‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ’

‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ’ 'Let farmers adopt organic farming practices and become self-reliant'

‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಲಿ’ 

ಮುದ್ದೇಬಿಹಾಳ 07: ಪ್ರತಿಯೊಬ್ಬ ರೈತ ನೀರು ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳನ್ನು ಹಾಗೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಿನ ಮುದೂರು ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಸದಸ್ಯರು, ಪದಾಧಿಕಾರಿಗಳು ಹಾಗೂ ರೈತರಿಗೆ ಸಮಗ್ರ ನೀರು ಮತ್ತು ಮಣ್ಣು ಸಂರಕ್ಷಣೆ ಹಾಗೂ ಸವಳು-ಜವಳು ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 ರೈತರು ಬೇಗ ಬೆಳೆ ತೆಗೆಯುವ ವ್ಯವಸ್ಥೆಗೆ ಜೋತು ಬಿದ್ದು ರಸಾಯನಿಕ ಗೊಬ್ಬರ ಬಳಕೆಯಿಂದಾಗಿ ಗುಣಮಟ್ಟ ಮಣ್ಣಿನ ಸತ್ವ ಕಳೆದುಕೊಂಡು ಬೆಳೆ ಕಳೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ ಇದರಿಂದಾಗಿ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಜತೆಗೆ ಅಗತ್ಯಕ್ಕೆ  ತಕ್ಕಂತಯೆ ನೀರು ಸದ್ಭಳಕೆ ಮಾಡಿಕೊಳ್ಳದೇ ಹೆಚ್ಚು ನೀರು ಬಳಸಿಕೊಂಡು ಹೈರಾಣುಗುತ್ತಿದ್ದಾರೆ ಮಾತ್ರವಲ್ಲದೇ ಸವಳು ಜವಳು ಭೂಮಿಯಿಂದ ತೊಂದರೆ ಅನುಭವಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮೀ), ಧಾರವಾಡ ಉತ್ತಮ ಹಾಗೂ ಪರಿಣಾಮಕಾರಿ ತರಬೇತಿಗಳನ್ನು ನೀಡುತ್ತಾ ಬರುತ್ತಿದೆ. ಪ್ರತಿಯೊಬ್ಬ ರೈತ ನೀರು ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳನ್ನು ಹಾಗೂ ಸಾವಯವ ಕೃಷಿ ಪದ್ಧತಿಯನ್ನು ತನ್ನು ರೂಢಿಸಿಕೊಳ್ಳವಬೇಕಿದೆ. 

. ಪರಸ್ಪರ ರೈತರು ಹೊಂದಾಣಿಕೆಯಿಂದ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಗೊಳಿಸಿ, ಕೊನೆಯ ತೂಬಿನ ರೈತನಿಗೂ ಸಹ ನೀರು ತಲುಪುವಂತಾಗಬೇಕು. ರೈತ ಅತಿಯಾಗಿ ನೀರು ಬಳಕೆಮಾಡುತ್ತಿರುವುದರಿಂದ ಸವಳು-ಜವಳು ಸಮಸ್ಯೆಯಾಗುತ್ತಿದ್ದು, ಸವಳು-ಜವಳು ನಿರ್ವಹಣಾ ಕ್ರಮಗಳ ಕುರಿತು ವಾಲ್ಮೀ ಸಂಸ್ಥೆಯಿಂದ ತಿಳುವಳಿಕೆ ನೀಡಿರುತ್ತಾರೆ. ಸಮರ​‍್ಕ ಕಾಲುವೆ ನೀರು ನಿರ್ವಹಣೆಗೆ ಸ್ಕಾಡಾಗಳ ಅಳವಡಿಕೆಯಾಗಬೇಕಿದೆ ರೈತರು ಆರ್ಥಿಕ ಲಾಭದಾಯಕ ಬೆಳೆಗಳನ್ನು ಬೆಳೆದು ಅಭಿವೃದ್ಧಿಹೊಂದಬೇಕೆಂದು ತಿಳಿಸಿದರು. 

ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ ಎನ್‌. ಮರಡ್ಡಿಯವರು ಜಲಾಶಯದ ನೀರಿನ ಸಮರ​‍್ಕ ಬಳಕೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರ ಅತೀ ಮುಖ್ಯವಾದದು  ಅಲ್ಲದೇ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಿದರು. ಏಕ ಬೆಳೆ ಪದ್ಧತಿಯನ್ನು ಬಿಟ್ಟು ಬೆಳೆ ಪರಿವರ್ತನೆ ಮಾಡಿ ಪರ್ಯಾಯ ದ್ವಿದಳ ಧಾನ್ಯಗಳ ಬೆಳೆಗಳನ್ನು ಬೆಳೆದು, ಮಣ್ಣಿನ ಫಲವತ್ತತೆ ಹೆಚ್ಚಿಸಲು ಕ್ರಮ ವಹಿಸಬೇಕೆಂದು ರೈತರಲ್ಲಿ ಜಾಗೃತಿ ಮೂಡಿಸಿದರಲ್ಲದೇ.  ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೆ ಪಶುಗಳ ಆಧಾರಿತ ಸಮಗ್ರ ಕೃಷಿ ಮಾಡಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. 

ರಾಮ ಕುಲಕರ್ಣಿ, ಮಾಜಿ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ, ಯು.ಕೆ.ಪಿ. ಭೀಮರಾಯನಗುಡಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪಿ ಎಲ್ ಡಿ ಬ್ಯಾಂಕ ಅಧ್ಯಕ್ಷ ಬಿ ಕೆ ಬಿರಾದಾರ, ಮುಖಂಡ ಸಂತೋಶ ರಾಠೋಡ ಸೇರಿದಂತೆ ನೂರಾರು ಜನ ರೈತರು ಭಾಗಿಯಾಗಿದ್ದರು.