'ಮಕ್ಕಳು ಸಂತೋಷವಾಗಿರಲು ಶಿಕ್ಷಣ ನೀಡಿ'

ಲೋಕದರ್ಶನ ವರದಿ

ಬೆಳಗಾವಿ 14: ಮಕ್ಕಳೇ ಸಂಪತ್ತಾಗಿದ್ದರಿಂದ ಅವರಿಗೆ ಶ್ರೀಮಂತರಾಗಲು ಶಿಕ್ಷಣ ನೀಡಬೇಡಿ, ಸಂತೋಷವಾಗಿರಲು ಶಿಕ್ಷಣ ನೀಡಿ, ಇದರಿಂದ ಅವರು ದೊಡ್ಡವರಾದ ಮೇಲೆ ಅವರ ಇಚ್ಛೆಯ ಪ್ರಕಾರ ವಸ್ತುಗಳ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ ಹಾಗೂ ತಂದೆ ತಾಯಿಯೊಂದಿಗೆ ಗೌರವದಿಂದ ಇರುತ್ತಾರೆ. ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್.ಬಿ.ಐ.  ಬ್ಯಾಂಕಿನ ವ್ಯವಸ್ಥಾಪಕರಾದ ಚೈತನ್ಯ ಚೌಧರಿ ಮಾತನಾಡಿದರು. ನೆಹರು ಜಯಂತಿ ಅಂಗವಾಗಿ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ದೇಶಿಸಿ "ಮಕ್ಕಳು ಗುಲಾಬಿ ಹೂಗಳಂತೆ, ಅವುಗಳು ಬಾಡದಂತೆ ನೋಡಿಕೊಂಡು ಸದಾ ಲವಲವಿಕೆಯಿಂದ ಬೆಳೆಸಲು ಪ್ರಯತ್ನಿಸಬೇಕು. 

ಆಟ ಪಾಠಗಳ ಜೊತೆಗೆ ನೈತಿಕತೆ ಮತ್ತು ಎಲ್ಲಾ ಕ್ಷೇತ್ರಗಳ ಪ್ರಚಲಿತ ಘಟನೆಗಳ ಬಗ್ಗೆ ಜ್ಞಾನ ನೀಡುತ್ತ ಒಳ್ಳೆಯ ಪ್ರಜೆಗಳನ್ನು ನಿಮರ್ಿಸಬೇಕೆಂದು ಹೇಳಿದರು.

ಬಿ. ಕೆ. ಮಾಡೆಲ್ ಪ್ರೌಢಶಾಲೆಯ ಮಾಜಿ ವಿದ್ಯಾಥರ್ಿಯಾದ ಪ್ರಕಾಶ ಅಂಕಲಿಕರ ಹಾಗೂ ಬೆಳಗಾವಿ ಜಿಲ್ಲಾಮಟ್ಟದ 'ಆದರ್ಶ ಶಿಕ್ಷಕಿ' ಪ್ರಶಸ್ತಿ ಪುರಸ್ಕೃತರಾದ ವನಿತಾ ಆರ್. ಪಾಟೀಲ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. ಬೆಳಗಾವಿಯ ಪ್ರತಿಷ್ಠಿತ ವಕಿಲರು ಹಾಗೂ ಬೆಳಗಾವಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಪೊತದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೆಹರು ಜಯಂತಿ ಉದ್ದೇಶಿಸಿ "ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯತ್ತಿನ ಸಂಪತ್ತು ಹಾಗೂ ಪ್ರಜೆಗಳು ಆದಕಾರಣ ಮಕ್ಕಳ ಸಂರಕ್ಷಣೆ ಹಾಗೂ ಸರ್ವತೋಮುಖ ಅಭಿವೃದ್ದಿಯಾಗಲು ಶಿಕ್ಷಕರು ಪ್ರಯತ್ನಿಸಬೇಕು" ಎಂದು ಮಾತನಾಡಿದರು. ಶಾಲೆಯ ಮುಖ್ಯೋಪಾದ್ಯಾಯರಾದ ಎಮ. ಕೆ. ಮಾದಾರ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿ ಉದ್ದೇಶವನ್ನು ತಿಳಿಸಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಿ ಬಹುಮಾನದೊಂದಿಗೆ ಗೌರವಿಸಲಾಯಿತು. ಪ್ರಬಂಧ, ಭಕ್ತಿಗೀತೆ, ನೀತಿ ಕಥೆ ಹೇಳುವುದು, ಚಚರ್ಾ ಸ್ಪಧರ್ೆ ಮುಂತಾದ ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರವನ್ನು ಲಕ್ಷ್ಮೀ ಯಲವಟಕರ ಸಂಯೋಜಿಸಿ, ಕುಮಾರಿ ಪೂವರ್ಾ ಮುತಗೆಕೆರ  ಸ್ವಾಗತಿಸಿ,  ನಿರೂಪಮಾ ತಾಳುಕರ ನಿರೂಪಿಸಿ, ಪೂಜಾ ಪಾಟೀಲ ವಂದಿಸಿದರು. ಇನ್ನಿತರ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.