'ಲಿಂಗಾಯತ ಧರ್ಮ ಎಲ್ಲರೂ ಅಪ್ಪಿಕೊಳ್ಳುವ ಧರ್ಮ

ಯಮಕನಮರಡಿ 24: ಲಿಂಗಾಯತ ಧರ್ಮ ಒಳಗೊಳ್ಳುವಿಕೆಯಿಂದ ಎಲ್ಲರೂ ಅಪ್ಪಿ-ಒಪ್ಪಿಕೊಳ್ಳುವ ಧರ್ಮವಾಗಿದೆ 20 ನೇಯ ಶತಮಾನದಲ್ಲಿ ಸ್ವತಂತ್ರ್ಯವಾಗಿ ಬದುಕುವ ಶಕ್ತಿ ಶರಣರಲ್ಲಿ ಎಂದು ಬೆಂಗಳೂರಿನ ಜಗದ್ಗುರು ಚೆನ್ನಬಸವಾನಂದ ಮಹಾಸ್ವಾಮಿಗಳು ಹೇಳಿದರು, ಅವರು ಸಮೀಪದ ಹೆಬ್ಬಾಳ ಗ್ರಾಮದಲ್ಲಿ ನಡೆದ ಬಸವ ಉತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ, ಪ್ರತಿಯೊಂದು ಗ್ರಾಮಗಳಲ್ಲಿ ಬಸವಣ್ಣನವರ  ತತ್ವ ಅನುಷ್ಠಾನಗೊಂಡರೆ ಭಾರತ ಬಸವ ಭಾರತವಾವಲ್ಲಿ ಸಂಶಯವಿಲ್ಲ ಎಂದರು, ಅವರು ನಡೆ-ನುಡಿ ಅರಿವು ಆಚರಗಳಿದ್ದಾಗ ಮಾತ್ರ ಸಮಾಜದಲ್ಲಿನ ಹಲವಾರು ಮೌಡ್ಯಾಚರಣೆ ದೂರವಾಗಲು ಸಾಧ್ಯ  ಎಂದರು,       ವೇದಿಕೆಯಲ್ಲಿ  ತರಳಬಾಳಿನ ಪಂಡಿತಾರಾದ್ಯ ಮಹಾಸ್ವಾಮಿಗಳು, ಚಿಂಚಣಿಯ ಅಲ್ಲಮಪ್ರಭು ಸ್ವಾಮಿಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಬೆಳಗಾವಿಯ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮಿಗಳು, ಬನ್ನೂರಿನ ಚೆನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿದ್ದ ಶರಣರನ್ನುದ್ದೇಶಿಸಿ ಮಾತನಾಡಿದರು,

 ಡಾ. ದಯಾನಂದ ನೂಲಿ ಅವರು ಆರೋಗ್ಯದಲ್ಲಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ಮತ್ತು ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮಾಡಿ ತಿಳಿಸುತ್ತಾ ಲಿಂಗ ಎಂಬ ಪದ ಸಂಸ್ಕೃತದಿಂದ ಬಂದಿದ್ದು ಲಿಂಗ ಪೂಜೆಯಿಂದ ಮನುಷ್ಯನ ಮೆದುಳನ್ನು ಕ್ರೀಯಾ  ಶೀಲತೆಯಾಗುತ್ತದೆ  ಇಂದು ಹಲವಾರು ವಿಜ್ಞಾನದ ಸಂಶೋಧಕರು ಲಿಂಗಪೂಜೆಯಿಂದ ಮನಸ್ಸಿನಲ್ಲಿ ಏಕಾಗ್ರತೆ, ಮತ್ತು ಶಾಂತತೆಯ ಅರಿವು ಮೂಡುತ್ತದೆ, ಇದರಿಂದ ಸುಪ್ರಭಾತದ ವೆಳೆಯಲ್ಲಿ ಲಿಂಗಪೂಜೆಯನ್ನು ಮಾಡುವುದರಿಂದ ಚೈತನ್ಯ ಶಕ್ತಿ ವೃದ್ದಿಯಾಗಲು ಸಾಧ್ಯ, ಎಂದರು, ಆನಂದ ಗುಡಸ, ರವಿ ಹಂಪನ್ನವರ, ಕೆ,ಬಸವರಾಜ, ಸಂಗಪ್ಪಗೋಳ, ಸೇರಿದಂತೆ  ಪಾಂಡುರಂಗ ಕುಂಬಾಂರ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಹಾಗೂ ಹೆಬ್ಬಾಳದ ಗಣ್ಯ ಮಾನ್ಯರು ವೇದಿಕೆಯಲ್ಲಿದ್ದರು, ಪ್ರಾಸ್ತಾವಿಕವಾಗಿ ಮಾತನಾಡಿದ ವೈದ್ಯ ಬಸವರಾಜ ಪಂಡಿತ ಮಾತನಾಡುತ್ತಾ ಬಸವ ಉತ್ಸವದ ಯಶಸ್ವಿಯನ್ನು ಕಂಡು ಭಾವುಕರಾಗಿ ಮಾತನಾಡಿದರು, ಕಾರ್ಯಕ್ರಮಕ್ಕೆ ಸಾಹಿತಿ ಶಿವಾನಂದ ಗುಂಡಾಳಿ ಸ್ವಾಗತಿಸಿದರು, ಕಾರ್ಯಕ್ರಮವನ್ನು ಶ್ರೀಮತಿ ಉಮಾ ಆಲೂರಿ, ಹಾಗೂ ಸುರೇಶ ಅಮ್ಮಣಗಿ, ನಿರೂಪಿಸಿದರು ಕೊನೆಯಲ್ಲಿ ಶರಣ ಬಸವಪ್ರಸಾದ,ವಂದಿಸಿದರು, 

23 ರಂದು ಮುಂಜಾನೆ 8 ಗಂಟೆಗೆ ಔರಂಗಾಬಾದಿನ ಡಾ|| ಅಮರನಾಥ ಸೋಲಪುರೆ, ಇಷ್ಟಲಿಂಗ ಪೂಜೆ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ  ನಿವೃತ್ತ ಆಯ್,ಎ,ಎಸ್,ಅಧಿಕಾರಿ ಶಿವಾನಂದ ಎಮ್,ಜಾಮದಾರ ಮುಂತಾದವರು ವೇದಿಕೆಯಲ್ಲಿದ್ದರು, ರಾಷ್ಟ್ರೀಯ ಬಸವ ದಳ ಸಂಕೇಶ್ವರದ ಅಧ್ಯಕ್ಷರಾದ ಶಂಕರಗೌಡಾ ದೇಸಾಯಿ, ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು .