ನರಗುಂದದಲ್ಲಿ ನಡೆದ ಹೋರಾಟದ ಕಥೆ ಒಳಗೊಂಡ ‘ಧೀರ ಭಗತ್ ರಾಯ್‌’

'Dheera Bhagat Roy' is a story of the struggle in Naragunda

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕಾಟೇರ’ ಮಾದರಿಯ ನಮ್ಮ ಮಣ್ಣಿನ (ಉತ್ತರ ಕರ್ನಾಟಕ) ಸೊಗಡಿನ, ಹೋರಾಟದ ಕಥೆ ಒಳಗೊಂಡ ‘ಧೀರ ಭಗತ್ ರಾಯ್‌’ ಸಿನಿಮಾ ಈ ಶುಕ್ರವಾರ (ಡಿ. 6) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್, ಹಾಡುಗಳಿಂದ ಪ್ರಶಂಸೆ ಪಡೆದಿರುವ ಈ ಚಿತ್ರದ ನಾಯಕನಾಗಿ ರಂಗಭೂಮಿ ಹಿನ್ನೆಲೆಯಿಂದ ಬಂದ ರಾಕೇಶ್ ದಳವಾಯಿ ಅಭಿನಯ ಮಾಡಿದ್ದಾರೆ. ಕರ್ಣನ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ 1970ರ ದಶಕದಲ್ಲಿ ಜಾರಿಗೆ ಬಂದ ಭೂಮಿ ಸುಧಾರಣೆ ಕಾಯ್ದೆಯಿಂದ ನರಗುಂದದಲ್ಲಿ ಒಂದಷ್ಟು ರೈತರಿಗೆ ಭೂಮಿ ಸಿಗುತ್ತದೆ. ಆದರೆ ಅಲ್ಲಿನ ಭೂ ಮಾಲೀಕ ಜನರಿಗೆ ಸರಿಯಾಗಿ ಸಿಗಲು ಬಿಡದೆ ಜಮೀನನ್ನು ಕಬ್ಜ ಮಾಡಿರುತ್ತಾರೆ. ಅದನ್ನು ಚಿತ್ರ ನಾಯಕ ಜನರಿಗೆ ತಲುಪಿಸಲು ನಡೆಯುವ ಹೋರಾಟ, ಸಂಘರ್ಷ ಚಿತ್ರದ ಕಥಾವಸ್ತು. ರಾಕೇಶ್ ದಳವಾಯಿ ಇದರಲ್ಲಿ ಲಯರ್ ಪಾತ್ರ ನಿರ್ವಯಿಸಿದ್ದಾರೆ. ಚಿತ್ರದ ನಾಯಕಿಯಾಗಿ ಸುಚರಿತಾ ಸಹಾಯರಾಜ್ ನಟಿಸಿದ್ದು, ಇವರಿಲ್ಲಿ ಸಾವಿತ್ರಿ ಎಂಬ ಪಾತ್ರ ಮಾಡಿದ್ದು, ತುಂಬಾ ಜನಕ್ಕೆ ಸ್ಫೂರ್ತಿಯಾಗಲಿದೆ ಎನ್ನಬಹುದು. ಅಂದಂಗೆ ಇದು ಸುಚರಿತಾ ಅವರ ಮೊದಲ ಸಿನಿಮಾ. 

ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್‌ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್‌’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಒಳಗೊಂಡ ಈ ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್‌.ಎಂ ಸಂಕಲನವಿದೆ. ಶ್ರೀ ಓಂ ಸಿನಿ ಎಂಟರ್ಟೈನರ್ಸ್‌ ಹಾಗೂ ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಅಂದಂಗೆ ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್‌ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.