ವೃದ್ಯಾಪದ ಬದುಕಿಗೆ ?ವಾಸ್ತಲ್ಯ ಮನೆ' ಆಸರೆ: ಸತೀಶ್ ನಾಯ್ಕ್‌

ವೃದ್ಯಾಪದ ಬದುಕಿಗೆ ?ವಾಸ್ತಲ್ಯ ಮನೆ' ಆಸರೆ: ಸತೀಶ್ ನಾಯ್ಕ್‌ 'Realistic home' is a support for old age life: Satish Naik

ಲೋಕದರ್ಶನ ವರದಿ 

ಕರೆಡಿಗುದ್ದಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾಸ್ತಲ್ಯ ಕಾರ್ಯಕ್ರಮದ ಮೂಲಕ ಕರೆಡಿಗುದ್ದಿ ಗ್ರಾಮದ ಕಾಶವ್ವಾ ಬಟಗರ ರವರಿಗೆ ನಿರ್ಮಿಸಿ ಕೊಡಲಾದ ನೂತನ ಮನೆಯನ್ನು ಬೆಳಗಾವಿ ಜಿಲ್ಲೆಯ ನಿರ್ದೇಶಕರಾದ ಸತೀಶ್ ನಾಯ್ಕ್‌ ರವರು ಹಸ್ತಾಂತರ ಮಾಡಿದರು. ನಿರ್ದೇಶಕರಾದ ಸತೀಶ್ ನಾಯ್ಕ್‌ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವ-ಸಹಾಯ ಸಂಘಗಳನ್ನು ರಚಿಸಿ ಬ್ಯಾಂಕ್ ಮೂಲಕ ಸಂಘಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಬಡವರ ದುರ್ಬಲ ವರ್ಗದವರ ನಿರ್ಗತಿಕರ ಪರವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಹಾಗೆಯೇ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಮಹಿಳೆಯರಿಗಾಗಿ ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. 

ಅದರಂತೆ ಕರ್ನಾಟಕದಾದ್ಯಂತ 20000 ನಿರ್ಗತಿಕರಿಗೆ ಪ್ರತಿತಿಂಗಳು ಮಾಸಾಶನ ನೀಡಲಾಗುತ್ತಿದೆ ಹಾಗೂ ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ 850 ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವ ಕೆಲಸ ಮಾಡಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾರಿಹಾಳ ಪೊಲೀಸ್ ಠಾಣೆಯ ಕಖಋ ಚಂದ್ರಶೇಖರವರು ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಬಡವರ ಪಾಲಿನ ಸಂಜೀವಿನಿಯಾಗಿದೆ. ಮಕ್ಕಳ ವಿಧ್ಯಾಭ್ಯಾಸಕ್ಕೆ , ಮನೆನಿರ್ಮಾಣಕ್ಕೆ, ಸ್ವ ಉದ್ಯೋಗ ಮಾಡುವ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. 

ಸರಕಾರದಿಂದ ಸೌಲಭ್ಯ ವಂಚಿತರಾಗಿರುವ ಅನೇಕ ನಿರ್ಗತಿಕರಿಗೆ ಧರ್ಮಸ್ಥಳ ಸಂಸ್ಥೆ ಆಸರೆಯಾಗಿದೆ.ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಉತ್ತಮವಾಗಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೂರು ಇಲ್ಲದೆ ಇರುವವರಿಗೆ ಮನೆಯನ್ನು ಕಟ್ಟಿ ಕೊಡುವ ಮೂಲಕ ಆಸರೆಯನ್ನು ನೀಡಿದೆ.. ಹಾಗೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುಭಾಷ್ ಪಿ ಸಿ ,ತಾಲೂಕು ಪಂಚಾಯತಿ ಅಧ್ಯಕ್ಷರು ಶಂಕರ್ ಗೌಡ ಪಾಟೀಲ್, ಗ್ರಾಮ ಪಂಚಾಯತ ಅಧ್ಯಕ್ಷರು ಪಾರವ್ವ ಅರಬಳ್ಳಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಲಪ್ಪ ನೇಸರಗಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಬಸವರಾಜ ಹಣ್ಣಿಕೇರಿ, ಬಸವನ ಗೌಡ ಪಾಟೀಲ್,ವಿಮಾ ಸಮನ್ವಯಾಧಿಕಾರಿ ಧನಂಜಯ್, ಮೇಲ್ವಿಚಾರಕರಾದ ದಯಾನಂದ್ ನಾಯ್ಕ್‌, ಭರತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಮೀನಾರಾಣಿ, ಸೇವಾಪ್ರತಿನಿಧಿಗಳಾದ ಮಹಾದೇವಿ, ಸಂಗೀತಾ, ಸಂಘದ ಸದಸ್ಯರು, ಊರಿನ ಗಣ್ಯರು, ಹಿರಿಯರು ಭಾಗವಹಿಸಿದ್ದರು.