ದಿ. 9 ರಂದು ಸಂತ ಶಿಶುನಾಳ ಶರೀಫ ಶಿವಯೋಗಿ ನಾಟಕ

ದಿ. 9 ರಂದು ಸಂತ ಶಿಶುನಾಳ ಶರೀಫ ಶಿವಯೋಗಿ ನಾಟಕ  'Santa Shishunala Sharifa Shivayogi' play on the 9th

ಲೋಕದರ್ಶನ ವರದಿ 

ಬೆಳಗಾವಿ 7: ಡಾ. ಮಲ್ಲಿಕಾರ್ಜುನ ಸಿಂದಗಿ ರಚಿಸಿರುವ  ‘ಸಂತ ಶಿಶುನಾಳ ಶರೀಫ ಶಿವಯೋಗಿ ಆಧ್ಯಾತ್ಮಿಕ ನಾಟಕವು ಇದೇ ದಿ. 9 ರವಿವಾರದಂದು ಮಧ್ಯಾಹ್ನ 3.15 ಕ್ಕೆ ಹಾಗೂ ಸಾಯಂಕಾಲ 6.15 ಕ್ಕೆ ನಗರದ ಎಸ್‌. ಪಿ. ಆಫೀಸ್ ಹತ್ತಿರವಿರುವ ಕುಮಾರ ಗಂಧರ್ವ ರಂಗ ಮಂದಿರದಲ್ಲಿ  ಪ್ರದರ್ಶನಗೊಳ್ಳಲಿದೆ. ರಂಗಪ್ರಿಯರಾಗಿರುವ ಬೆಳಗಾವಿ ಜನತೆ ಈ ನಾಟಕವನ್ನು ನೋಡಿ  ಪ್ರೋತ್ಸಾಹಿಸಬೇಕೆಂದು ಕಲಾವಿದರಾದ ವೀರೇಶ ಚಳಗೇರಿ ಮತ್ತು ಹನುಮಂತಪ್ಪ ಬಾಗಲಕೋಟ ಅವರು ಕೇಳಿಕೊಂಡರು.  

ಇಲ್ಲಿನ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಬಾಗಲಕೋಟೆಯ ವೀರೇಶ್ವರ ನಾಟ್ಯ ಸಂಘ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಹಯೋಗದೊಂದಿಗೆ ಪ್ರದರ್ಶನಗೊಳ್ಳಲಿರುವ ಸಂತ ಶಿಶುನಾಳ ಶರೀಫ ಶಿವಯೋಗಿ ನಾಟಕ ಕುರಿತು  ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದ  ಬಿ. ಎ. ಪಾಟೀಲ, ಸೀಮಾ ಇನಾಮದಾರ, ಹೇಮಾ ಪಾಟೀಲ, ಮಹಾಂತೇಶ ರಣಗಟ್ಟಿಮಠ ಮಾತನಾಡಿ ಸಂತ ಶಿಶುನಾಳ ಶರೀಫ ಶಿವಯೋಗಿ ನಾಟಕವು ಎರಡು ಧರ್ಮಗಳನ್ನು ಒಂದುಗೂಡಿಸುವ ಸುಂದರ ನಾಟಕ. ಇಂದು ಮೊಬೈಲ್ ಯುಟ್ಯೂಬ್ ಹಾವಳಿಗಳಿಂದ ಜನರು ರಂಗಭೂಮಿ ಅಭಿರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನಾಟಕ ಸಂಸ್ಕೃತಿಯನ್ನು ಉಳಿಸಸುವುದು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.