ಹುಬ್ಬಳ್ಳಿ - ದಾವಣಗೆರೆಯಲ್ಲಿ ‘ಮಾರ್ಟಿನ್' ಇವೆಂಟ್

ಧೃವ ಸರ್ಜಾ ಅಭಿನಯದ ಬಹು ನೀರೀಕ್ಷಿತ ‘ಮಾರ್ಟಿನ್‌’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 11ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉತ್ತರ ಕರ್ನಾಟಕದ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿರುವ ಧೃವ ಸರ್ಜಾ ಹಾಗೂ ನಿರ್ಮಾಪಕ ಉದಯ್ ಕೆ. ಮೆಹ್ತಾ ಹುಬ್ಬಳ್ಳಿ, ದಾವಣಗೆರೆಯಲ್ಲಿ ‘ಮಾರ್ಟಿನ್' ಸಿನಿಮಾದ ಪ್ರಮೋಷನ್ ಇವೆಂಟ್ ಹಮ್ಮಿಕೊಂಡಿದ್ದಾರೆ. ‘ಮಾರ್ಟಿನ್' ಹಾಡನ್ನು ಹುಬ್ಬಳ್ಳಿಯಲ್ಲಿ ರೀಲೀಸ್ ಮಾಡಲಿದ್ದಾರೆ. ಅಕ್ಟೋಬರ್ 5 ರಂದು ಧೃವ ಸರ್ಜಾ ತಂಡ ಹುಬ್ಬಳ್ಳಿಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಸಿನಿಮಾದ ವಿಶೇಷತೆಗಳನ್ನು ಹಂಚಿಕೊಳ್ಳಲಿದ್ದಾರೆ. 

ಇನ್ನು ಅಕ್ಟೋಬರ್ 6ಕ್ಕೆ ದಾವಣಗೆರೆಯಲ್ಲಿ ಪ್ರಿ-ರೀಲೀಸ್ ಇವೆಂಟ್‌ನ್ನು ಶಾಮನೂರು ಶಿವಶಕರ​‍್ಪ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದ ಜನರ ಮನಸ್ಸನ್ನು ಗೆದ್ದಿರುವ ‘ಮಾರ್ಟಿನ್' ಸಿನಿಮಾ ದಸರಾ ಹಬ್ಬಕ್ಕೆ ರೀಲೀಸ್ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುವ ವಿಶ್ವಾಸದಲ್ಲಿದೆ. ಎ.ಪಿ.ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಮಾಳವಿಕ ಅವಿನಾಶ್ ಸೇರಿದಂತೆ ದೊಡ್ಡ ತಾರಗಣವಿದೆ.