ಬೆಳಗಾವಿ: 'ಸ್ವಾತಂತ್ರ್ಯದ ಸದ್ಭಳಕೆಯ ಮೂಲಕ ಭವಿಷ್ಯ ರೂಪಿಸಿಕೊಳ್ಳಿ '

ಲೋಕದರ್ಶನ ವರದಿ

ಬೆಳಗಾವಿ 16:  "ಈ ಸ್ವಾತಂತ್ರ್ಯ ನಮಗೆ ಅನೇಕ ಮಹನೀಯರ ತ್ಯಾಗ, ಬಲಿದಾನಗಳ ಕೊಡುಗೆ, ಈ ಸ್ವಾತಂತ್ರ್ಯವನ್ನು ಸರಳತೆಯ ದೃಷ್ಟಿಯಿಂದ ಬಳಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ನಿವೃತ್ತ ವಾಯುಸೇನಾ ಅಧಿಕಾರಿ ಬಸವರಾಜ ವನ್ನೂರ ಅವರು ಹೇಳಿದರು. 

ಅವರು ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜು, ಬೆಳಗಾವಿಯಲ್ಲಿ ದ್ವಜಾರೋಹಣ  ಕಾರ್ಯವನ್ನು ನೆರವೇರಿಸಿ ಮಾತನಾಡುತ್ತಿದ್ದರು. "ಸ್ವೇಚ್ಛೆಯಾಗದೆ ನಿಮ್ಮನ್ನು ಅರಿತು ಗುಣಾತ್ಮಕತೆ ಬೆಳೆಸಿಕೊಳ್ಳಿ, ಆ ಮೂಲಕ ದೇಶದ ಕೀತರ್ಿಯನ್ನು ಹೆಚ್ಚಿಸಿ" ಎಂದು ಅವರು ಕರೆ ನೀಡಿದರು. 

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ  ಪ್ರಾಚಾರ್ಯ ಎಂ ವಿ ಭಟ್ಟ ಮಾತನಾಡಿ " ಭಾರತವನ್ನು ವಿಶ್ವಗುರು ಎಂದು ಕರೆಯುವುದು ಇಲ್ಲಿನ ಸಂಸ್ಕೃತಿಯ ಶ್ರೇಷ್ಠತೆಯ ಆಧಾರದ ಮೇಲೆ, ಆದರೆ ನಮ್ಮಲ್ಲಿ ಸಾಮೂಹಿಕ ಸಂಘಟನೆಯ ಕೊರತೆಯಿದೆ, ಅದನ್ನು ಸರಿದೂಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ " ಎಂದರು. ವೇದಿಕೆಯ ಮೇಲೆ ನಾಗರಿಕ ವಿಕಾಸ ವೇದಿಕೆಯ ಅಧ್ಯಕ್ಷ ಎಲ್ ಎಸ್ ಪಾಟೀಲ್, ಉಪಪ್ರಾಚಾರ್ಯರಾದ  ಆನಂದ ಖೋತ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಕುಂದ ಗೋಖಲೆ ಸ್ವಾಗತಿಸಿದರು. ಉಪನ್ಯಾಸಕಿ ಕೃತಿಕಾ ಶೆಟ್ಟಿ ವಂದನಾರ್ಪಣೆ ಮಾಡಿದರು. ಅಭಿಷೇಕ ಕುಂಬಾರ ಮತ್ತು ಐಶ್ವರ್ಯ ಅಡವಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.