'ದೃಢ ನಿರ್ಧಾರದಿಂದ ವೃತ್ತಿ ಆಯ್ಕೆ ಮಾಡಿಕೊಳ್ಳಿ'

ಲೋಕದರ್ಶನ ವರದಿ

ಬೆಳಗಾವಿ 01:  ಜೈನ ಹೆರಿಟೇಜ್ ಶಾಲೆಯು ತನ್ನ ಸಂಪ್ರದಾಯದಂತೆ, ಮಕ್ಕಳು ತಮ್ಮ ಇಚ್ಛೆಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರೋತ್ಸಾಹಿಸುವ ಮಂಜೂಣಿಯಲ್ಲಿದ್ದು ಶಾಲಾ ಪ್ರಾಂಗಣದಲ್ಲಿ 10ನೇ ಹಾಗೂ 12ನೇ ವರ್ಗದ ವಿದ್ಯಾರ್ಥಿಗಳಿಗೆ ಕರಿಯರ್ ಕೌನ್ಸ್ಲಿಂಗ್ ಕಾರ್ಯಕ್ರಮವನ್ನು ಇತ್ತಿಚೆಗೆ ಹಮ್ಮಿಕೊಂಡಿತ್ತು.

ಈ ಪ್ರಸಂಗವು ಪರಿಣಿತರಾಗಿರುವ ನಿದರ್ೇಶಕಿ ಶ್ರದ್ಧಾ ಖಟವಟೆ, ಪ್ರಾಶುಂಪಾಲ ಮನಜೀತ ಜೈನ, ಮುಖ್ಯ ಆಡಳಿತಾಧಿಕಾರಿ ಆಮಿ ದೋಶಿ ಹಾಗೂ ವಿಜ್ಞಾನ ಸಂಯೋಜನಾಧಿಕಾರಿ ಆಶೀಷ ಪಾಟೀಲ ರನ್ನು ಸ್ವಾಗತಿಸುವ ಹಾಗೂ ಗೌರವಿಸುವ ಕಾರ್ಯದೊಂದಿಗೆ ಆರಂಭಗೊಂಡಿತು.

ಏರೋಸ್ಪೇಸ್ ಪ್ರೊಸೆಸಿಂಗ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ದ ಸಹಾಯಕ ಎನ್. ಶಂಕರನಾರಾಯಣನ್ ಪ್ರಥಮ ವಕ್ತಾರರಾಗಿ ಅಭಿಪ್ರೇರಣಾ ಭಾಷಣ ಪ್ರಾರಂಭಿಸಿ, ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ವಿದ್ಯಾಥರ್ಿಗಳೊಡನೆ ಮುಕ್ತ ಚಚರ್ೆ ಮಾಡಿದರು.

ದ್ವಿತೀಯ ವಕ್ತಾರ ಲೆಪ್ಟನಂಟ್ ಕರ್ನಲ್ ಅಭಯ ಅವಾಸ್ತಿ ಮಾತನಾಡುತ್ತಾ, ವಿದ್ಯಾಥರ್ಿಗಳ ಮನದ ಗೊಂದಲಗಳನ್ನು ದೂರಿಕರಿಸಿ, ನಾನು ಇದನ್ನು ಮಾಡಬಲ್ಲೆನೆಂಬ ದೃಢ ನಿರ್ಧಾರದಿಂದ ವೃತ್ತಿಯ ಆಯ್ಕೆ ಮಾಡಿಕೊಳ್ಳಬೇಕೆಂದು ಉಪದೇಶಿಸಿದರು. ಭಾರತೀಯ ರಕ್ಷಣಾ ಕ್ಷೇತ್ರದಲ್ಲಿನ ಸೇವೆಗಳ ಕುರಿತೂ ಮಾರ್ಗದರ್ಶನ ಮಾಡಿದರು.

ಬೆಳಗಾವಿಯ ಐ.ಸಿ.ಎಸ್.ಐ. ಸುಧೀಂದ್ರ ಗಾಳಿ ನಂತರದ ವಕ್ತಾರರಾಗಿ ಮಾತನಾಡಿದರು. ಮುಕ್ತ ಚಚರ್ೆಯಲ್ಲಿ ಅವರು ಕಂಪನಿ ಸೆಕ್ರೆಟರಿ ವೃತ್ತಿಯ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಅಂತಿಮವಾಗಿ ವಿನಾಯಕ ಅಸುಂಡಿ ಸಿ.ಎ., ಗುರಿಗಳನ್ನು ಹೇಗೆ ನಿರ್ಧರಿಸಬೇಕು ಹಾಗೂ ಅವುಗಳನ್ನು ಹೇಗೆ ಸಾಧಿಸಬೇಕೆಂದು ವಿವರಿಸಿದರು. ವಕ್ತಾರರುಗಳ ಭಾಷಣಗಳ ಮುಂದುವರೆದು ಎಫ್.ಎ.ಕ್ಯೂ. ಕರಿಯರ್ ಕೌನ್ಸೆಲ್ಲಿಂಗ್ ಜರುಗಿತು. ವಿದ್ಯಾಥರ್ಿಗಳು ವಕ್ತಾರರುಗಳಿಗೆ ಪ್ರಶ್ನೆಗಳನ್ನು ಹೇಳಿ ಉತ್ತರಗಳನ್ನು ಪಡೆದುಕೊಂಡರು. 

ಕಾರ್ಯಕ್ರಮದ ಮುಕ್ತಾಯದಲ್ಲಿ ಪ್ರಾಶುಂಪಾಲ ಮನಜೀತ ಜೈನ, ಕರಿಯರ್ ಕೌನ್ಸೆಲ್ಲಿಂಗ್ದ ಮೇಲೆ ತಮ್ಮ ಅಭಿಪ್ರಾಯ ನೀಡಿ, ಜಗತ್ತಿನಲ್ಲಿ ಶ್ರೇಷ್ಠ ಸಾಧಕರ ಜೀವನ ಪಥದ ಬಗ್ಗೆ ಬೆಳಕು ಬೀರಿದರು.

ಈ ಸಭೆಯ ಬಹಳಷ್ಟು ಮಾಹಿತಿ ಪೂರೈಸುವಂತೆ ಪ್ರಸಂಗವಾಗಿದ್ದು, ವಿದ್ಯಾಥರ್ಿಗಳಿಗೆ ಕರಿಯರ್ ಕೌನ್ಸ್ಸ್ಲಿಂಗ್ನ್ನು ಪರಿಚಯಿಸಿ ತಾವೆಲ್ಲಿ ಇದ್ದೇವೆ ಎಂಬುದನ್ನು ಅರಿಯಲು ಸಹಾಯಕವಾಯಿತು