ಬೆಳಗಾವಿ: 'ಶ್ರೀನಿವಾಸ ವೈದ್ಯ ಅವರದ್ದು ಉತ್ತರಕನರ್ಾಟಕದ ಆಪ್ತಭಾಷೆ'

ಲೋಕದರ್ಶನ ವರದಿ

ಬೆಳಗಾವಿ 01:  ಶ್ರೀನಿವಾಸ ವೈದ್ಯ ಅವರದ್ದು ಉತ್ತರ ಕನರ್ಾಟಕದ ತುಂಬ ಆಪ್ತವಾದ ಭಾಷೆ. ಭಾಷೆಯ ಸೊಗಡನ್ನು ಸವಿಯಲೆಂದೆ ಅವರ ಸಾಹಿತ್ಯವನ್ನು ಓದಬೇಕು. ವೈದ್ಯ ಅವರ 'ಹಳ್ಳ ಬಂದು ಹಳ್ಳ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ. ಅವರ ಕೃತಿಗಳನ್ನು ನೀವು ಓದಲೇಬೇಕು ಎಂದು ರಂಗಸಂಪದದ ಅಧ್ಯಕ್ಷ ಡಾ.ಅರವಿಂದ ಕುಲಕಣರ್ಿ ಇಂದಿಲ್ಲಿ ಹೇಳಿದರು. 

ನಗರದ ಸಾಹಿತ್ಯ ಭವನದಲ್ಲಿ  ಇಂದು ದಿ. 31 ಮಂಗಳವಾರದಂದು ಸಾಯಂಕಾಲ 7 ಗಂಟೆಗೆ ಧಾರವಾಡದ ಟೂರಿಂಗ್ ಟಾಕೀಜ ತಂಡದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಖ್ಯಾತ ಕಥೆಗಾರ ಶ್ರೀನಿವಾಸ ವೈದ್ಯ ಅವರ ಕತೆಯಾಧಾರಿತ "ಶ್ರದ್ಧಾ" ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.  ಕಾರ್ಯಕ್ರಮದಲ್ಲಿ ಕೃತಿಕಾರ ಶ್ರೀನಿವಾಸ ವೈದ್ಯ ಅವರ ಸಾಹಿತ್ಯ ಕುರಿತು ಪರಿಚಯಿಸುತ್ತ ಮೇಲಿನಂತೆ ಹೇಳಿದರು.

ರಂಗಕಮರ್ಿ ಮಲ್ಲಿಕಾಜರ್ುನ ಮಠದ ಅವರು ಮಾತನಾಡುತ್ತ ಏಣಗಿ ಬಾಳಪ್ಪನವರ ಕುರಿತು ಮಾತನಾಡುವುದು ತುಂಬ ಕಷ್ಟದ ಕೆಲದ. ಮಾತಿಗೆ ಮೀರಿದ ವ್ಯಕ್ತಿತ್ವ ಏಣಗಿ ಬಾಳಪ್ಪನವರದ್ದು ಅವರ ಅದ್ಬುತವಾದ ಕಂಠ ಹಾಗೂ ಅಭಿನಯದಿಂದ ಎಲ್ಲರ  ಮನವನ್ನು ಗೆದ್ದಿದ್ದರು. ನಾಟಕ ಕ್ಷೇತ್ರಕ್ಕೆ ಒಂದು ಹೊಸ ತಿರುವನ್ನೇ ತಂದವರು ಬಾಳಪ್ಪನವರು ಎಂದು ಹೇಳಿ ಅವರೊಂದಿಗೆ ಕಳೆದ ಅಪರೂಪದ ಕ್ಷಣಗಳನ್ನು ಹಂಚಿಕೊಂಡರುಎಂದು ಹೇಳಿದರು. 

ಪತ್ರಕರ್ತ ಮುರುಗೇಶ ಶಿವಪೂಜಿಯವರು ಮಾತನಾಡುತ್ತ ನಾಟಕವೆನ್ನುವುದು  ನಿಂತೆ ಹೋಯಿತೋ ಎಂಬ ಭಯ ನಿಮರ್ಾಣವಾಗಿತ್ತು. ಆದರೆ ಈಗ ಆ ಭಯದಿಂದ ಹೊರಬಂದಿರುವಂತೆ ಅನ್ನಿಸುತ್ತಲಿದೆ ಏಕೆಂದರೆ ಎಲ್ಲ ಕಡೆಗೆ ನಾಟಕಗಳು ಪ್ರದರ್ಶನಗಳು ಕಂಡು ಬರುತ್ತಲಿವೆ. ಆದರೆ ನಾಟಕ ನೋಡಲು ಬರುವುದೇ ಮನರಂಜನೆಗಾಗಿ ಇಂದಿನ ನಾಟಕಗಳಲ್ಲಿ ಆ ಮನರಂಜನೆ ಕೊರತೆ ಎದ್ದು ಕಾಣುತ್ತಿದೆಯೇನೋ ಎಂದು ಭಾಸವಾಗುತ್ತಲಿದೆ. ಪ್ರೇಕ್ಷಕರು ಹುಡುಕಿಕೊಂಡು ಬರುವಂತಹ ನಾಟಕಗಳು ಪ್ರದರ್ಶನಗೊಳ್ಳಲಿ ಎಂದು ಹೇಳಿದರು.

ಲೇಖಕ ಯ. ರು. ಪಾಟೀಲ,  ಹತ್ತು ಪುಟಗಳ ಕತೆಯನ್ನು ಸುಂದರ ನಾಟಕವನ್ನಾಗಿ ಕಟ್ಟಿದ್ದಾರೆ. ಇದರಲ್ಲಿ ನಿದರ್ೇಶಕರ ವಿಜುಯ ತೇಲಿಯವರ ಜಾಣ್ಮೆ ಎದ್ದು ಕಾಣುತ್ತದೆ ಎಂದು ಹೇಳದರು.

"ಶ್ರಾದ್ಧ" ನಾಟಕ ಮಕ್ಕಳಿಗೆ ತಂದೆ ಗುಣ ಕಠೋರವೆನ್ನಿಸಿದರೂ ಅದರ ಹಿಂದೆ ಪ್ರೀತಿ, ಅಂತಕರಣ ತುಂಬಿರುತ್ತದೆ. ಮಕ್ಕಳ ಶ್ರೆಯೋಭಿವೃದ್ಧಿ ಕುರಿತೆ ಚಿಂತಿಸುತ್ತಿರುತ್ತಾನೆ ಎಂಬುದೇ ನಾಟಕದ ಸಾರವಾಗಿತ್ತು. ಪ್ರಮುಖ ಪಾತ್ರ ವಹಿಸುವುದರೊಂದಿಗೆ ನಾಟಕವನ್ನು ಉಮೇಶ ತೇಲಿ ನಿದರ್ೇಶಿಸಿದ್ದರು