'ವಿಕಲಚೇತನರು ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು'

ಲೋಕದರ್ಶನ ವರದಿ

ಬೆಳಗಾವಿ 25:  ಆತ್ಮವಿಶ್ವಾಸದ ಕೊರತೆಯಿಂದ ಬಹಳಷ್ಟು ವಿಕಲಚೇತನರಿಗೆ ಅಂದುಕೊಂಡದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಅನುಕಂಪಕ್ಕಿಂತ ಅವಕಾಶಗಳನ್ನು ಒದಗಿಸಿಕೋಟ್ಟು ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ ಎಂದು ನೆಹರು ಯುವ ಕೇಂದ್ರದ ನಿವೃತ್ತ್ ಜಿಲ್ಲಾ ಯುವಸಮನ್ವಯ ಅಧಿಕಾರಿ ಎಸ್.ಯು.ಜಮಾದಾರ  ಅಭಿಪ್ರಾಯಪಟ್ಟರು. 

ಬೆಂಗಳೂರಿನ ದಿ ಅಸೋಸಿಯೇಷನ ಆಪ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ, ಇವರ ಸಂಯುಕ್ತಾಶ್ರಯದಲ್ಲಿ  ನಗರದ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ವಿಕಲಚೇತರಿಗೆ ಉದ್ಯೋಗ ದೊರಕಿಸಿಕೊಡುವದಕ್ಕಾಗಿ ಆಯೋಜಿಸಿದ್ದ ಉದ್ಯೋಗಾಧಾರಿತ ಆಯ್ಕೆ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇನ್ನೊರ್ವ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯವಾದಿ ನದಾಫ  ಮಾತನಾಡಿ  ಆಥರ್ಿಕ ಪ್ರಗತಿ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿಸಬಲ್ಲದು, ವಿಕಲಚೇತನರಲ್ಲಿಯೂ ವಿಶಿಷ್ಟ ಪ್ರತಿಭೆ ಹಾಗೂ ಸಾಮಥ್ರ್ಯಗಳಿವೆ ಅವುಗಳನ್ನು ಗುರುತಿಸಿ ಪ್ರೊತ್ಸಾಹಿಸುವ ಅಗತ್ಯತೆ ಇದೆ ಎಂದರು. ಸಂಸ್ಥೆಯ ಸಂಯೋಜಕರಾದ ಎಂ.ಎಸ್. ಚೌಗಲಾ ಮಾತನಾಡಿ ವಿಕಲಚೇತನ ಮಗುವಿನ ಲಾಲನೆ ಪಾಲನೆ ಪಾಲಕರಿಗೆ ಹೊರೆಯಾಗುವದಿಲ್ಲ ಆದರೆ ಮುಂದಿನ ದಿನಗಳಲ್ಲಿ ಎಲ್ಲರೂ ಸ್ವಾವಲಂಬಿಗಳಾಗಿ ಅವರ ಬದುಕಿನ ದಾರಿಯನ್ನು ಕಂಡುಕೋಳ್ಳುವ ಅನಿವಾರ್ಯತೆ ಇದೆ.

ಇಂತಹ ಆಯ್ಕೆ ಶಿಬಿರಗಳ ಪ್ರಯೋಜನ ಪಡೆದುಕೊಂಡು ಮುನ್ನಡೆಯಬೆಕೆಂದರು. ಸಂಸ್ಥೆಯ ಗೌರವ ಕಾರ್ಯದಶರ್ಿ ವೈಜಯಂತಿ ಚೌಗಲಾ, ಸದಸ್ಯರಾದ ಶಶೀಕಲಾ ಮಾಳಖೇಡ ಉಪಸ್ಥಿತರಿದ್ದರು. 

ಸಂಯೋಜಕರಾದ ಬಾಬು ಹೊನೋಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. 

ಮಲ್ಲಪ್ಪಾಮಾನಗಾಂವಿ ನಿರೂಪಿಸಿದರು ಎಪಿಡಿ ಸಂಸ್ಥೆಯ ಸಂತೋಷ ಹಳಮನಿ ವಂದಿಸಿದರು. ಕಾರ್ಯಕ್ರಮದ ಪ್ರಯೋಜನವನ್ನು 40 ವಿಕಲಚೇತನರು ಪಡೆದುಕೊಂಡರು.