‘ಆರ್ಥಿಕ ದಿವಾಳಿಯಿಂದ ದೇಶ ಕಾಪಾಡಿದ ಆಪದ್ಭಾಂಧವ ಪ್ರಧಾನಿ ಮನಮೋಹನಸಿಂಗ್‌’

'Manmohan Singh, the prime minister who saved the country from financial bankruptcy'

ಮಹಾಲಿಂಗಪುರ 28: 1991ರಲ್ಲಿ ಆರ್ಥಿಕ ದಿವಾಳಿಯಾಗುವ ಸ್ಥಿತಿಗೆ ಬಂದಿದ್ದ ಭಾರತಕ್ಕೆ ಶ್ರೇಷ್ಠ ಆರ್ಥಿಕ ನೀತಿಗಳಿಂದ ಮರುಜೀವ ನೀಡಿದ ಆಪದ್ಭಾಂಧವ ಶ್ರೇಷ್ಠ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಅಗಲಿಕೆಯಿಂದ ದೇಶಕ್ಕೆ  ತುಂಬಲಾರದ ನಷ್ಟವಾಗಿದೆ ಎಂದು ದಾವಣಗೆರೆ ಶಾಸಕ ಹಾಗೂ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು. 

ಶುಕ್ರವಾರ ರಾತ್ರಿ ಸ್ಥಳೀಯ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಮನಮೋಹನಸಿಂಗ್ ಹಾಗೂ ಪಟ್ಟಣದ ಹುತಾತ್ಮ ಯೋಧ ಮಹೇಶ ಮರೆಗೊಂಡ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೇರಿಕಾದಂತಹ ದೇಶವೂ ಸಹ ಮನಮೋಹನ ಸಿಂಗ್ ಅವರಿಂದ ಆರ್ಥಿಕ ಸಲಹೆ ಮತ್ತು ಮಾರ್ಗದರ್ಶನ ಕೇಳಿದ್ದು ನಮ್ಮ ದೇಶದ ಹಿರಿಮೆ, ಆರ್ಥಿಕ ತಜ್ಞರಾಗಿ, 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಅವರ ಸೇವೆ ಸುರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು ಎಂದರು. 

ಕಾಶ್ಮೀರ ವಾಹನ ದುರಂತದಲ್ಲಿ ಹುತಾತ್ಮನಾದ ಮಹಾಲಿಂಗಪುರದ ಯೋಧ ಮಹೇಶ ಮರೆಗೊಂಡ ಅವರ ಆತ್ಮಕ್ಕೂ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಹುತಾತ್ಮ ಯೋಧನಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಿದರು. 

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಹುತಾತ್ಮ ಯೋಧ ಮಹೇಶ ಮರೆಗೊಂಡ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿ, ಮೊಂಬತ್ತಿ ಬೆಳಗಿ ಮೌನಾಚರಣೆಯ ಮೂಲಕ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು. 

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಸ್ಥಳೀಯ ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾ ಅಧ್ಯಕ್ಷ ಬಲವಂತಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಡಾ.ಎ.ಆರ್‌.ಬೆಳಗಲಿ, ಮಲ್ಲಪ್ಪ ಸಿಂಗಾಡಿ, ಪ್ರಕಾಶ ಮಮದಾಪೂರ, ಅಬ್ದುಲ್ ರಜಾಕ್ ಬಾಗವಾನ, ನಾರಾಯಣ ಜೋಶಿ, ಸಯ್ಯದ ಯಾದವಾಡ, ಸುನಿಲಗೌಡ ಪಾಟೀಲ, ವಿನೋದ ಸಿಂಪಿ, ವಿಠ್ಠಲ ಸಂಶಿ, ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ನಜೀರ ಝಾರೆ, ಆನಂದ ಬಂಡಿ, ಮಹಾಲಿಂಗ ಮಾಳಿ, ನಜೀರ ಅತ್ತಾರ, ವಿಠ್ಠಲ ಕುಳಲಿ, ಈರ​‍್ಪ ಸೊನ್ನದ, ಸಿದ್ದು ಭೂಸನ್ನವರ, ಆನಂದ ಚಮಕೇರಿ ಸೇರಿದಂತೆ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.