‘ವಿದ್ಯಾರ್ಥಿಗಳು ಮೇಧಾವಿಗಳಾಗಿ ಕೀರ್ತಿ ತರುವಂತವರಾಗಬೇಕು’

‘ವಿದ್ಯಾರ್ಥಿಗಳು ಮೇಧಾವಿಗಳಾಗಿ ಕೀರ್ತಿ ತರುವಂತವರಾಗಬೇಕು’  'Students should become brilliant and bring fame'

ಗುರ್ಲಾಪೂರ 17: ಸಮೀಪದ ಶಿವಪುರ (ಹ)ಹಳ್ಳೂರ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಿ ತಂದೆ ತಾಯಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಉನ್ನತ ಮಟ್ಟದ ಶಿಕ್ಷಣ ಕಲಿತು ಗುರಿಯಿಟ್ಟುಕೊಂಡು ಮೇಧಾವಿಗಳಾಗಿ ಕೀರ್ತಿ ತರುವಂತವರಾಗಬೇಕೆಂದು ಅಡವಿಸಿದ್ದರಾಮ ಮಹಾಸ್ವಾಮೀಜಿಗಳು ಹೇಳಿದರು.      

ಅವರು ಶಿವಾಪೂರ(ಹ) ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶಿವಾಪೂರ, ಹಳ್ಳೂರ, ಖಾನಟ್ಟಿ ಗ್ರಾಮದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ  ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದ್ದಕ್ಕೆ ಧನ್ಯವಾದಗಳು. ತಂದೆ ತಾಯಿ ಆಸೆ ಈಡೇರಬೇಕಾದರೆ ಮಕ್ಕಳು ಶಿಕ್ಷಣ ಕಲಿತು ವಿದ್ಯಾವಂತರಾಗಿ ಉನ್ನತ ಮಟ್ಟದ ಸ್ಥಾನ ಮಾನ ಪಡೆದಾಗ ಮಾತ್ರ. ವಿದ್ಯೆಗೆ ಸಿಗುವ ಬೆಲೆ ಆಸ್ತಿ ಅಂತಸ್ತಿಗೆ ಸಿಗೋದಿಲ್ಲ ತಂದೆ ತಾಯಿ ಕೃಷಿಯಲ್ಲಿ ಹಗಲಿರುಳು ನಿದ್ದೆ ನೀರಡಿಕೆ ಎನ್ನದೆ ದುಡಿದು ಖರ್ಚು ಮಾಡಿದ್ದಕ್ಕೆ ಉಪಯೋಗವಾಗಬೇಕು ಆಧುನಿಕ ಯುಗದಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಶಿಕ್ಷಣದ ಜೊತೆಗೆ ಮನೆ ಕೆಲಸ ಮಾಡುವ ಹವ್ಯಾಸ ಇಟ್ಟುಕೊಳ್ಳಬೇಕು. ಸಂಸ್ಕಾರ ನೀಡುವಲ್ಲಿ ತಂದೆ ತಾಯಿ ಪಾತ್ರ ಬಹಳ ಮಹತ್ವದ್ದು ವಿದ್ಯೆ ಎಲ್ಲರಿಗೂ ಒಲೆಯಲ್ಲ ಹೆಚ್ಚು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಸ್ಥಾನವನ್ನು ಪಡೆಯಿರಿ ಅಡವಿ ಸಿದ್ದೇಶ್ವರ ಆಶಿರ್ವಾದ ಸದಾ ಕಾಲವಿದೆ. ಮಕ್ಕಳು ತಂದೆ ತಾಯಿ ಕಷ್ಟ ಸುಖ ವಿಚಾರಿಸಬೇಕು ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಸಿ ಗೌರವಿಸಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.                              

ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಗಳಿಸಿ ಅತ್ತ್ಯುತ್ತಮ ಸಾದನೆ ಮಾಡಿದಾಗ ಮಾತ್ರ ಸಮಾಜದಲ್ಲಿ ಬೆಲೆ ಸಿಗುತ್ತದೆ. ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಕಡೆ ಗಮನ ಹರಿಸದೆ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಚಿಕ್ಕವರಿ ದ್ದಾಗಲೆ ಸನ್ಮಾರ್ಗ ಹಿಡಿದರೆ ಏನೆಲ್ಲಾ ಸಾದಿಸಬಹುದೆಂದು ಹೇಳಿದರು.                     

ವಿದ್ಯಾರ್ಥಿಗಳಾದ ನಿವೇದಿತಾ ಗುಣದಾಳ, ಅಶ್ವಿನಿ ರಡರಟ್ಟಿ, ಸುಷ್ಮಿತಾ ಗಿರೆನ್ನವರ, ಗಂಗವ್ವ ಮಾಲಗಾರ ಅನಿಸಿಕೆಗಳನ್ನು ಹಂಚಿಕೊಂಡರು. ಮಹಾಂತೇಶ ಕುಡಚಿ ಮಾತನಾಡಿದರು. ವ್ಯವಸ್ಥಾಪಕರಾದ ಭರತ ಸಾಯಣ್ಣವರ, ಮಹೇಶ ರೊಡ್ಡನ್ನವರ, ಅರುಣ ಅಥಣಿ, ಮಲ್ಲು ಹಡಗಿನಾಳ, ಕಾರ್ಯಕ್ರಮವನ್ನು ಸಂಗಪ್ಪ ಹಡಪದ ಸ್ವಾಗತಿಸಿ, ನಿರೂಪಿಸಿದರು.