'ಪರಿಸರ ಉಳಿದರೆ ಮಾನವರು ಉಳಿಯಲು ಸಾಧ್ಯ'

ಲೋಕದರ್ಶನ ವರದಿ

ಹಿಡಕಲ್ ಡ್ಯಾಂ 05: ನಮ್ಮ ಮಿತಿಮೀರಿದ ಬಯಕೆಗಳು, ಆಧುನೀಕರಣ, ಪರಿಸರದ ಸಮತೋಲನವನ್ನು ನಾಶಮಾಡುತ್ತಿವೆ. ವೈಜ್ಞಾನಿಕ ಬೆಳವಣಿಗೆಯ ಜೊತೆಗೆ ನಮ್ಮ ಪರಿಸರದ ಉಳಿವು ಅಗತ್ಯ ಅಂದಾಗ ಮಾತ್ರ ಮಾನವರು ಉಳಿಯಲು ಸಾಧ್ಯ ಎಂದು ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎ. ಕರಗುಪ್ಪಿ ಅಭಿಪ್ರಾಯಪಟ್ಟರು.

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಆಶ್ರಯ ಸ್ವಧಾರ ಮಹಿಳಾ ವಸತಿಗೃಹದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಸಿ ನೆಟ್ಟು ಮಾತನಾಡಿದರು. ಭೂಮಿ ಉಳಿದಾಗ ಮಾತ್ರ ಸಕಲ ಜೀವ ಜಂತುಗಳಿಗೆ ಉಳಿಗಾಲ, ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನರ್ಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ಕಿರಣ ಚೌಗಲಾ ಬಾಲ್ಯಾವಸ್ಥೆಯಿಂದ ಪರಿಸರ ಪ್ರೇಮವನ್ನು ಬೆಳೆಸಿದಲ್ಲಿ ತಕ್ಕಮಟ್ಟದ ಮಾಲಿನ್ಯವನ್ನು ತಡೆಗಟ್ಟಬಹುದು. ನೈಸಗರ್ಿಕ ವಿಕೋಪಗಳ, ತಾಪಮಾನದ ಹೆಚ್ಚಳ ಇವೆಲ್ಲ ಪರಿಸರ ನಾಶವೇ ಕಾರಣ ಇದು ಕೇವಲ ಆಚರಣೆಗೆ ಸಿಮೀತವಾಗದೆ ಪ್ರತಿ ನಿತ್ಯದ ಕೆಲಸವಾಗಬೇಕೆಂದರು. ಕಾರ್ಯಕ್ರಮದಲ್ಲಿ ಜೀವನ ಕೌಶಲ ತರಬೇತುದಾರ ಲಗಮಣ್ಣಾ ನಾಯಕ, ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಗಾರ ಸಂತೋಷ ಬಡಿಗೇರ ಉಪಸ್ಥಿತರಿದ್ದರು. ಸ್ವಧಾರ ಗೃಹದ ಅಧೀಕ್ಷಿಕರಾದ ಭಾರತಿ ಹಂಚಿನಮನಿ ನಿರೂಪಿಸಿದರು. ಪ್ರಿಯಾಂಕ ಅಸೊದೆ ಸ್ವಾಗತಿಸಿದರು.