ಜಪಾನ್ ದಲ್ಲಿ 'ಗಲ್ಲಿ ಬಾಯ್'

ಮುಂಬೈ, ಸೆ 7:   ಇತ್ತೀಚೆಗೆ ಬಾಲಿವುಡ್ ನ ಅನೇಕ ಚಿತ್ರಗಳು ವಿದೇಶಿದಲ್ಲಿಯೂ ಬಿಡುಗಡೆಗೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗ ನಟ ರಣವೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ಚಿತ್ರ 'ಗಲ್ಲಿ ಬಾಯ್' ಇದೀಗ ಜಪಾನ್ ದಲ್ಲಿ ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ 

ಈ ಚಿತ್ರದಲ್ಲಿ ರಣವೀರ್, ತಮ್ಮದೇ ಸಿರಿ ಕಂಠದಲ್ಲಿ ಹಿಪ್ ಹಾಪ್ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ಗೆಲ್ಲಲ್ಲು ಯಶಸ್ವಿಯಾಗಿದ್ದರು 

ಜೋಯಾ ಅಖ್ತರ್ ನಿರ್ದೆಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ನಟಿ ಆಲಿಯಾ ಭಟ್ ಬಣ್ಣ ಹಚ್ಚಿದ್ದರು.