ಲೋಕದರ್ಶನ ವರದಿ
ಅಥಣಿ: ಉತ್ತರ ಕನರ್ಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ 25000 ಕೋಟಿ ಅನುದಾನವನ್ನು ಮೀಸಲಿಡುವುದಾಗಿ ಸಿಎಮ್ ಯಡಿಯುರಪ್ಪ ಹೇಳಿದರು. ಅವರು ಕಾಗವಾಡ ಮತಕ್ಷೇತ್ರದ ಉಪ ಚುನಾವಣಾರ್ಥ ಬಿಜೆಪಿ ಅಭ್ಯಥರ್ಿ ಶ್ರೀಮಂತ ಪಾಟೀಲ ಪರ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಉತ್ತರ ಕನರ್ಾಟಕದ ನೀರಾವರಿ ಯೋಜನೆಗಳಿಗೆ ಹಿಂದಿನ ಸರಕಾರದಲ್ಲಿ ಆದ್ಯತೆ ನೀಡಿರಲಿಲ್ಲ ಹೀಗಾಗಿ ಬಜೆಟನಲ್ಲಿ ಹಣ ಮೀಸಲಿಟ್ಟಿರಲಿಲ್ಲ ಇದರಿಂದ ನೀರಾವರಿ ಯೋಜನೆಗಳು ನೆನಗುದಿಗೆಗೆ ಬಿದ್ದಿವೆ ಎಂದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಅನುದಾನವನ್ನು ಯಾವುದೇ ಅಡತಡೆ ಇಲ್ಲದೆ ಬಿಡುಗಡೆಗೊಳಿಸುತ್ತೇನೆ ಮತ್ತು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸುವ ಭರವಸೆ ನೀಡಿದರು.
ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳಿಗೆ ಆದ್ಯತೆ ನೀಡದೇ ಇದ್ದುದರಿಂದ ಸಮಿಶ್ರ ಸರಕಾರದಿಂದ 17 ಶಾಸಕರು ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಸದ್ಯ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯಥರ್ಿಗಳು ನಿಶ್ಚಿತವಾಗಿ ಗೆಲುವು ಸಾಧಿಸುತ್ತಾರೆ ಮತ್ತು ಮುಂದಿನ ವಿಧಾನ ಸಭೆ ಅವಧಿ ಮುಗಿಯುವವರೆಗೂ ಬಿಜೆಪಿ ಸರಕಾರ ಸುಭದ್ರವಾಗಿ ನಡೆಯಲಿದೆ ಎಂದ ಅವರು ಕಾಗವಾಡ ಕ್ಷೇತ್ರಕ್ಕೆ ಶ್ರೀಮಂತ ಪಾಟೀಲ ಚುನಾವಣೆಗೆ ಸ್ಪಧರ್ಿಸಿಲ್ಲ ಈ ಕ್ಷೇತ್ರಕ್ಕೆ ಸ್ವತಃ ಯಡಿಯುರಪ್ಪ ಸ್ಪಧರ್ೆ ಮಾಡಿದ್ದಾರೆ ಎಂದು ಭಾವಿಸಿ ಬಿಜೆಪಿಗೆ ಮತ ಚಲಾಯಿಸಿ ಬಿಜೆಪಿ ಅಭ್ಯಥರ್ಿ ಶ್ರೀಮಂತ ಪಾಟೀಲ ಇವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಡಿಸಿಎಮ್ ಲಕ್ಷ್ಮಣ ಸವದಿ ಮಾತನಾಡಿ, ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿ ಶ್ರೀಮಂತ ಪಾಟೀಲ ಮತ್ತು ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯಥರ್ಿ ಮಹೇಶ ಕುಮಠಳ್ಳಿ ಪರವಾದ ವಾತಾವರಣ ಇದೆ.
ಈ ಎರಡೂ ಕ್ಷೇತ್ರಗಳ ಮತದಾರರು ಬಿಜೆಪಿ ಪರವಾಗಿದ್ದಾರೆ ಹೀಗಾಗಿ ಕನಿಷ್ಠ 30 ಮತಗಳ ಅಂತರದಿಂದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದ ಅವರು ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯುರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಂಡಿದ್ದು, ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಅಭ್ಯಥರ್ಿ ಶ್ರೀಮಂತ ಪಾಟೀಲ ಇವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯಥರ್ಿ ಶ್ರೀಮಂತ ಪಾಟೀಲ ಮಾತನಾಡಿ, ಕಾಗವಾಡ ಕ್ಷೇತ್ರದ ಅಭಿವೃದ್ಧಿಗಾಗಿ ಅನಿವಾರ್ಯವಾಗಿ ಸಮಿಶ್ರ ಸರಕಾರದಿಂದ ಹೊರ ಬಂದು ಶಾಸಕ ಸ್ಥಾನ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ. ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ, ಕ್ಷೇತ್ರದ 23 ಕೆರೆಗಳ ತುಂಬಿಸುವ ಯೋಜನೆ, ಬೇಸಿಗೆ ಅವಧಿಯಲ್ಲಿ ಕೃಷ್ಣಾ ನದಿಗೆ 4 ಟಿಎಮ್ಸಿ ನೀರು ಮಹಾರಾಷ್ಟ್ರದಿಂದ ಬಿಡುಗಡೆಗೊಳಿಸಬೇಕು ಈ ಬೇಡಿಕೆಗಳನ್ನು ಈಡೀರಿಸುವ ಭರವಸೆ ಸಿಎಮ್ ಯಡಿಯುರಪ್ಪ ನೀಡಿದ್ದಾರೆ ಹೀಗಾಗಿ ಬಿಜೆಪಿ ಸೇರ್ಪಡೆಯಾಗಿರುವೆ ಎಂದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡರಾದ ನಿಂಗಪ್ಪ ಖೋಕಲೆ, ಅಪ್ಪಾಸಾಹೇಬ ಅವತಾಡೆ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.