ಬೆಂಗಳೂರು, ಸೆ 10 ಸ್ಯಾಂಡಲ್ ವುಡ್ ನ ನಗೆಮೊಗದ ಚೆಲುವ, ಗೋಲ್ಡನ್ ಸ್ಟಾರ್ ಗಣೇಶ್ ಸೋದರ ಉಮೇಶ್ ಸೂರಜ್ ಕೃಷ್ಣ ಹೆಸರಿನಲ್ಲಿ 'ನಾನೇ ರಾಜ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಲಿದ್ದಾರೆ 'ಊರಿಗೂ, ಮನೆಗೂ ಉಪಕಾರಿ' ಟ್ಯಾಗ್ ಲೈನ್ ಹೊಂದಿರುವ ಚಿತ್ರವನ್ನು ಎಲ್ ಆನಂದ್ ನಿರ್ಮಿಸುತ್ತಿದ್ದು, ಹಿರಿಯ ನಿರ್ಮಾಪಕ, ನಿರ್ದೇಶಕ ಭಾರ್ಗವ ಅವರ ಶಿಷ್ಯ, ಈಗಾಗಲೇ ಹಲವು ಧಾರಾವಾಹಿಗಳನ್ನು ನೀಡಿರುವ ಶ್ರೀನಿವಾಸ್ ಶಿವಾರ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.
'ನಾನೇ ರಾಜ' ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಗೊಳಿಸಿರುವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈ ರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಮಾಜಿ ಗೌರವ ಕಾರ್ಯದಶರ್ಿ ಭಾ ಮ ಹರೀಶ್, ಭಾ ಮ ಗಿರೀಶ್, ಹಿರಿಯ ನಿರ್ದೇಶಕ, ನಿರ್ಮಾಪಕ ಭಾರ್ಗವ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರರಂಗಕ್ಕೆ ಬರಲು ಅಣ್ಣ ಗಣೇಶ್ ಪ್ರೇರಣೆ ತಾಯಿ ಹಾಗೂ ಸೋದರರ ಆಶೀರ್ವಾದ, ನಿರ್ಮಾಪಕ, ನಿರ್ದೇಶಕರ ಬೆಂಬಲದೊಡನೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದೇನೆ ಎಂದು ಸೂರಜ್ ಕೃಷ್ಣ ಹೇಳಿಕೊಂಡಿದ್ದಾರೆ.
ಈಗಾಗಲೇ 35 ದಿನ ಚಿತ್ರೀಕರಣ ಪೂರೈಸಿರುವ 'ನಾನೇ ರಾಜ್' ನವೆಂಬರ್ ಗೆ ತೆರೆಗೆ ಬರುವ ನಿರೀಕ್ಷೆಯಿದೆ ರಾಜ ಅಜ್ಜಿಯ ಮುದ್ದಿನ ಮೊಮ್ಮಗನಾಗಿದ್ದು, ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಯುವಕ ನಾಯಕಿ ಹಾಗೂ ಆಕೆಯ ಮನೆಯವರು ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಮಾಡಲು ಹೋಗಿ ತಾನೆ ಕಸಷ್ಡಕ್ಕೆ ಸಿಲುಕುತ್ತಾನೆ ಮುಂದೇನು ಎಂಬುದೇ ಚಿತ್ರದ ತಿರುಳು ಎಂದು ನಿರ್ದೇಶಕ ಶ್ರೀನಿವಾಸ್ ಶಿವಾರ ತಿಳಿಸಿದ್ದಾರೆ.
ಸೂರಜ್ ಕೃಷ್ಣ, ಸೋನಿಕಾ ಗೌಡ ಮುಖ್ಯ ಭೂಮಿಕೆಯಲ್ಲಿದ್ದು, ಹಿರಿಯ ನಟ ಉಮೇಶ್ ವೈದ್ಯರಾಗಿ, ರಂಗಭೂಮಿ ಹಾಗೂ ಕಿರುತೆರೆಯ ಕಲಾವಿದೆ ಮಾಲತಿ ಶ್ರೀ ಅಜ್ಜಿಯಾಗಿ ಅಭಿನಯಿಸಿದ್ದಾರೆ ಮೈಸೂರು ಕುರಿ ಪ್ರತಾಪ್, ಟೆನ್ನಿಸ್ ಕೃಷ್ಣ, ಹಂಸರಾಜ್, ಆರ್ಯ, ದತ್ತ, ಲಕ್ಷ್ಮೀ, ಮೋಹನ್ ಜುನೇಜ್ ಮೊದಲಾದವರು ತಾರಾಬಳಗದಲ್ಲಿದ್ದಾರೆ.