'ಧಾರ್ಮಚರಣೆಯಲ್ಲಿ ಮಾನವ ಜನ್ಮ ಸಾರ್ಥಕಮಾಡಿಕೊಳ್ಳಬೇಕು'

ಲೋಕದರ್ಶನ ವರದಿ

ಮೂಡಲಗಿ: 'ಧಮರ್ಾಚರಣೆಯಲ್ಲಿ ಸದ್ಗುಣಗಳಿಂದ ನಡೆದುಕೊಂಡು ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳಬೇಕು' ಎಂದು ಶ್ರೀಶೈಲ್ದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಇಲ್ಲಿಯ ಬಸವ ಮಂಟಪದಲ್ಲಿ ಮಂಗಳವಾರ ಸಂಜೆ ಜರುಗಿದ ವಿಶ್ವಶಾಂತಿಗಾಗಿ 13ನೇ ಸತ್ಸಂಗ ಸಮ್ಮೇಳನದ ಉದ್ಘಾಟನಾ ಸಮಾರಂಭಲ್ಲಿ ಮಾತನಾಡಿದ ಅವರು ಮನುಷ್ಯ ಎನ್ನುವುದನ್ನು ಪ್ರಮಾಣಿಕರಿಸುವುದು ಶಾಸ್ತ್ರ ಮತ್ತು ಅನುಭವಗಳಿಂದ ಎಂದರು.

84 ಲಕ್ಷ ಕೋಟಿ ಜೀವರಾಶಿಗಳಲ್ಲಿ ಶ್ರೇಷ್ಠತೆಯನ್ನು ಸಮಥರ್ಿಸಿಕೊಳ್ಳಲು ವಿದ್ಯೆ, ದ್ಯಾನ, ಜ್ಞಾನ, ದಾನ, ಧರ್ಮ, ಸದ್ಗುಣ, ಸಚ್ಛಾರಿತ್ರ್ಯಗಳನ್ನು ಪ್ರಾಪ್ತಮಾಡಿಕೊಳ್ಳಬೇಕು. ಸತ್ಸಂಗದ ಮೂಲಕ ಬದುಕನ್ನು ಆನಂದಗೊಳಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಬೀದರದ ಡಾ. ಶಿವಕುಮಾರ ಸ್ವಾಮೀಜಿಗಳು ಮಾತನಾಡಿ ಜೀವಿಸುವುದನ್ನು ಪ್ರತಿಯೊಬ್ಬರು ಮಾಡುವರು ಆದರೆ ಬದುಕುವವರ ಸಂಖ್ಯೆ ವಿರಳ. ಹೆಸರಿಗೆ ಮಾತ್ರ ಮನುಷ್ಯರಾಗಬಾರದು, ಮನುಷ್ಯರಾಗಿರಲು ಏನೇನು ಸದ್ಗುಣಗಳು ಬೇಕು ಅವುಗಳನ್ನು ಗಳಿಸಿಕೊಳ್ಳಬೇಕು ಎಂದರು.

ಮನುಷ್ಯನ ಜನ್ಮವು ಅತ್ಯಂತ ಕಠಿಣವಿದ್ದು, ದೊರೆತ ಜನ್ಮವನ್ನು ದೇವರನ್ನು ನೆನೆಯುವ ಮೂಲಕ ಸತ್ಸಂಗದಲ್ಲಿ ಬೆರೆಯುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬೇಕು ಎಂದರು. 

ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಕಲಬುಗರ್ಿಯ ಮಾತೋಶ್ರೀ ಲಕ್ಷ್ಮೀತಾಯಿ, ಹಿಪ್ಪರಗಿಯ ಶಿವರುದ್ರ ಶರಣರು ಮತ್ತು ಇಟ್ನಾಳದ ಸಿದ್ಧೇಶ್ವರ ಶರಣರು 'ಜಂತುನಾಮ್ ನರಜನ್ಮ ದುರ್ಲಭಂ' ವಚನದ ಕುರಿತು ಮಾತನಾಡಿದರು.

ಸಾನ್ನಿಧ್ಯವಹಿಸಿದ್ದ ಶ್ರೀಪಾದಬೋಧ ಸ್ವಾಮೀಜಿ ಸತ್ಸಂಗ ಸಮ್ಮೇಳನವನ್ನು ಉದ್ಘಾಟಿಸಿದರು. ಮಮದಾಪುರ ಮೌನಮಲ್ಲಿಕಾಜರ್ುನ ಸ್ವಾಮೀಜಿ ವೇದಿಕೆಯಲ್ಲಿದ್ದರು.

ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಮತ್ತು ಅನ್ನಸಂರ್ಪಣೆಯಲ್ಲಿ ಭಾಗವಹಿಸಿದ್ದರು.