‘ಸರ್ಕಾರಿ ಕಾಲೇಜು ಉನ್ನತ ಶ್ರೇಣಿ ಪಡೆಯಲು ಉಪನ್ಯಾಸಕರ ಪರಿಶ್ರಮ ಬಹಳಷ್ಟಿದೆ’

‘ಸರ್ಕಾರಿ ಕಾಲೇಜು ಉನ್ನತ ಶ್ರೇಣಿ ಪಡೆಯಲು ಉಪನ್ಯಾಸಕರ ಪರಿಶ್ರಮ ಬಹಳಷ್ಟಿದೆ’ 'Lecturers put in a lot of effort to get a government college high ranking'

ಲೋಕದರ್ಶನ ವರದಿ 

ರಾಯಬಾಗ 20: ಪಟ್ಟಣದ ಸರ್ಕಾರಿ ಪದವಿ ಕಾಲೇಜು ಉನ್ನತ ಶ್ರೇಣಿ ಪಡೆಯಲು ಇಲ್ಲಿರುವ ಉಪನ್ಯಾಸಕರ ಪರಿಶ್ರಮ ಬಹಳಷ್ಟಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  ಬುಧವಾರ ಪಟ್ಟಣದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಸಮಾರಂಭ ಹಾಗೂ ಬಿ.ಎ., ಬಿ.ಕಾಂ. ಮತ್ತು ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ತಾಲೂಕಿನ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪಟ್ಟಣದಲ್ಲಿ 18 ವರ್ಷಗಳ ಹಿಂದೆ ಪ್ರಾರಂಭಗೊಂಡ ಸರ್ಕಾರಿ ಪದವಿ ಕಾಲೇಜು, ಇಂದು ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇಂದು ಸುಮಾರ 800 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿಗಳ ಇಲ್ಲಿ ಒಳ್ಳೆಯ ಶಿಕ್ಷಣ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕೆಂದರು.  ಚಿಕ್ಕೋಡಿ ಡಿ.ಆಯ್‌.ಇ.ಟಿ ನಿವೃತ್ತ ಪ್ರಾಚಾರ್ಯ ಮೋಹನ ಜಿರಗಿಹಾಳ ಮಾತನಾಡಿದರು.  ಕಾರ್ಯಕ್ರಮದಲ್ಲಿ ಮುಖಂಡರಾದ ಸದಾಶಿವ ಘೋರೆ​‍್ಡ, ಪ್ರಾಚಾರ್ಯ ಎ.ಪಿ.ಮುಲ್ಲಾ, ಉಪನ್ಯಾಸಕರಾದ ಡಾ.ವಿವೇಕಾನಂದ ಮಾನೆ, ಅಜೀಜ ಸನದಿ, ರಾಜಕುಮಾರ ಕಾಗೆ, ಸಂತೋಷ ಸಮಾಜೆ, ಡಾ.ಪ್ರಸಾದ್ ಆರ್‌.ಎ., ಡಾ.ವಿಜಯಲಕ್ಷ್ಮೀ ಜಿ., ಉತ್ತಮ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.