ಲೋಕದರ್ಶನ ವರದಿ
ಬೆಳಗಾವಿ 18: ಶಾಶೇಸ್ ಹಾಗೂ ಬ್ಯಾಜಿಸ್ಗಳ ಸಮಾರಂಭವು ಇತ್ತೀಚೆಗೆ ಜೈನ ಹೆರಿಟೇಜ ಶಾಲೆಯಲ್ಲಿ ಜರುಗಿತು. ಇದರ ಉದ್ದೇಶ ಯುವ ಜನಾಂಗ ಇವರುಗಳನ್ನು ಧರಿಸುವುದರಿಂದ ನಾಯಕರಾಗುವ ಹಂಬಲವನ್ನು ಪೂರೈಸಿಕೊಳ್ಳುವುದಾಗಿದೆ. ಈ ಸಮಾರಂಭ ಒಂದು ಮಹತ್ವದ ಪ್ರಸಂಗವಾಗಿದ್ದು, ಇವುಗಳನ್ನು ಧರಿಸುವುದರಿಂದ ಯುವಕರು ಸ್ಪೂತರ್ಿ ಪಡೆಯುತ್ತಾರೆ ಕನಸುಕಾಣುತ್ತಾರೆ, ಹೆಚ್ಚು ಕಲಿಯುತ್ತಾರೆ ಹಾಗೂ ಹೆಚ್ಚು ಸಾಧಿಸಲು ಹಂಬಲಿಸುತ್ತಾರೆ. ಜೈನ ಶಾಲೆಯ ಸಂಪ್ರದಾಯದಂತೆ ಗೌರವಾನ್ವಿತರು ಹಾಗೂ ಪಾಲಕರು ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭ ಪ್ರಾರಂಭವಾಯಿತು.
ಸರ್ವಶಕ್ತ ದೇವನನ್ನು ಅಭಿನಂದಿಸುವುದರಿಂದ ಎಲ್ಲ ಮಹತ್ವದ ಪ್ರಸಂಗಳು ಜರುಗುತ್ತವೆ ಹಾಗೂ ಇದನ್ನು ಅವರು ಪ್ರಾರ್ಥನಾ ಗೀತೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಧ್ವಜಧಾರಕ ದೀಪಕ ಚೌಧರಿ ಮುಂದಾಳತ್ವದಲ್ಲಿ ಸುಪರ್ಸ, ವಂಡರ್ಸ, ಇನ್ ಕ್ರೇಡಿಬಲ್ ಹಾಗೂ ಫಂಟಾಸ್ಟೀಕ್ ತಂಡಗಳು ಮುಂದೆ ಸಾಗುತ್ತವೆ. ಇನ್ ಕ್ರೆಡಿಬಲ್ ಶ್ರೀಶಾಂತ ಕಾಡಣ್ಣವರ ಹಾಗೂ ರೀಟ್ ಬಾಗೇವಾಡಿ ಇವರಿಗೆ ನಿದರ್ೇಶಕಿ ಶ್ರದ್ಧಾ ಮೇಡಂ ಶ್ಯಾಶೇಸ್ ಹಾಗೂ ಬ್ಯಾಜಸ್ ತೊಡಿಸಿದರು.
ವಂಡರರ್ಸ ತಂಡದ ವೀರ ಹೇರೆಕರ ಹಾಗೂ ಮಾನ್ವಿ ಬಾಗೇವಾಡಿ ಇವರಿಗೆ ಪ್ರಾಂಶುಪಾಲ ಮನಜೀತ ಜೈನ ಶ್ಯಾಶೇಸ ಹಾಗೂ ಬ್ಯಾಜಸ್ಗಳನ್ನು ಅಂಟಿಸಿದರು. ಸುಪರ ತಂಡದ ದೀವಿತ ಪೋರವಾಲ ಹಾಗೂ ಆರೋಹಿ ಪಾಟೀಲರಿಗೆ ಆ್ಯಮಿ ಮೇಡಂ ತೊಡಿಸಿದರು. ಫಂಟಾಸ್ಟಿಕ್ ತಂಡದ ನಾಯಕರುಗಳಾದ ಅರವ ಪಾಟೀಲ ಹಾಗೂ ಮಾನಸ್ವಿ ಪುಣೇದ ಇವರಿಗೆ ಸಂಯೋಜಕಿ ಸಬೀಹಾ ಮೇಡಂ ತೊಡಿಸಿದರು. ನಾಯಕರುಗಳ ಸಾಧನೆಗಳನ್ನು ಪಾವರ ಪಾಯಿಂಟ ಮೂಲಕ ಬಿತ್ತರಿಸಲಾಯಿತು. ನಾಯಕರುಗಳೆಲ್ಲ ಭರತೇಶ ಸರ್ಗಳ ಎದುರಿಸಿ ಪ್ರತಿಜ್ಞೆ ಗೈದರು ಸುಪರ ಡ್ಯೂಪರ ಡಾನ್ಸ ನಿರ್ವಹಿಸುವುದರ ಮೂಲಕ ಸುಪರ ಹಿರೋಗಳು ಪವಿತ್ರ ಸಮಯದಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಆವ್ಹಾನ್ನು ಸ್ವೀಕರಿಸಿದವರಿಗೆ ಹಾಗೂ ಬೆಂಬಲಿಸಿದವರಗೆ ಧನ್ಯವಾದಗಳನ್ನು ಅಪರ್ಿಸಲಾಯಿತು. ರಾಷ್ಟ್ರಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಮಂಗಲಗೊಂಡಿತು.