'ಹನಿ ನೀರಾವರಿ ಮುಖಾಂತರ ಕಬ್ಬು ಬೆಳೆ ಲಾಭದಾಯಕ'

ಲೋಕದರ್ಶನ ವರದಿ

ಕಾಗವಾಡ 17:  ರೈತರ ವಾಣಿಜ್ಯ ಬೆಳೆಯಾಗಿರುವ ಕಬ್ಬು ಲಾಭದಾಯಕವಾಗಿ ಮಾಡಿಕೊಳ್ಳಲು ರೈತರು ಪಾರಂಪಾರಿಕ ಹಳೆ ಪದ್ಧತಿವನ್ನು ಅಳವಡಿಸಿಕೊಳ್ಳದೇ, ಹೊಸ ಹೊಸ ತಳಿಗಳು ಕಬ್ಬು ಸಂಶೋಧನ ಕೇಂದ್ರದಲ್ಲಿ ಹುಟ್ಟು ಹಾಕಿದ್ದು, ಅವುಗಳನ್ನು ಬಳಿಸಿ ಹನಿ ನೀರಾವರಿ ಮುಖಾಂತರ ಕಬ್ಬು ಬೆಳೆ ಬೆಳೆದರೆ ರೈತರಿಗೆ ಕಬ್ಬು ಬೆಳೆ ಲಾಭದಾಯಕವಾಗಲು ಸಾಧ್ಯವಿದೆಯೆಂದು ಧಾರವಾಡ ಕಬ್ಬು ಸಂಶೋಧನಾ ಕೇಂದ್ರದ ಪ್ರಧಾನಿ ಮತ್ತು ವಿಜ್ಞಾನಿಗಳಾದ ಡಾ. ಸಂಜಯ ಪಾಟೀಲ ಐನಾಪೂರದಲ್ಲಿ ಹೇಳಿದರು.

ದಿ.16ರಂದು ಸಂಜೆ ಐನಾಪೂರದ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ "ಕೃಷಿ ವಿಚಾರ ಸಂಕಿರಣ"ಕಾರ್ಯಕ್ರಮದಲ್ಲಿ ಡಾ. ಸಂಜಯ ಪಾಟೀಲ ಉಪನ್ಯಾಸ ನೀಡಿದರು.

ಕಬ್ಬಿನ ಬೆಳೆ ಕೆಲ ಮಾತ್ರ ರೈತರಿಗೆ ಲಾಭದಾಯಕವಾಗಿದೆ. ಇನ್ನೂಳಿದ ರೈತರು ಈಗಲೂ ಹಳೆಯ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಜಮೀನ ಫಲವತ್ತವಾಗಿ ಉಳಿಯಲು ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳಲೇಬೇಕು. ಮತ್ತು ಅನೇಕ ವರ್ಷಗಳಿಂದ ಕಬ್ಬಿನ ಬೀಜ್ ಬದಲಾಯಿಸದೆ, ಅದೇ ಕಬ್ಬು ಬಳಿಸುತ್ತಾರೆ. ಅದನ್ನು ಬದಲಾಯಿಸಿ ಫೌಂಡೇಶನ್ ಬೀಜು ಬಳಿಸಿಕೊಳ್ಳಬೇಕು. ಸಿ.ಓ-265 ಕಬ್ಬಿನ ತಳಿ ಬದಲಾಗಿ ಸಂಶೋಧನ ಮಾಡಿ ಸಿ.ಓ-9293 ತೈಯಾರಿಸಲಾಗಿದೆ. ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಸಾಧ್ಯವಿದೆ. ಇದೇ ರೀತಿ ಸಿ.ಓ-9268 ತಳಿ ಬಳಿಸಿರಿ ಎಂದು ಹೇಳಿದರು.

ಧಾರವಾಡ ಸಂಶೋಧನಾ ಕೇಂದ್ರ ಕೃಷಿ ತಜ್ಞ ಡಾ. ಗೀತಾ ಚಿಟಗುಪ್ಪಿ ಇವರು "ಕೃಷಿ ಪ್ರಧಾನ ದೇಶದಲ್ಲಿ ಕೇವಲ ಕೃಷಿ ಮೇಲೆ ಅವಲಂಬಿತವಾಗಿಯಿರದೇ, ಅದರ ಪೂರಕವಾಗಿ ಬೇರೆ ಬೇರೆ ಉದ್ಯೋಗಗಳನ್ನು ಹೇಗೆ ಮಾಡಬಹುದೆಂದು ಉಪನ್ಯಾಸ  ಮುಖಾಂತರ ಹೇಳಿದರು.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ತಜ್ಞ ಡಾ. ಪಿ.ಎಸ್.ಮತ್ತಿವಾಡೆ ಇವರು, ರೈತರು ಅಧಿಕ ಪ್ರಮಾಣದಲ್ಲಿ ರಾಸಾಯಣಿಕ ಗೊಬ್ಬರು ಬಳಿಸುವ ಪ್ರಮಾಣ ಕಡಿಮೆ ಮಾಡಿ, ಹಸರು ಗೊಬ್ಬರು ಬಳಿಸಿ ಸಾವಯವ ಕೃಷಿ ಹೇಗೆ ಮಾಡಬಹುದು ಈ ಬಗ್ಗೆ ವಿವರವಾದ ಮಾಹಿತಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಉಗಾರ ಸಕ್ಕರೆ ಕಾಖರ್ಾನೆಯ ಕಬ್ಬು ಬೆಳೆ ಸಂಶೋಧನ ತಜ್ಞರಾದ ಜಗಧೀಶ ಪಟವರ್ಧನ ಪಾಲ್ಗೊಂಡಿದ್ದರು. ಆಧ್ಯಕ್ಷತೆ ಐನಾಪೂರದ ಪ್ರಗತಿಪರ ರೈತ ಮೋಹನ ಮುತಾಲಿಕ ಇದ್ದರು. ಈ ವೇಳೆ ಅನೇಕ ಪ್ರಗತಿಪರ ರೈತರು ಪಾಲ್ಗೊಂಡಿದ್ದರು. ಸ್ವಾಗತ, ಸಂಯೊಜನೆ, ನಿರೂಪಣೆ ಕೃಷಿ ಮೇಳ ಸದಸ್ಯ ಮಹೇಶ ಸೋಲಾಪುರೆ ಮಾಡಿದರು.