ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ’ಗ್ರಾಮಾಯಣ’ ಚಿತ್ರತಂಡ ಭೇಟಿ

ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ’ಗ್ರಾಮಾಯಣ’ ಚಿತ್ರತಂಡ ಭೇಟಿ 'Gramayan' film team visits Sri Lakshmi cinema in Koppal

  ಕೊಪ್ಪಳ  09: ರಾಜ್ಯಾದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ’ಗ್ರಾಮಾಯಣ’ ಚಿತ್ರದ ಪ್ರಚಾರದ ಅಂಗವಾಗಿ ನಾಯಕ ನಟ ವಿನಯ್ ರಾಜ್‌ಕುಮಾರ್ ಹಾಗೂ ಚಿತ್ರದ ನಿರ್ದೇಶಕ, ಚಿತ್ರತಂಡ ಇಂದು ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ಚಿತ್ರಮಂದಿರಕ್ಕೆ ಆಗಮಿಸಿದ ವಿನಯ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಗೂ ಘೋಷಣೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು. ಚಿತ್ರ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರೊಂದಿಗೆ ಉದ್ದೇಶಿಸಿ ಮಾತನಾಡಿ  ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಮೆಚ್ಚುಗೆಗೆ ಕೃತಜ್ಞತೆ ಸಲ್ಲಿಸಿದರು.

ಉತ್ತಮ ಕಥೆ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಒಳಗೊಂಡಿರುವ ’ಗ್ರಾಮಾಯಣ’ ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸಿ ಬೆಂಬಲಿಸುವಂತೆ ಮನವಿ ಮಾಡಿದರು.ಚಿತ್ರವನ್ನು ಮತ್ತೆ ಮತ್ತೆ ನೋಡಿ ಬೆಂಬಲಿಸುವಂತೆ ಮನವಿ ಮಾಡಿದ ಅವರು ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರಾದ ವಿಶ್ವನಾಥ್ ಮಹಾಂತಯ್ಯನ ಮಠ, ವೀರೇಶ್ ಮಹಾಂತಯ್ಯನ ಮಠ, ಹಿರಿಯ ಸಾಹಿತಿ ಹಾಗು ಚಲನಚಿತ್ರ ನಿರ್ಮಾಪಕ ಡಾ. ಮಹಾಂತೇಶ್ ಮಲ್ಲನಗೌಡರ,

ಶಿವಮೂರ್ತಯ್ಯ ಮಹಾಂತಯ್ಯನ ಮಠ, ಚಿತ್ರಮಂದಿರದ ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿ ಮಠ,ಚಿತ್ರತಂಡದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.ಬಾಕ್ಸ್‌ ಮಾಡಿ :ಶ್ರೀ ಲಕ್ಷ್ಮಿ ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳು ವಿನಯ್ ರಾಜ್‌ಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಸಂಭ್ರಮಿಸಿದರು. ಚಿತ್ರತಂಡದ ಭೇಟಿ ಚಿತ್ರಮಂದಿರದ ವಾತಾವರಣವನ್ನು ಇನ್ನಷ್ಟು ಉತ್ಸಾಹಭರಿತಗೊಳಿಸಿತು. ಒಟ್ಟಾರೆಯಾಗಿ, ’ಗ್ರಾಮಾಯಣ’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ಚಿತ್ರತಂಡ ನೀಡಿದ ಭೇಟಿ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣವಾಗಿ ಪರಿಣಮಿಸಿತು.