'ಮಕ್ಕಳಿಗೆ ಆತ್ಮವಿಶ್ವಾಸ ಬಿತ್ತುವ ಕೆಲಸ ನಡೆದರೆ ಭಾರತವು ತನ್ನಿಂದ ತಾನೆ ಬದಲಾಗಲಿದೆ'


ಲೋಕದರ್ಶನ ವರದಿ

ಗದಗ 01: ಮಕ್ಕಳಿಗೆ ಆತ್ಮವಿಶ್ವಾಸ ಬಿತ್ತುವ ಕೆಲಸ ನಡೆದರೆ ಭಾರತವು ತನ್ನಿಂದ ತಾನೆ ಬದಲಾಗಲಿದೆ ಎಂದು ಹೊಸಳ್ಳಿಯ ಜ.ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು. 

ನಗರದ ಮುಳಗುಂದನಾಕಾ ಹತ್ತಿರವಿರುವ ಛತ್ರಪತಿ ಭವನದಲ್ಲಿ ಭಾನುವಾರ ಜರುಗಿದ ರಾಜೀವ ದೀಕ್ಷತ್ ವಿಚಾರ ವೇದಿಕೆ ಜಿಲ್ಲಾ ಘಟಕ, ಭಾರ ಸ್ವಾಭಿಮಾನ ಟ್ರಸ್ಟ್ ಹಾಗೂ ವರಸಿದ್ದಿ ವಿನಾಯಕ ಮಿತ್ರ ಮಂಡಳಿ ಅವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಸ್ವದೇಶಿ ಸಮ್ಮೇಳನ ಮತ್ತು ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿ, ಇತಿಹಾಸವು ಭಾರತವನ್ನು ಬರಿ ಸೋಲಿನ ದೃಷ್ಟಿಯಿಂದ ನೋಡಿದೆ. ಘಜನಿ ಮಹಮ್ಮದ ಭಾರತದ ಮೇಲೆ 17 ಬಾರಿ ದಂಡೆತ್ತಿ ಬಂದು ಭಾರತದಲ್ಲಿ ಅಪಾರ ಸಂಪತ್ತು ಹಾಳು ಮಾಡಿದ ಎಂದು ಬಿಂಬಿಸಲಾಗುತ್ತಿದೆ. ನಮಗೆ ಬೋಗಸ್ ಇತಿಹಾಸ ಬೇಕಾಗಿಲ್ಲ  ನೈಜ್ ಇತಿಹಾಸ ಬೇಕಾಗಿದೆ. ನಾಲ್ಕುಗೋಡೆಗಳ ಮಧ್ಯ ಮಕ್ಕಳಿಗೆ ಭೋದಿಸುವ ಪಠ್ಯಕ್ರಮ ಬದಲಾಗಬೇಕಿದೆ ಎಂದು ಬೂದೀಶ್ವರ ಶ್ರೀಗಳು ಹೇಳಿದರು. 

