'ಜಾಗತೀಕರಣದಿಂದ ಮೂಲ ಸಂಸ್ಕೃತಿಗಳು ಮರೆಯಾಗುತ್ತಿರುವುದು ವಿಷಾದನೀಯ'

ಲೋಕದರ್ಶನ ವರದಿ

ಕೊಪ್ಪಳ : ನಗರದ ಪದಕಿ ಲೇಔಟ್ನ ಕುಂಚ ಕುಟೀರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಮತ್ತು ತಾಲೂಕ ಘಟಕ ಕೊಪ್ಪಳ ಹಾಗೂ ನಿಮಿಷಾಂಬ ಪ್ರಕಾಶನ ಕೊಪ್ಪಳ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಹಿತ್ಯ, ಸಂಗೀತ ಗಮಕ ಕಲಾ ತ್ರಿವೇಣಿ ಸಂಗಮದ 3ನೇ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿ  ಪ್ರೋ. ಅಲ್ಲಮಪ್ರಭು ಬೆಟದೂರು ಮಾತನಾಡಿ, ಸಾಹಿತ್ಯ, ಸಂಗೀತ, ಗಮಕ ಕಲೆಗಳು ಮನಸ್ಸಿನ ವಿಕಾರವನ್ನು ಕಳೆದು ವಿಶಾಲಗೊಳಿಸುತ್ತೇವೆ ಎಂದರು.

ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತ್ಯ ಹೆಚ್.ಎಸ್. ಪಾಟೀಲರು ಗಮಕವು ಪ್ರಭಾವ ಪೂರ್ಣ ಪ್ರಾಚೀನ ಕಲೆಯಾಗಿದ್ದು ಶ್ರೀಸಾಮಾನ್ಯನ್ನು ತಲುಪಬೇಕಾಗಿದೆ ಈ ನಿಟ್ಟಿನಲ್ಲಿ ಪರಿಷತ್ಗಳು ಗಮಕಿಗಳ ಸಮಾವೇಶ, ಶಿಬಿರ, ಸಮ್ಮೇಳನಗಳನ್ನು ನಡೆಸುವ ನಿಟ್ಟಿನತ್ತ ಕಾರ್ಯಪ್ರವೃತ್ತರಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ನಗರದ ಹಿರಿಯ ಗಮಕಿ ಹಾಗೂ ಶಿಕ್ಷಕಿಯಾದ ಅನುಸೂಯಾ ಜಾಹಗೀರದಾರರು ಹರಿಶ್ಚಂದ್ರ ಕಾವ್ಯದ ಭಾಗವನ್ನು ವಾಚಿಸಿ ವ್ಯಾಖ್ಯಾನ ನೀಡಿದರು ಮತ್ತು ಭಾವಗೀತೆಗಳನ್ನು ಹಾಡಿ ಸುಗಮ ಸಂಗೀತವನ್ನು ನಡೆಸಿಕೊಟ್ಟರು. ಸಂಘಟಿಕರು ಇವರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯ ಮೇಲೆ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಪತ್ರಕರ್ತ ಸಿರಾಜ ಬಿಸರಳ್ಳಿ, ಹಿರಿಯ ಸಾಹಿತಿ ಡಿ.ಎಂ. ಬಡಿಗೇರ ಉಪಸ್ಥಿತರಿದ್ದರು. ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್. ಗೋನಾಳರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ತಾಲೂಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಚಿತ್ರಗಾರ ಸ್ವಾಗತಿಸಿದರು, ಜಿಲ್ಲಾಧ್ಯಕ್ಷರಾದ ಫಕೀರಪ್ಪ ವಜ್ರಬಂಡಿಯವರು ಪ್ರಾಸ್ತಾವಿಕ ನುಡಿ ಹೇಳಿದರು. ಶಿಕ್ಷಕಿ ವಿದ್ಯಾವತಿ ಚಿತ್ರಗಾರ ವಂದಿಸಿರು. ಶಿ.ಕಾ. ಬಡಿಗೇರ, ಶಿವಕುಮಾರ ಹಿರೇಮಠ, ಎ.ಪಿ. ಅಂಗಡಿ, ಮಂಜುನಾಥ ಸೆಲ್ಕೊ, ವಾಣಿಶ್ರೀ, ಕಾಳಪ್ಪ ಪತ್ತಾರ, ಕೃಷ್ಣಪ್ಪ ಸಂಗಟಿ, ವೀಣಾ ಚಿತ್ರಗಾರ, ಮೇಘರಾಜರಡ್ಡಿ ಗೋನಾಳ, ಬಸವರಾಜರಡ್ಡಿ ಗೋನಾಳ ಇತರರು ಉಪಸ್ಥಿತರಿದ್ದರು.