ನವದೆಹಲಿ, ಆ 20 ಟೆಸ್ಟ್ ಹಾಗೂ ಏಕದಿನ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರು ವೆಸ್ಟ್ ಇಂಡೀಸ್ನ 'ವರ್ಷದ ಟೆಸ್ಟ್ ಆಟಗಾರ' ಗೌರವಕ್ಕೆ ಸೋಮವಾರ ಪಾತ್ರರಾಗಿದ್ದಾರೆ.
ಕಳೆದ ವರ್ಷ ವೆಸ್ಟ್ ಇಂಡೀಸ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತೋರಿದ ಗಣನೀಯ ಪ್ರದರ್ಶನ ಗಮನಿಸಿ ಅವರಿಗೆ ಈ ಗೌರವ ನೀಡಲಾಗಿದೆ. 2018ರಲ್ಲಿ 336 ರನ್ ಹಾಗೂ 33 ವಿಕೆಟ್ ಕಬಳಿಸಿದ್ದರು. ಈ ಬಗ್ಗೆ ಕ್ರಿಕೆಟ್ ವೆಸ್ಟ್ ಇಂಡೀಸ್ ಸರಣಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದೆ.
ವೆಸ್ಟ್ ಇಡೀಸ್ ಭರವಸೆಯ ಬ್ಯಾಟ್ಸ್ಮನ್ ಶಾಯ್ ಹೋಪ್ ಅವರು 'ವರ್ಷದ ಏಕದಿನ ಆಟಗಾರ' ಪ್ರಶಸ್ತಿಗೆ ಪಾತ್ರರಾದರೆ, ಕಿಪೋ ಪಾಲ್ ಅವರು 'ವರ್ಷದ ಟಿ-20 ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಾಯ್ ಹೋಪ್ 2018ರ ಏಕದಿನ ಮಾದರಿಯಲ್ಲಿ ಒಟ್ಟು 875 ರನ್ ಭಾರಿಸಿದ್ದಾರೆ. ಕಿಮೋ ಪಾಲ್ ಟಿ-20 ಯಲ್ಲಿ 124 ರನ್ ಹಾಗೂ 17 ವಿಕೆಟ್ ಕಬಳಿಸಿದ್ದಾರೆ. ವೇಗಿ ಓಶಾನ್ ಥಾಮಸ್ ಅವರು ವರ್ಷದ ಉದಯೋನ್ಮುಖ ಆಟಗಾರ ಗೌರವಕ್ಕೆ ಭಾಜನರಾಗಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ದಿಯೇಂದ್ರ ಡೊಟ್ಟಿನ್ ಅವರು 'ವರ್ಷದ ಏಕದಿನ ಹಾಗೂ ಟಿ-20 ಆಟಗಾರ್ತಿ' ಗೌರವಕ್ಕೆ ಭಾಜನರಾಗಿದ್ದಾರೆ.
ಡೊಟ್ಟಿನ್ ಅವರು ಏಕದಿನ ಮಾದರಿಯಲ್ಲಿ ಕಳೆದ ವರ್ಷ 114 ರನ್ ಹಾಗೂ 12 ವಿಕೆಟ್ ಕಿತ್ತಿದ್ದರು. ಟಿ-20 ಮಾದರಿಯಲ್ಲಿ 149 ರನ್ ಹಾಗೂ 16 ವಿಕೆಟ್ ಪಡೆದಿದ್ದರು. ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅವರು 'ವರ್ಷದ ಕೆರಿಬಿಯನ್ ಟಿ-20 ಆಟಗಾರ' ಪ್ರಶಸ್ತಿಗೆ ಪಾತ್ರರಾದರು. ಜತೆಗೆ, ಜೊಯಿಲ್ ವಿಲ್ಸನ್ ಅವರು ವೆಸ್ಟ್ ಇಡೀಸ್ನ 'ವರ್ಷದ ಅಂಪೈರ್' ಪ್ರಶಸ್ತಿ ಪಡೆದರು.