮುನವಳ್ಳಿ : ದಿ. 16 ರಂದು ಸಂಜೆ ಪಟ್ಟಣದ ಸೋಮಶೇಖರಮಠದಲ್ಲಿ ಜರುಗಿದ ಲಿಂ. ಬಸವಲಿಂಗ ಮಹಾಸ್ವಾಮಿಗಳವರ 64 ನೇ ಪುಣ್ಯಸ್ಮರಣೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಶಾಸಕ ಆನಂದ ಮಾಮನಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಮುರುಘೇಂದ್ರ ಶ್ರೀಗಳು, ಹೊಸಳ್ಳಿಯ ಜಗದ್ಗುರು ಬೂದೀಶ್ವರ ಶ್ರೀಗಳು, ಬೈಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು. ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು. ಪ್ರವಚನಕಾರ ಗದಗಿನ ಬಸವಕಂದ ದೇವರು. ವರ್ತಕ ಮೆಹಬೂಬ ಲಂಗೋಟಿ ಉಪಸ್ಥಿತರಿದ್ದರು.
ಶಾಸಕ ಆನಂದ ಮಾಮನಿ ಮಾತನಾಡಿ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠ-ಮಾನ್ಯಗಳ ಪಾತ್ರ ಅನನ್ಯವಾಗಿದೆ ಎಂದರು. ಕಾರ್ಯಕ್ರಮದ ಸ್ವಾಗತವನ್ನು ಬಿ.ಬಿ.ಹುಲಿಗೊಪ್ಪ. ನಿರೂಪಣೆಯನ್ನು ಗಂಗಾಧರ ಗೊರಾಬಾಳ ವಂದನಾರ್ಪಣೆಯನ್ನು ಶ್ರೀಶೈಲ ಗೋಪಶೆಟ್ಟಿ ಮಾಡಿದರು.