'ಶ್ರೀರಾಮಾಯಣ ದರ್ಶನಂ' ಯುಗಧರ್ಮದ ಆಶಯ ಯಶಸ್ವಿ'

ಲೋಕದರ್ಶನ ವರದಿ

ಬೆಳಗಾವಿ 17: ಕುವೆಂಪುರವರ 'ಶ್ರೀರಾಮಾಯಣ ದರ್ಶನಂ' ಕೃತಿಯು ಶ್ರೇಷ್ಠ ಮಹಾಕಾವ್ಯವಾಗಿದ್ದು ಯುಗಧರ್ಮದ ಆಶಯಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ರಾಮಾಯಣದ ಎಲ್ಲ ಪಾತ್ರಗಳೂ ಜೀವನ ಮೌಲ್ಯಗಳನ್ನು ಚೆನ್ನಾಗಿ ಪ್ರತಿಪಾದಿಸುತ್ತವೆ  ಎಂದು ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಇಲ್ಲಿನ ಸರದಾರ ಹೈಸ್ಕೂಲ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ದಿ.15ರಂದು ಕನರ್ಾಟ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಸರಕಾರಿ ಪ್ರಥಮ ದಜರ್ೆ ಮಹಿಳಾ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ ಕುವೆಂಪು ರಚಿತ 'ಶ್ರೀರಾಮಾಯಣ ದರ್ಶನಂ' ಉಪನ್ಯಾಸ ಮತ್ತು ಕುವೆಂಪು ಕುರಿತ ವಿದ್ಯಾಥರ್ಿಗಳಿಂದ ಸ್ವರಚಿತ ಕವನ ವಾಚನ ಕಾರ್ಯಕ್ರಮವು ಉದ್ದೇಶಿಸಿ ಅವರು ಮಾತನಾಡಿ, ವಿಷಯ ವಸ್ತು ನಿರೂಪಣೆ, ಉದ್ದೇಶ, ವಿನ್ಯಾಸ, ಸೃಷ್ಟಿ ದರ್ಶನ, ಪಾತ್ರಪೋಷಣೆಯಲ್ಲಿಯೂ ಕುವೆಂಪು ಮಹಾಕಾವ್ಯ ಮೂಲರಾಮಾಯಣಕ್ಕಿಂತ ಭಿನ್ನವಾಗಿ ಸಮಕಾಲೀನ ಯುಗದ ಆಶಯಗಳನ್ನು ಪ್ರಸ್ತಾಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿ ಕನರ್ಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ಮಾತನಾಡಿ, ಶ್ರೀರಾಮಾಯಣ ದರ್ಶನಂ ಕಾವ್ಯವು ರಾವಣತ್ವವನ್ನು ಕಳೆದುಕೊಂಡು ರಾಮತ್ವವನ್ನು ಬೆಳಗಿಸಿಕೊಳ್ಳಲು ಆಮೂಲಕ ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡಲು ಒಂದು ಸಮರ್ಥ ಪ್ರಾತ್ಯಕ್ಷಿಕೆಯನ್ನು ಒದಗಿಸುತ್ತದೆ. ಈ ಸೃಷ್ಠಿಯಲ್ಲಿ ಪಾಪಿಗಳೂ ತಮ್ಮನ್ನು ಉದ್ಧರಿಸಿಕೊಳ್ಳಲು ಅವಕಾಶ ಒದಗಿಸುತ್ತದೆ. ಎನ್ನುವುದು ಈ ಮಹಾಕಾವ್ಯದ ಸಂದೇಶವಾಗಿದೆ ಎಂದರು. 

ಸ್ವಾತಿ, ಕೃತಿಕಾ, ದಾಕ್ಷಾಯಣಿ ರೇಣುಕಾ, ರೂಪಾ, ಮಲಪ್ರಭಾ, ರಾಣಿ, ಲಾವಣ್ಯ, ದೀಕ್ಷಾ, ವಿನಾಯಕ ಹಾಗೂ ನೇತ್ರಾ ನಂದಿಹಳ್ಳಿ, ಅವರು ಕುವೆಂಪು ಕುರಿತ ಸ್ವರಚಿತ ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನಸೆಳೆದರು. ಪ್ರಾಚಾರ್ಯ  ಡಾ. ಈಶ್ವರಚಂದ್ರ  ಉದ್ಘಾಟಿಸಿದರು. ಕನರ್ಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಪಾರ್ವತಿ ಪಿಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸಮ್ಮ ಗಂಗನಳ್ಳಿ ಸ್ವಾಗತಿಸಿದರು. ಸೀಗಿಹಳ್ಳಿ ಕವನ ವಾಚಿಸಿದರು. ಪ್ರಾಚಾರ್ಯ ಎಮ್ ಎಸ್ ಇಂಚಲ್, ನೀಲಗಂಗಾ ಚಿರಂತಿಮಠ, ಸುನಿತಾ ಸೊಲ್ಲಾಪುರೆ, ಡಾ. ಜಗಜಂಪಿ ಹಾಗೂ ಇತರರು ಇದ್ದರು.