ಭಾರತ ಸ್ವಾಭಿಮಾನ ಟ್ರಸ್ಟ್ನ ರಾಜ್ಯ ರಾಯಬಾರಿ ಭವರಲಾಲ ಆರ್ಯ ಅವರು ಮಾತನಾಡಿ, ದಿ.ರಾಜೀವ ದೀಕ್ಷಿತ ಅವರ ವಿಚಾರಗಳನ್ನು ಆಂದೋಲನ ರೂಪದಲ್ಲಿ ಅಳವಡಿಸಿಕೊಳ್ಳಬೇಕಿದೆ. 2008ರಲ್ಲಿಭಾರತ ಸ್ವಾಭಿಮಾನ ಟ್ರಸ್ಟನ್ನು  ಸ್ಥಾಪಿಸಿದ ರಾಜೀವ ದೀಕ್ಷಿತ್ ಅವರ ಕನಸನ್ನು ಪತಂಜಲಿ ಯೋಗ ಸಮಿತಿಯು ನನಸು ಮಾಡುತ್ತಿದೆ. ಈ ಆಂದೋಲನ ಕೆಲವರಿಗೆ ಮಾತ್ರ ಸೀಮಿತವಾಗಬಾರದು ಮುಂದಿನ ದಿನಗಳಲ್ಲಿ ಸಿಬಿಎಸ್ಇ ಮಾದರಿಯಲ್ಲಿ ಗುರುಕುಲ ಪದ್ದತಿ ಶಿಕ್ಷಣವನ್ನು ಪ್ರತಿ ಗ್ರಾಮದಲ್ಲಿ ನೀಡಲಾಗುವುದು. ಈಗಾಗಲೇ ವಿಷಮುಕ್ತ ಕೃಷಿ ಬಗ್ಗೆ ಜಾಗೃತಿ ಆರಂಭಗೊಂಡಿದೆ. ಅಲ್ಲದೇ ಗೋರಕ್ಷಣಾ ಅಭಿಯಾನ ಆರಂಭಗೊಂಡಿದ್ದು ದೇಶಾದ್ಯಾಂತ  ಗೋಪೀಠಗಳನ್ನು ಸ್ಥಾಪಿಸಲಾಗುತ್ತಿದ್ದು ಮೊದಲನೆ ಪೀಠವನ್ನು ಹರಿದ್ವಾರದಲ್ಲಿ ಆರಂಭಿಸಲಾಗಿದೆ. ಇದಕ್ಕಾಗಿ ಜಗತ್ತಿನ ಎಲ್ಲ ಗೋವು ತಳಿಗಳನ್ನು ಹೊಂದಿದ  ಬ್ರೇಜಿಲ್ ದೇಶದೊಂದಿಗೆ 5 ಕೋಟಿ ರೂ.ಗಳ  ವಿಶೇಷ ಒಪ್ಪಂದ ಮಾಡಿಕೊಂಡು ಎರಡು ನಂದಿ ಗೋವುಗಳನ್ನು ತರಸಿಕೊಳ್ಳಲಾಗುತ್ತಿದೆ. ಹಾಲು ಉತ್ಪಾದನಾ ಸಂಗ್ರಹದಲ್ಲಿ ಪ್ರತಿಗ್ರಾಮಗಳಲ್ಲಿ ಗೋಮೂತ್ರ ಬ್ಯಾಂಕ್ನ್ನು ಸ್ಥಾಪಿಸಲಾಗುವುದು. ಪೀನೈಲ್ ಮಾದರಿಯಲ್ಲಿ ಗೋನೈಲ್ ಮಾಡಲಾಗುವುದು. ಪ್ರತಿಯೊಬ್ಬರು ಸ್ವದೇಶಿ ಪದ್ದತಿ, ಸ್ವದೇಶಿ ಆಹಾರ ಹಾಗೂ ಸ್ವದೇಶಿ ಕೃಷಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು. 

 ಈ ಕಾರ್ಯಕ್ರಮವನ್ನು ಹೂವಿನಹಡಗಲಿಯ ಜಿ.ಬಿ.ಆರ್.ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಸ್.ಎಸ್.ಪಾಟೀಲ ಅವರು ಉದ್ಘಾಟಿಸಿದರು. ಭಾರತ ಸ್ವಾಭಿಮಾನ ಟ್ರಸ್ಟ್ನ ಜಿಲ್ಲಾ ಪ್ರಬಾರಿ ರುದ್ರಣ್ಣ ಗುಳಗುಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಗೋ ಪಾಲಕ  ನಾಗರಾಜ ಪೈ ಅವರು ಸ್ವದೇಶಿ ಗೋ ಆಧಾರಿತ  ಕೃಷಿ ಮತ್ತು ಗೋ ಉತ್ಪನ್ನಗಳ ಕುರಿತು ಮತ್ತು ರವಿ ಹಂಜ್ ಅವರು ಭಾರತದ ಇತಿಹಾಸದ ಕುರಿತು ಮಾತನಾಡಿದರು. 

 ಶಿವಾನಂದ ಕುಂಬಾರ ಅವರು ಪ್ರಾಸ್ತಾವಿವಾಗಿ ಮಾತನಾಡಿದರು. ಹುಬ್ಬಳ್ಳಿಯ ಡಾ. ಮಲ್ಲಿಕಾಜರ್ುನ ಬಾಳಿಕಾಯಿ ಅವರು ದಿ.ರಾಜೀವ ದೀಕ್ಷಿತ ಅವರ ಪರಿಚಯ ಬಾಷಣ ಮಾಡಿದರು. ರಾಯಬಾಗದ ಪತಂಜಲಿ ಕಿಸಾನ ಪಂಚಾಯತ ರಾಜ್ಯ  ಪ್ರಭಾರಿ ಸಂಜಯ ಕುಸ್ತಿಗಾರ,ಗದಗ ಜಿಲ್ಲಾ ಪ್ರಬಾರಿ ಎಂ.ಜಿ.ಸಂತೋಷಜಿ, ಸಮಾಜ ಸೇವಕಿ ರತ್ನಕ್ಕಾ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರಾಜೇಶ್ವರಿ ಬಾಚಲಾಪೂರ ಕಾರ್ಯಕ್ರಮ ನಿರೂಪಿಸಿದರು.