ನವದೆಹಲಿ,
ಮಾ 27, ದೂರದರ್ಶನದಲ್ಲಿ ಶನಿವಾರದಿಂದ 'ರಾಮಾಯಣ' ಸರಣಿ ಮರು
ಪ್ರಸಾರಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್
ಜಾವಡೇಕರ್ ಹೇಳಿದ್ದಾರೆ. ದಶಕಗಳ ಹಿಂದೆ ಅತ್ಯಂತ ಪ್ರಸಿದ್ಧಿ ಹೊಂದಿದ್ದ ಪೌರಾಣಿಕ
ಧಾರವಾಣಿ ರಾಮಾಯಣವನ್ನು ಮರು ಪ್ರಸಾರ ಮಾಡಲಾಗುವುದು. ಇದು ಬೆಳಗ್ಗೆ 9ರಿಂದ 10ರಿಂದ
ಒಂದು ಅಧ್ಯಾಯ ಹಾಗೂ ರಾತ್ರಿ 9ರಿಂದ 10ರವರೆಗೆ ಮರುಪ್ರಸಾರವಾಗಲಿದೆ ಎಂದು ಅವರು ಟ್ವೀಟ್
ಮೂಲಕ ತಿಳಿಸಿದ್ದಾರೆ. ರಾಮಾಯಣ ಧಾರವಾಹಿ ಸುಪ್ರಸಿದ್ಧವಾಗಿದ್ದು, ರಾಮ, ಹನುಮಂತ,
ಸೀತೆಯ ಪಾತ್ರ ನಿರ್ವಹಿಸಿದವರನ್ನು ಜನರು ನಿಜವಾದ ದೇವರೇ ಎಂದು ಪರಿಗಣಿಸುತ್ತಿದ್ದರು.
ವಿಶೇಷವಾಗಿ ಈ ಧಾರವಾಹಿಯನ್ನು ಬಾಲ್ಯದಲ್ಲಿ ನೋಡಿದವರು ಈಗ ಮತ್ತೊಮ್ಮೆ ಅದನ್ನು
ವೀಕ್ಷಿಸಬಹುದಾಗಿದೆ.