'ಗಾಂಧಿನಗರದ ಹಣಕಾಸು ಸೇವಾ ಕೇಂದ್ರ' ಕಾರ್ತಿ ಚಿದಂಬರಂ ಬಿಜೆಪಿ ಸಂಸದನ ವಾಗ್ವಾದ

ನವದೆಹಲಿ, ಡಿ 11 :           ಲೋಕಸಭೆಯಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಹಲವು ವಿಚಾರಗಳಲ್ಲಿ ಸಣ್ಣ ಪ್ರಮಾಣದ ವಾಗ್ವಾದ ವಾಗಿದ್ದು, ಗುಜರಾತ್ನ ಗಾಂಧಿನಗರದ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಜಿಫ್ಟ್ ಸಿಟಿ) ಯಲ್ಲಿ  ಸ್ಥಾಪಿಸಲಾದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ ಬಗ್ಗೆ ಮಾತಿನ ಚಕಮಕಿ ನಡೆಯಿತು. 

2019 ರ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರದ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಕಾರ್ತಿ ಚಿದಂಬರಂ ಅವರು ಗಾಂಧಿನಗರ ಕೇಂದ್ರವು ಹೆಚ್ಚು ಅಪ್ರಾಯೋಗಿಕವಾಗಿದೆ ಎಂದು ಹೇಳಿದರು. 

"ಯಾವುದೇ ವೃತ್ತಿಪರರು ಶುಷ್ಕ ಹವಾಗುಣ ಹೊಂದಿರುವ ಗಾಂಧಿನಗದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ ..." ಎಂದ ಅವರು, ಮುಂಬಯಿಯಂತಹ ನಗರವು ಇಂತಹ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಯೋಗ್ಯವಾಗಿದೆ ಎಂದರು. 

ಕಾತರ್ಿ ಮಾತಿಗೆ ಕಿಡಿಕಾರಿದ ಬಿಜೆಪಿ ಸದಸ್ಯ ಪಿ ಪಿ ಚೌಧರಿ, ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧೀಜಿಯವರ ಆದರ್ಶಗಳ ಬಗ್ಗೆ ಮಾತನಾಡುತ್ತದೆ, ನಂತರ ಮದ್ಯದ ಬಗ್ಗೆ ಮಾತನಾಡುತ್ತದೆ ಇದನ್ನು ಖಂಡಿಸಬೇಕಾಗಿದೆ ಎಂದು ಹೇಳಿದರು. 

ಮಸೂದೆಯು ಗೇಮ್ ಚೇಂಜರ್ ಆಗಿದ್ದು, ಅದರ ಪ್ರಭಾವ ಅಪಾರವಾಗಿರುತ್ತದೆ ಎಂದು ಹೇಳಿದ ಚೌಧರಿ, ಭಾರತದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳಲ್ಲಿ ಹಣಕಾಸು ಸೇವಾ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಮತ್ತು ನಿಯಂತ್ರಿಸಲು ಪ್ರಾಧಿಕಾರವನ್ನು ಸ್ಥಾಪಿಸಲು ಮಸೂದೆ ಒದಗಿಸುತ್ತದೆ. 

ಪ್ರಸ್ತುತ, ಐಎಫ್ಎಸ್ಸಿಯಲ್ಲಿನ ಬ್ಯಾಂಕಿಂಗ್, ಬಂಡವಾಳ ಮಾರುಕಟ್ಟೆಗಳು ಮತ್ತು ವಿಮಾ ಕ್ಷೇತ್ರಗಳನ್ನು ಆರ್ಬಿಐ, ಸೆಬಿ ಮತ್ತು ಐಆರ್ಡಿಎಐ ನಂತಹ  

ನಿಯಂತ್ರಕರು ನಿಯಂತ್ರಿಸುತ್ತಾರೆ. 

ವಿಶೇಷ ಆರ್ಥಿಕ ವಲಯಗಳ ಕಾಯ್ದೆ 2005 ರ ಅಡಿಯಲ್ಲಿ ಸ್ಥಾಪಿಸಲಾದ ಎಲ್ಲಾ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳಿಗೆ (ಐಎಫ್ಎಸ್ಸಿ) ಈ ಮಸೂದೆ ಅನ್ವಯವಾಗುತ್ತದೆ. 

ಗಾಂಧಿನಗರದ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಜಿಫ್ಟ್ ಸಿಟಿ) ನಲ್ಲಿ ಭಾರತದ ಮೊದಲ ಐಎಫ್ಎಸ್ಸಿ ಸ್ಥಾಪಿಸಲಾಗಿದೆ. 

ಐಎಫ್ಎಸ್ಸಿಗಳು ಭಾರತೀಯ ಕಾರ್ಪೋರೇಟ್ಗಳಿಗೆ ಜಾಗತಿಕ ಹಣಕಾಸು ಮಾರುಕಟ್ಟೆಗಳಿಗೆ ಸುಲಭವಾಗಿ ಪ್ರವೇಶವನ್ನು ಒದಗಿಸಲು ಮತ್ತು ಭಾರತದಲ್ಲಿನ ಹಣಕಾಸು ಮಾರುಕಟ್ಟೆಗಳ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಿ ಮತ್ತು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. 

ಟೋಕಿಯೊ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಲಂಡನ್ ಸೇರಿದಂತೆ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳು ಇಂತಹ ಹಣಕಾಸು ಕೇಂದ್ರಗಳನ್ನು ಹೊಂದಿವೆ. 

"ನಾವು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ದೊಡ್ಡ ಬಳಕೆದಾರರಾಗಿರುವುದರಿಂದ ಅಂತಹ ಕೇಂದ್ರವನ್ನು ಮೊದಲು ಸ್ಥಾಪಿಸಬೇಕಾಗಿತ್ತು. ಈ ಮಸೂದೆ ಜಾರಿಗೆ ಬರದಿದ್ದರೆ 2025 ರ ವೇಳೆಗೆ ದೇಶವು 120 ಶತಕೋಟಿ ಡಾಲರ್ ನಷ್ಟ ಎದುರಿಸಬೇಕಾಗುತ್ತಿತ್ತು ಎಂದು ಅವರು ಹೇಳಿದರು.