ಬೆಳಗಾವಿಯಲ್ಲಿ ‘ಸಂಚಯ’ ಅಂಚೆ ಚೀಟಿ : ನಾಣ್ಯ ಪ್ರದರ್ಶನ

ಬೆಳಗಾವಿಯಲ್ಲಿ ‘ಸಂಚಯ’ ಅಂಚೆ ಚೀಟಿ : ನಾಣ್ಯ ಪ್ರದರ್ಶನ 'Sanchaya' postage stamp: coin exhibition in Belgaum

ಲೋಕದರ್ಶನ ವರದಿ 

 ಬೆಳಗಾವಿ 29: ಮಹಾಂತೇಶ ನಗರದ ನಿವಾಸಿಗಳ ಸಂಘ, ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದ ಸಂಯುಕ್ತ ಆಶ್ರಯದಲ್ಲಿ “ಸಂಚಯ” ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಣಾ ಪ್ರದರ್ಶನವು ಮಹಾಂತೇಶ ನಗರದಲ್ಲಿ ನಡೆಯಿತು.  

ಕಾರ್ಯಕ್ರಮವನ್ನು ಅಂಚೆ ಇಲಾಖೆ ಬೆಳಗಾವಿ ವಿಭಾಗದ ಅಧಿಕಾರಿಗಳು ಉದ್ಘಾಟಿಸಿದರು. ಅವರು ಮಾತನಾಡಿ, ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಜ್ಞಾನವೃದ್ಧಿಗೆ ಸಹಕಾರಿ ಆಗಿದ್ದು, ವಿವಿಧ ಕಾಲಘಟ್ಟಗಳ ಮಹತ್ವದ ಘಟನೆಗಳನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.  

ಮಹಾಂತೇಶ ನಗರ ನಿವಾಸಿಗಳ ಸಂಘದ ಅಧ್ಯಕ್ಷರು, ಶಿಕ್ಷಣ ತಜ್ಞರು ಹಾಗೂ ಇತರ ಗಣ್ಯರು ಮಾತನಾಡಿ, ಮೊಬೈಲ್ ಯುಗದಲ್ಲಿ ಅಂಚೆ ಚೀಟಿ ಸಂಗ್ರಹಣೆಯ ಆಸಕ್ತಿ ಕಡಿಮೆಯಾಗುತ್ತಿದ್ದರೂ ಇಂತಹ ಪ್ರದರ್ಶನಗಳು ಇತಿಹಾಸ ಸಂರಕ್ಷಣೆಗೆ ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.  ಸುಮಾರು 1500 ವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.