'ಕಾಲಕ್ಕನುಗುಣವಾಗಿ ರೈತ ಜಾಗೃತಿ ಅವಶ್ಯ

ಲೋಕದರ್ಶನ ವರದಿ

ಯಲಬುರ್ಗಾ 23: ರೈತರು ಕಾಲಕ್ಕೆ ಅನುಗುಣವಾಗಿ ಯಾವುದೇ ರೀತಿಯ ಬದಲಾವಣೆ ಮತ್ತು ಜಾಗೃತಿಹೊಂದದೇ ಇರುವುದೇ ಇಂದಿಗೂ ರೈತ ಶೋಷಣೆಯ ವ್ಯಕ್ತಿಯಾಗಿರುವದು ವಿಪಚಿರ್ಾಸ ಎಂದು ಜಿಪಂ ಮಾಜಿ ಸದಸ್ಯ ಸಿಎಚ್ ಪಾಟಿಲ್ ವಿಷಾದ ವ್ಯಕತಪಡಿಸಿದರು.

ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ರೈತನಾಯಕ ತಿರುಗುಣಪ್ಪ ಬೇಟಗೇರಿಯವರ ಶ್ರದ್ಧಾಂಜಲಿ ಹಾಗೂ ನೂತನ ರೈತಸೇನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ಮಾಜಿ ತಾಪಂ ಅಧ್ಯಕ್ಷ ಸಂಗಪ್ಪ ಬಂಡಿ ಯುವಮುಖಂಡ ಅಂದಾನಗೌಡ ಪಾಟೀಲ್ ಮತ್ತು ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದ್ಮಠ ಕನರ್ಾಟಕ ಜನಕಲ್ಯಾಣ ವೇದಿಕೆಯ ರಾಜ್ಯಾ ಯುವ ಘಟಕದ ಅದ್ಯಕ್ಷ ಸಶರಣಪ್ಪ ಪಾಟಿಲ್ ಮಾತನಾಡಿ ಇಂದು ರೈತರು ತಮ್ಮ ಮೌಲ್ಯ ಮತ್ತು ಸಿದ್ಧಾಂತಗಳನ್ನು ಮರೆತರೆ ಆಳುವರು ತಮಗಿಸ್ಟಬಂದಂತೆ ರೈತರನ್ನು ಬಳಸಿ ಬಿಸಾಕುತ್ತಿದ್ದಾರೆ, ಇನ್ನಾದರೂ ರೈತರು ಜಾಗೃತರಾಗಬೇಕೆಂದರು, ಕಾಯ್ಕ್ರಮದ ಅದ್ಯಕ್ಷತೆಯನ್ನು ತಾಲೂಕಾ ಅಧ್ಯಕ್ಷ ಪರಸಪ್ಪ ಬಲಕುಂದಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರವೇ ಯುವಸೇನೆ ಜಿಲ್ಲಾ ಅಧ್ಯಕ್ಷ ಬಸವರಾಜ ಹಳ್ಳಿ ಹ್ಮಚ್ಚೀರಪ್ಪ ತಮ್ಮನಾಳ ಶೇಖಪ್ಪ ಬಲಕುಂದಿ ಅಂದಪ್ಪ ಕುರಿ ಇನ್ನಿತರರು ಬಾಗವಹಿಸಿದ್ದರು.