ಬೆಳಗಾವಿ: 'ಕೀಳರಿಮೆ ತೆಗೆದು ಹಾಕಿ, ಹೊಸ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಿ'

ಲೋಕದರ್ಶನ ವರದಿ

ಬೆಳಗಾವಿ 30:  ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಯುವಕರಿಗೆ  ಮೋಬೈಲ್ ರಿಪೇರ ಮತ್ತು ಸವರ್ಿಸ್ 30 ದಿನಗಳ ಉಚಿತ  ತರಬೇತಿಯನ್ನು  ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭವು ದಿ.30ರಂದು ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ, ನಗರ ಅಂಚೇ ಇಲಾಖೆ ಮಾರುತಿ ಗಲ್ಲಿ ಬೆಳಗಾವಿಯ ಪೋಸ್ಟಮಾಸ್ಟರ ಶ್ರೀನಿವಾಸ ಚೌವ್ಹಾನ ಇವರು ಮಾತನಾಡುತಾ, ತಾವೆಲ್ಲ 30 ದಿನಗಳ ತರಬೇತಿಯನ್ನು ಪಡೆದಿದ್ದಿರಿ, ತರಬೇತಿಯ ಅವಧಿಯಲ್ಲಿ ತಾವುಗಳು  ನಾನಾ ರೀತಿಯ ಮೋಬೈಲ್ ರಿಪೇರ ಮತ್ತು ಸವರ್ಿಸ್ನ ಜ್ಞಾನವನ್ನು ಕಲಿತಿರುವಿರಿ, ನಿವೂ ಮೋದಲು ನಿಮ್ಮಲಿರುವ ಕಿಳರಿಮೇಯನ್ನು ತೆಗೆದು ಹಾಕಿ ಇರುವ ಅವಕಾಶಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಿ, ತರಬೇತಿಯಲ್ಲಿ ತಿಳಿಸಿದ ಎಲ್ಲ ವಿಷಯಗಳನ್ನು ನಿಮ್ಮ ನಿಮ್ಮ ಕೆಲಸಕಾರ್ಯಗಳಲ್ಲಿ  ತೋಡಗಿಸಿಕೊಳ್ಳಿ, ಹಾಗೂ ಹೊಸ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಿ ಇದರಿಂದ  ನಿಮ್ಮ ಗ್ರಾಹಕರು ಹೆಚ್ಚುವರು. ಹಾಗೂ ಆದಾಯವನ್ನು ಸಹ ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳುವಿರಿ. ಹಾಗೂ ಕಲಿತಿರುವುದನ್ನು ಇಲ್ಲಿಯೇ ಬಿಡದೇ ಬೇರೆಯವರಿಗೂ ಕೂಡಾ ತಿಳಿಸಿರಿ ಇದರಿಂದ ನಿಮ್ಮ  ಜ್ಞಾನವು ಸಹ ಬೆಳೆಯುತ್ತದೆ. 

ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರಮೇಶ ಕುಲೊಳ್ಳಿ ಇವರು ಮಾತನಾಡುತ್ತಾ, ತಾವೆಲ್ಲರೂ ಸಂಸ್ಥೆಯಲ್ಲಿ  ಮೋಬೈಲ್ ರಿಪೇರ ಮತ್ತು ಸವರ್ಿಸ್ ತರಬೇತಿಯನ್ನು ಪಡೆದಿರುವಿರಿ,  ತಾವೆಲ್ಲರೂ ಸ್ವ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸಬೇಕೆಂದರೇ, ತಾವೆಲ್ಲರೂ ಕಾಲ ಹರಣ ಮಾಡದೇ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಹಾಗೂ ಅದರರೊಂದಿಗೆ ಉತ್ತಮ ಮಾತುಗಾರರಾಗಿ, ಎಕೆಂದರೆ ಎಲ್ಲಾ ರೀತಿಯ ಗ್ರಾಹಕರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ, ಅವರೆಲ್ಲರನ್ನೂ ಸರಿದುಗಿಸಿಕೊಂಡು ಹೊಗಬೇಕಾದರೆ ನಿವು ಒಳ್ಳೆಯ ಮಾತು ಬಲ್ಲವರಾಗಿರಬೇಕು, ಎಂದು ತಿಳಿಸಿ ಧೈರ್ಯದಿಂದ ಕಾರ್ಯ ನಿರ್ವಹಿಸಿ, ಸ್ವಾವಲಂಬಿಗಳಾಗಿ ಬೆಳೆಯಿರಿ ಎಂದು ಶುಭಹಾರೈಸಿದರು.

       ಸಂಸ್ಥೆಯ ನಿದರ್ೇಶಕ ಲಕ್ಷ್ಮಿಕಾಂತ ಪಾಟೀಲ ಇವರು ಮಾತನಾಡುತ್ತಾ, ಸಂಸ್ಥೆಯಲ್ಲಿ ತರಬೇತಿ ಪಡೆದರೆ ಮಾತ್ರ ಸಾಲದು, ಪಡೆದಿರುವ ತರಬೇತಿಯನ್ನು ಆದಾಯ ಉತ್ಪನ್ನ  ಚಟುವಟಿಕೆಯಾಗಿಸಿಕೊಳ್ಳಿ. ಅನಾವಶ್ಯವಾಗಿ ಹಣವನ್ನು ದುಂದುವೆಚ್ಚ ಮಾಡದೇ, ಅವಶ್ಯವಿರುವಷ್ಟೆ ಹಣವನ್ನು ಬಂಡವಾಳವಾಗಿ ಬಳಸಿ, ಅಂದಾಗ ಮಾತ್ರ ನಾವು ತರಬೇತಿ ನಿಡಿರುವುದು ಸಾರ್ಥಕವಾಗುತ್ತದೆ. ಆದ ಕಾರಣ ಉತ್ತಮ ರೀತಿಯಲ್ಲಿ  ಸ್ವ ಉದ್ಯೋಗ ಮಾಡಿ. ಗಳಿಸಿದ ಆದಾಯವನ್ನು ಉಳಿತಾಯವು ಮಾಡಿ, ಹಾಗೂ ಸಂಸ್ಥೆಯೊಂದಿಗೆ ಸಂಪರ್ಕದಲಿರಿ  ಎಂದು ತಿಳಿಸಿದರು. 

       ಕೊನೆಯದಾಗಿ ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು,  ನಂತರ ಮುಖ್ಯ ಅಥಿತಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ಇವರು ಸ್ವಾಗತಿಸಿದರು, ಹಾಗೂ ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಕುಬಸದ ಅಬ್ಬುಲ್ ರಜಾಕ ಉಪಸ್ಥಿತರಿದ್ದರು.