ಬೆಳಗಾವಿ 16: ಮಹಿಳೆಯರ ಕುರಿತು ಸಕಾರಾತ್ಮ ಮನೋಭಾವನೆಯನ್ನು ಮೂಡಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಹಾಗೂ ಮಹಿಳಾ ಸಮಾಖ್ಯಾಕನರ್ಾಟಕ ಬೆಳಗಾವಿ ಇವರ ಸಹಭಾಗಿತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ "ಲಿಂಗತ್ವ ತರಬೇತಿ"ಯ ಕಾಯರ್ಾಗಾರವನ್ನು ದಿ.14ರಂದು ಮಹಾವಿದ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾಯರ್ಾಗಾರವನ್ನು ಉದ್ಘಾಟಿಸಿದ ಬೆಳಗಾವಿ ಜಿಲ್ಲಾ ಪ್ರೊಗ್ರಾಮ್ ಆಫೀಸರ್ ಎಚ್.ಬಿ. ನದಾಫ ಮಾತನಾಡುತ್ತಾ ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ನುಡಿದರು. ನಮ್ಮ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ಮಹಿಳೆ ಶೋಷಣೆಗೆ ಒಳಗಾಗುತ್ತಾ ಬಂದಿದ್ದು, ಸಂಪೂರ್ಣ ಸ್ವಾವಲಂಬಿಯಾಗಬೇಕಾದರೆ ಅವಳಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳು ದೊರೆಯಬೇಕು ಎಂದರು. ಒಂದು ಕುಟುಂಬದಲ್ಲಿ ಪುರುಷರಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಮಹಿಳೆಯರಿಗೆ ಕೊಡುವುದಿಲ್ಲ. ಆ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲು ಇಂಥ ಕಾಯರ್ಾಗಾರಗಳ ಅವಶ್ಯಕತೆ ಇದೆ ಎಂದು ನುಡಿದರು.
ಕಾಯರ್ಾಗಾರದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಬಿ.ಎಸ್. ನಾವಿ ಮಾತನಾಡುತ್ತಾ ಹಿಂದೆ ಸಂಸ್ಕೃತಿ-ಸಂಪ್ರದಾಯದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಶೋಷಿಸಲಾಗುತಿತ್ತು. ಆದರೆ ಇಂದು ಬದಲಾಗುತ್ತಿರುವ ಸಂದರ್ಭದಲ್ಲಿ ಎಲ್ಲವೂ ಬದಲಾಗಿದೆ. ಮಹಿಳೆಯರೂ ಸಹ ಅವಕಾಶಗಳನ್ನು ಬಳಿಸಿಕೊಂಡು ಸಬಲರಾಗಬೇಕೆಂದು ನುಡಿದರು. ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ವರದಕ್ಷಣೆ ಮತ್ತು ಭ್ರೂಣಹತ್ಯೆಯಂಥ ಅನಿಷ್ಟ ಪದ್ಧತಿಗಳು ತೊಲಗಿ, ಮಹಿಳೆಯರ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಯುವಕರಿಗೆ ಇಂಥ ಜಾಗೃತಿ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು ಎಂದು ನುಡಿದರು.
ವಿಮಲಾಕ್ಷಿ ಹಿರೇಮಠ ಪ್ರಭಾರಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಮಹಿಳಾ ಸಮಾಖ್ಯಾ ಕನರ್ಾಟಕ ಯಾದಗಿರಿ ಕಾಯರ್ಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾಯರ್ಾಗಾರವನ್ನು ನಡೆಸಿಕೊಟ್ಟರು. ಡಾ. ಹನುಮಂತಪ್ಪ ಸಂಜೀವಣ್ಣನವರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಮಹಿಳಾ ಸಮಾಖ್ಯ ಕನರ್ಾಟಕ ಸಂಯೋಜಕ ನಾಗರತ್ನಾ ಗೂಳಿ ಅವರು ಉಪಸ್ಥಿತರಿದ್ದರು. ಬಸಮ್ಮ ಗೋರಬಾಳ ವಂದಿಸಿದರು. ಸುವಣರ್ಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಗಾರದಲ್ಲಿ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಬೆಳಗಾವಿಯ ಮಹಿಳಾ ಸಮಾಖ್ಯಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.