‘ಗ್ರಾಮೀಣ ಭಾಗದಲ್ಲಿ ಮಠಮಾನ್ಯಗಳು ಬೆಳೆಯುತ್ತಿರುವುದು ಸಂತೋಷದ ವಿಷಯ’

‘ಗ್ರಾಮೀಣ ಭಾಗದಲ್ಲಿ ಮಠಮಾನ್ಯಗಳು ಬೆಳೆಯುತ್ತಿರುವುದು ಸಂತೋಷದ ವಿಷಯ’ 'It is a happy thing that monastics are growing in rural areas'

ಯರಗಟ್ಟಿ 20: ಗ್ರಾಮೀಣ ಭಾಗದಲ್ಲಿ ಮಠಮಾನ್ಯಗಳು ಬೆಳೆಯುತ್ತಿರುವುದು ಸಂತೋಷದ ವಿಷಯ. ಹರ್ಲಾಪೂರದ ಪೂಜ್ಯ ಶ್ರೀಗಳಾದ ರೇಣುಕಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಶ್ರೀಮಠವನ್ನು ಜೀರ್ಣೋದ್ದಾರ ಗೈಯುತ್ತಾ ಈಗ ನೂತನ ಮಹಾದ್ವಾರ ನಿರ್ಮಿಸಿದ್ದಾರೆ. ಗುರು ಪರಂಪರೆಗೆ ಸೇರಿದ ಶ್ರೀಮಠವು ಸಾವಿರು ವರ್ಷಗಳ ಇತಿಹಾಸ ಹೊಂದಿರುವ ಢವಳೇಶ್ವರ ಹಿರೇಮಠದ ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿಯ ದ್ಯೋತಕವಾಗಿ ಈ ಮಹಾದ್ವಾರ ತಲೆ ಎತ್ತಿದೆ ಎಂದು ಶಿರಹಟ್ಟಿ ಜಗದ್ಗುರು ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. 

ಅವರು ಸಮೀಪದ ಹರ್ಲಾಪೂರ ಢವಳೇಶ್ವರ ಹಿರೇಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾದ್ವಾರ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ ಭಕ್ತರ ಸಹಕಾರ ಮತ್ತು ನಂಬಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಮಠಮಾನ್ಯಗಳ ಅಭಿವೃದ್ಧಿ, ದಾಸೋಹ ಮತ್ತು ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿದೆ. ಇವು ಕೇವಲ ಪೂಜಾ ಸ್ಥಳಗಳಾಗಿರದೆ,

ಶಿಕ್ಷಣ, ಆರೋಗ್ಯ ಮತ್ತುಋ ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತುವ ಪ್ರಮುಖ ಕೇಂದ್ರಗಳಾಗಿವೆ.ಮಠಮಾನ್ಯಗಳ ಕಾರ್ಯವೈಖರಿ ಮತ್ತು ಭಕ್ತರ ಪಾತ್ರದ ಮುಖ್ಯ ಅಂಶಗಳು ಹೀಗಿವೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಸಾರ ಮಠಗಳು ನೈತಿಕತೆ, ಧರ್ಮ ಮತ್ತು ಸಿದ್ದಾಂತ ಶಿಖಾಮಣಿ ತತ್ವದಂತಹ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸುತ್ತಲಿವೆ. ಹಾನಗಲ ಗುರು ಕುಮಾರೇಶ್ವರ ದಾಸೋಹ ಪರಂಪರೆ ಭಕ್ತರು ನೀಡುವ ಕಾಣಿಕೆ ಮತ್ತು ದವಸ-ಧಾನ್ಯಗಳಿಂದ ಪ್ರತಿನಿತ್ಯ ನೂರಾರು ಜನರಿಗೆ ಅನ್ನದಾಸೋಹ ನಡೆಸಲಾಗುತ್ತದೆ ಎಂದು ಹೇಳಿದರು. 

ಈ ವೇಳೆ ಭಾಗೋಜಿಕೊಪ್ಪ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲಾತೋರಗಲ್ಲ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಟಕೋಳ-ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮೀಜಿ, ಕೆ. ಶಿವಾಪೂರ ಜಡೆತೆಲೆ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜಮಖಂಡಿ ಶಾಸಕ ಜಗದೀಶ ಗುಂಡಗುಟ್ಟಿ, ಬಿಜೆಪಿ ಮುಖಂಡ ಮಲ್ಲಣ್ಣಾ ಯಾದವಾಡ, ಬಸವರಾಜ ತುಪ್ಪದ, ಮಾಜಿ ಜಿ. ಪಂ. ಸದಸ್ಯ ಮಾರುತಿ ತುಪ್ಪದ, ರೈತ ಮುಖಂಡರಾದ ಬಾಳಪ್ಪ ರಡರಟ್ಟಿ, ಬಾಳಪ್ಪ ಹಂಜಿ, ಪ್ರಕಾಶಗೌಡ ಪಾಟೀಲ, ಶಾಸನಗೌಡ ಪಾಟೀಲ, ಟಿ. ಪಿ. ಮುನವಳ್ಳಿ ಸೇರಿದಂತೆ ಗಣ್ಯಮಾನ್ಯ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.