ಘಟಪ್ರಭಾ: 'ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅಗತ್ಯ'

ಲೋಕದರ್ಶನ ವರದಿ

ಘಟಪ್ರಭಾ 21: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸುತ್ತ ಸಾಗಬೇಕು ಎಂದು ನಿದರ್ೇಶಕ ಬಿ.ಎಸ್.ಉದಗಟ್ಟಿ ಹೇಳಿದರು. 

ಅವರು ಶನಿವಾರ ಸ್ಥಳೀಯ ಸರ್.ಎಮ್.ವಿಶ್ವೇಶ್ವರಯ್ಯಾ ಆಯ್.ಟಿ.ಆಯ್ ಕಾಲೇಜಿನ ಸನ್-2019 ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. 

ತಾವು ಕಲಿತ ಶಿಕ್ಷಣ ತಮ್ಮ ಬಾಳಿನಲ್ಲಿ ಮಹತ್ವದ ಘಟ್ಟ. ಅದು ತಮ್ಮ ಜೀವನದ ತಿರುವನ್ನೇ ಬದಲಿಸಬಹುದು. ಕಾರಣ ಶ್ರದ್ಧೆಯಿಂದ ಕಲಿತು ಉನ್ನತ ಮಟ್ಟಕ್ಕೆ ಹೋಗಬೇಕು ಎಂದರು. ಕಾರ್ಯಕ್ರಮವನ್ನು ಜೋತಿ ಬೆಳಗಿಸುವದರ ಮೂಲಕ ಕಾಲೇಜಿನ ಉಪಾಧ್ಯಕ್ಷ ಎ.ಎಸ್.ವಾಡೇದ ಉದ್ಘಾಟಿಸಿ, ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲರಾದ ಎಸ್.ಸಿ.ಮಠದ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಥರ್ಿಗಳ ಜೀವನ ಬಂಗಾರದಂತೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾವು ಕಲಿತ ಕಾಲೇಜಿಗೆ ಕೀತರ್ಿ ತರುವದರೊಂದಿಗೆ ಸಮಾಜದಲ್ಲಿ  ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳ ಅನಸಿಕೆಗಳು, ಬಹುಮಾನ ವಿತರಣೆ ನಡೆಯಿತು. ವೇದಿಕೆಯಲ್ಲಿ ಎಸ್.ಎಸ್.ಕಬ್ಬೂರ,ಎ.ಎಸ್.ವಾಡೇದ, ಎಸ್.ಡಿ. ಶಿಂದೋಳೀಮಠ, ಡಿ.ಪಿ.ಲಕ್ಷೇಟ್ಟಿ, ಆರ್.ಎಸ್.ಕಂಬಾರ, ಜಿ.ಎಸ್.ರಜಪೂತ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು. ಶಿಕ್ಷಕ ಎಸ್.ಎಸ್.ಕಲ್ಯಾಣಿ ನಿರೂಪಿಸಿದರು, ಎಸ್.ಎ. ತೀರ್ಥನವರ ಬಹುಮಾನ ವಿತರಿಸಿದರು, ರೂಪಾ ಬೆನಕಟ್ಟಿ ವಂದಿಸಿದರು.