ಲೋಕದರ್ಶನ ವರದಿ
ಯಮಕನಮರಡಿ 14: ನಾಯಕ ಸ್ಟುಡೆಂಟ್ ಫೆಡರೆಷನ್ ಪ್ರಾಥಮಿಕ ಹಾಗೂ ಫ್ರೌಢ ಶಾಲೆ ಹತ್ತರಗಿ-ಆನಂದಪೂರ ಕಳೆದ 20 ವರ್ಷಗಳಿಂದ ಗ್ರಾಮೀಣ ವಲಯದಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಮಕ್ಕಳ ಶೈಕ್ಷಣಿಕ ಹಾಗೂ ಭೌಧಿಕ ಬೆಳವಣಿಗೆಗಳೊಂದಿಗೆ ಉತ್ತಮ ಫಲಿತಾಂಶ ಹಾಗೂ ಮಕ್ಕಳ ಸರ್ವತೋಮುಖ ಅಭೀವೃದ್ದಿಯನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ನಾಯಕ ಸ್ಟುಡೆಂಟ್ ಫೆಡರೆಷನ್ ಗೋಕಾಕದ ಕಾರ್ಯದಶರ್ಿಗಳಾದ ಎಸ್,ಎ,ರಾಮಗಾನಟ್ಟಿ ಹೇಳಿದರು,
ಅವರು ಸಮೀಪದ ಹತ್ತರಗಿ ಆನಂದಪೂರದ ಎನ್,ಎಸ್,ಎಫ್, ಶಾಲೆಯ ವಾಷರ್ಿಕ ಸ್ನೇಹ ಸಮ್ಮೆಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ "ವಿದೈಯೇ ಬಾಳಿನ ಬೆಳಕು" ಎಂಬ ಮಾತನ್ನು ಸಕಾರಗೊಳಿಸುವತ್ತ ನಮ್ಮೆಲ್ಲ ಶಿಕ್ಷಕ ಬಳಗ ಶ್ರಮಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ರಾಜೇಶ ಘಸ್ತಿ ಮಾತನಾಡಿ, ಪ್ರತಿಭೆಗಳನ್ನು ಹುಟ್ಟು ಹಾಕುವುದರೊಂದಿಗೆ ಆ ಪ್ರತಿಭೆಗಳನ್ನು ಎಲ್ಲೆಡೆ ಪರಿಚಯಿಸುವ ಕಾರ್ಯ ಮಾಡುತ್ತಿರುವ ಶಿಕ್ಷಕ ಸಿಬ್ಬಂದಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಶೈಕ್ಷಣಿಕ,ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುವ ಕಾರ್ಯದಿಂದ ಈ ಶಾಲೆ ಜ್ಞಾನದ ಉತ್ತುಂಗಕ್ಕೆರಿದೆ ಎಂದರು.
ವೇದಿಕೆಯಲ್ಲಿ ಬಿ,ಎಮ್, ಪಾಟೀಲ, ಶಶಿಕಾಂತ ಹಟ್ಟಿ, ಪ್ರಧಾನ ಗುರುಗಳಾದ ಎ,ಎ,ಖಲಿಫಾ, ಹಾಗೂ ಎಸ್,ಎಸ್, ಅತ್ಯಾಳಿ, ವೇದಿಕೆಯಲ್ಲಿದ್ದರು.
ವಿಶೇಷ ಕಾರ್ಯಕ್ರಮ: ಮುಂಜಾನೆ ಧ್ವಜಾರೋಹಣ ಮತ್ತು ಮೋಜಿನ ವೇಷ, ರಂಗೋಲಿ ಸ್ಪಧರ್ೆ, ಹಾಗೂ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಣೆ, ಕಾರ್ಯಕ್ರಮಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಪ್ರಥಮದಲ್ಲಿ ಮಲ್ಲಿಕಾಜರ್ುನ ಪಟೋಳಿ, ಸ್ವಾಗತಿಸಿದರು ಕಾರ್ಯಕ್ರಮವನ್ನು ಖುಷಿ ಕಾಂಬಳೆ, ನಿರೂಪಿಸಿ ಕೊನೆಯಲ್ಲಿ ಬಸವರಾಜ ಗುರವ, ವಂದಿಸಿದರು.